ಜ್ಯೋತಿರ್ಲಿಂಗಗಳ ಪುಣ್ಯದರ್ಶನದ ಸಮಾರೋಪ ಸಮಾರಂಭ

589
Share

 

ಚಾಮರಾಜನಗರ-ವೈಭವಯುತ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನಕ್ಕೆ ತೆರೆ ಚಾಮರಾಜನಗರ: ಮಾನವನ ಅಂತರಂಗದ ಶಕ್ತಿ ,ವಿಶ್ವಾಸ, ಆತ್ಮಸ್ಥೈರ್ಯ ಹಾಗೂ ಶಾಂತಿ ನೆಮ್ಮದಿ ದೊರಕಲು ಪ್ರತಿಯೊಬ್ಬರು ರಾಜಯೋಗ ಶಿಕ್ಷಣ ಪಡೆದುಕೊಳ್ಳುವುದರಿಂದ ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ ಎಂದು ಮೈಸೂರು ರಾಜಯೋಗ ರಿಟ್ರೀಟ್ ಸೆಂಟರ್ ನ ಪ್ರಾಂಶುಪಾಲರು ಹಾಗೂ ಎಸ್ ಬಿ ಎಂನ ನಿವೃತ್ತ ವ್ಯವಸ್ಥಾಪಕರಾದ ರಾಜಯೋಗಿ ಬ್ರಹ್ಮಾಕುಮಾರ ರಂಗನಾಥಶಾಸ್ತ್ರೀಜೀಯವರು ಅಭಿಪ್ರಾಯ ಪಟ್ಟರು

ಅವರು ಚಾಮರಾಜೇಶ್ವರ ದೇವಾಲಯದ ಮುಂಭಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಗಡಿಭಾಗವಾದ ಚಾಮರಾಜನಗರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನದ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ರೂಪಿಸಿ ಲಕ್ಷಾಂತರ ಜನ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಮಾಡಿ ಪುನೀತರಾಗಿರುವುದು ಬಹಳ ಸಂತೋಷವೆಂದು ತಿಳಿಸಿ ,ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಇಡೀ ವಿಶ್ವದ 157ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು 60,000ಕ್ಕೂ ಹೆಚ್ಚು ಸಹೋದರಿಯರ ನೇತೃತ್ವದಲ್ಲಿ ಎಲ್ಲಾ ಕೇಂದ್ರಗಳು ನಿರ್ವಹಣೆಯಾಗುತ್ತಿರುವುದು ಹಾಗೂ ವಿಶ್ವದ ಶಾಂತಿಗಾಗಿ ಪ್ರತಿನಿತ್ಯ ಧ್ಯಾನ ಹಾಗೂ ಮಾನವೀಯ ಮೌಲ್ಯಗಳನ್ನು ವಿಶ್ಕಲ್ಯಾಣಕ್ಕಾಗಿ ಆತ್ಮವಿಶ್ವಾಸದ ಮೂಲಕ, ನಕರಾತ್ಮಕತೆಯನ್ನುಸಕಾರಾತ್ಮಕತೆಯಲ್ಲಿ ಚಿಂತನೆಗಳನ್ನು ಮೂಡಿಸಿಕೊಂಡು ಜೀವನವನ್ನು ಉನ್ನತಿಗೊಳಿಸಿಕೊಳ್ಳುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಆತ್ಮಜ್ಞಾನದಿಂದ ಪರಮ ಜ್ಯೋತಿ ಬೆಳಕು ಜ್ಞಾನರೂಪದಲ್ಲಿ ಬೆಳಗಿ ಸತ್ಯದರ್ಶನವನ್ನು ಅನುಭೂತಿ ಮಾಡಲು ಸಕಾಲವಾಗಿದೆ. ಸತ್ಯದರ್ಶನದಿಂದ ಮನಸ್ಸಿನಲ್ಲಿ ಸದಾಕಾಲ ಶಾಂತಿ ಸಮಾಧಾನ ಇರುತ್ತದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೇವಾ ಭಾರತೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ರಮೇಶ್ ಗುರೂಜೀ ನೆರವೇರಿಸಿ, ದ್ವಾದಶ ಲಿಂಗಗಳು ಶಿವನ ಕರ್ತವ್ಯಗಳನ್ನುದರ್ಶನ ಮಾಡಿಸುವ ಹಾಗೂ ಪರಮ ಪವಿತ್ರವಾದ ಕ್ಷೇತ್ರಗಳು ಭಾರತದ ಎಲ್ಲ ದಿಕ್ಕುಗಳಲ್ಲೂ ಶಿವನ ದರ್ಶನವಾಗುತ್ತದೆ ಪ್ರತಿ ಗ್ರಾಮಗಳಲ್ಲೂ ಮನೆಮನೆಗಳಲ್ಲೂ ಶಿವನ ಆರಾಧನೆ ನಡೆಯುತ್ತಿದ್ದು ಶಿವ ಧ್ಯಾನದಿಂದ ಮನುಷ್ಯ ಸ್ವರ್ಗ ಸುಖವನ್ನು ಪಡೆಯುತ್ತಾನೆ ದ್ವಾದಶ ಲಿಂಗಗಳ ದರ್ಶನ ಮೊಹಹೋನ್ನತವಾದದ್ದು ಸೋಮನಾಥ, ಶ್ರೀಶೈಲ ಕೇದಾರನಾಥ , ವಾರಣಾಸಿ,ಉಜ್ಜಯಿನಿ ಕ್ಷೇತ್ರಗಳು ಭಾರತೀಯರ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ . ಚಾಮರಾಜನಗರದಲ್ಲಿ ಮೊಟ್ಟ ಮೊದಲ ಬಾರಿಗೆ ದರ್ಶನದ ವ್ಯವಸ್ಥೆ ಮಾಡಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಜನತೆಯ ಪರವಾಗಿ ಹೃದಯಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಿದರು.

ಸಂಸ್ಥೆಯ ಮುಖ್ಯ ಸಂಚಾಲಕರು ಹಾಗೂ ಸ್ವಾಮಿ ವಿವೇಕಾನಂದ ರಾಷ್ಟ್ರ ರಾಜ್ಯ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮಾನವನ ಆತ್ಮ ಸಾಕ್ಷಾತ್ಕಾರದ ಜೀವನವೇ ಶ್ರೇಷ್ಠವಾದದ್ದು. ಮಾನವ ಎಲ್ಲ ಮೋಹಗಳಿಂದ ನಿರ್ಲಿಪ್ತನಾಗಿ ಉನ್ನತಿಯ ಬದುಕನ್ನು ಶಾಂತ ಸ್ಥಿತಿಯ ಚಿಂತನೆಯನ್ನು ಮಾಡಲು ಭಗವಂತನನ್ನು ಯತಾರ್ಥವಾಗಿ ಅರಿತು ನೆನಪು ಮಾಡುವುದೇ ಸಹಜ ರಾಜಯೋಗ ಧ್ಯಾನವಾಗಿದೆ. ಭಗವಂತನ ನೆನಪು ಪ್ರತಿಯೊಬ್ಬರಲ್ಲೂ ಇದ್ದು ತನ್ನ ಆತ್ಮಕ್ಕೆ ಹೆಚ್ಚು ಹೆಚ್ಚು ನೆಮ್ಮದಿಯನ್ನು ನೀಡಿದಾಗ ಪರಿಪೂರ್ಣತೆಯ ವಿಕಾಸವಾಗುವುದು. ಶಿವ ದರ್ಶನವು ನಮ್ಮೆಲ್ಲರಲ್ಲಿಯೂ ಹೊಸತನವನ್ನು ಮೂಡಿಸಿ , ಸತ್ಯವನ್ನು ಅರಿಯಲು ಅವಕಾಶವನ್ನುಂಟು ಮಾಡುತ್ತದೆ ಎಂದು ಸಾಮೂಹಿಕ ರಾಜಯೋಗದ ಅನುಭೂತಿ ಮುಗಿಸಿದರು.
ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ ಸಂಸ್ಥೆಯು ಜನತೆಯಲ್ಲಿ ಆಧ್ಯಾತ್ಮಿಕತೆಯನ್ನು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಕೆ ಆರಾಧ್ಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪ ತಹಶಿಲ್ದಾರರಾದ ಗಿರಿಜಕ್ಕ ನಗರಸಭಾಸದಸ್ಯರಾದ ಮಮತಾ,ನಂಜುಂಡಸ್ವಾಮಿ,ನಾರಾಯಣ ಶೆಟ್ಟಿ, ಸುರೇಶ್ ಎನ್ ಋಗ್ವೇದಿ,ನಟರಾಜ ಹಾಜರಿದ್ದರು. ನಂತರ ಗಡಿನಾಡ ಜನಪದ ಕೋಗಿಲೆಗಳ ಸಾಂಸ್ಕೃತಿಕ ಕಲಾ ವೇದಿಕೆಯ ಅಧ್ಯಕ್ಷರಾದ ಸುರೇಶ್ ನಾಗ್ ರವರು ಭಕ್ತಿಗೀತೆ, ಜನಪದ ಗೀತೆ ಮತ್ತು ಸಂಗೀತ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು


Share