ಬಿಜೆಪಿ-ಕಾಂಗ್ರೆಸ್ ಜಗಳ ದಳಕ್ಕೆ ಲಾಭ

311
Share

ಒಂದೆಡೆ ಕರೋನ ರುದ್ರ ತಾಂಡವವಾಡುತ್ತಿದೆ. ಬಡವ ಬಲ್ಲಿದರೆನ್ನದೆ ಎಲ್ಲಡೆ ತನ್ನದೇ ಮೇಲುಗೈ ಸಾಧಿಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ತನ್ನ ಸ್ವಪ್ರತಿಷ್ಠೆಯಿಂದ ಪಾದಯಾತ್ರೆ ಹಮ್ಮಿಕೊಂಡು ತನ್ನ ಕೈ ಮೇಲೆಂದು ಸಾರಲು ಪ್ರಯತ್ನಿಸುತ್ತಿದೆ.
ಕುರಿ ಕೊಬ್ಬಿದಷ್ಟು ಕುರುಬನಿಗೆ ಲಾಭ ಎನ್ನುವಂತಿದೆ ಆಡಳಿತ ಪಕ್ಷದ ಧೋರಣೆ. ಒಂದೆಡೆ ಕರೋನ ತಡೆಯಲು ದಿನಕ್ಕೊಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಿದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಕಾಂಗ್ರೆಸ್ ಪಕ್ಷದ ಮೇಲೆ ಕ್ರಮ ಕೈಗೊಳ್ಳಲು ಲೆಕ್ಕ ಹಾಕುತ್ತ ಕುಳಿತಿದೆ. ಕಾಂಗ್ರೆಸ್ ಪಕ್ಷವನ್ನು ಪಾತಕರೆನ್ನುವಂತೆ ಕಾಣುವಂತೆ ಯೋಜಿಸುತ್ತದೆಯೇನೋ.
ಇನ್ನು ಕಾಂಗ್ರೆಸ್‌ ಪಕ್ಷವಂತು ವಿರೋದ ಪಕ್ಷವೆಂದರೆ ಆಡಳಿತ ಪಕ್ಷಕ್ಕೆ ಹಿಂಸೆ ಕೊಡುವುದಷ್ಟೆ ಅದರ ಕೆಲಸ. ಅದು ವಿರೋಧ ಪಕ್ಷದ ಜನ್ಮ ಸಿದ್ದ ಹಕ್ಕು ಎನ್ನುವಂತೆ ನಡೆದುಕೊಂಡು ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ. ತನ್ನದೇ ಸರ್ಕಾರ ಇರುವ ಮಹಾರಾಷ್ಟ್ರ , ರಾಜಸ್ಥಾನದಲ್ಲೆಲ್ಲ ಇವರ ಪಾದಯಾತ್ರೆಗಾಗಿಯೆ ಕರೋನ ಸಂಖ್ಯೆ ಜಾಸ್ತಿಯಾಗುತ್ತಿದೆಯಾ ಎಂದು ಒಮ್ಮೆ ಯೋಚಿಸಬೇಕು.
ಆದರೆ ಇವರಿಬ್ಬರ ಜಗಳಗಳನ್ನು ಗಮನಿಸುತ್ತಿರುವ ಜನರು ಬಹುಶಃ ಕೇಂದ್ರ , ಹೈಕಮಾಂಡ್ ಇರುವ ಪಕ್ಷದ ಸಹವಾಸವೇ ಬೇಡ. ನಮ್ಮ ಸ್ಥಳೀಯ ಪಕ್ಷಕ್ಕೆ ಆದ್ಯತೆ ನೀಡೋಣ ಎಂದು ಬೇರೆ ಯೋಚಿಸಿ ಇವರಿಬ್ಬರಿಗೂ ಬುದ್ದಿ ಕಲಿಸಲು ಯೋಚಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಒಟ್ಟರಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗುವ ಸೂಚನೆಗಳೆ ಹೆಚ್ಚು ಇದ್ದಂತೆ ಕಂಡುಬರುತ್ತಿದೆ ಒಟ್ಟಿನಲ್ಲಿ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಜನತೆಯ ಮೇಲೆ ದುಷ್ಪರಿಣಾಮ ವಾಗದಂತೆ ಎಚ್ಚರವಹಿಸಬೇಕು ಅದರ ಜವಾಬ್ದಾರಿ ಕೂಡ ಅರಿಯಬೇಕು.
ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಜಗಳ ನೋಡಿಕೊಂಡು ಮುಖ್ಯಸ್ಥರಾದ ಕುಮಾರಸ್ವಾಮಿಯವರು ಮೂರಕ್ಕೆ ಶರಣಾಗಿರುವ ಅರ್ಥ ಏನು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ ಅಥವಾ ಅವರಿಬ್ಬರ ಜಗಳದ ತಮಗೆ ಲಾಭ ಆಗುತ್ತದೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ ಅಥವಾ ಮೌನಂ ಸಮ್ಮತಿ ಲಕ್ಷಣಂ ಅಂತ ಗೆದ್ದೆತ್ತಿನ ಬಾಲ ಹಿಡಿಯಲು ಮೌನಕ್ಕೆ ಶರಣಾಗಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.


Share