ಸಂಪಾದಕೀಯ : ಶಹಬಾಸ್ ಈಶ್ವರಪ್ಪ!

173
Share

ಪಕ್ಷ ನಿಷ್ಠೆ ಎಂದರೆ ಅದು ಈಶ್ವರಪ್ಪನವರಿಂದ ತಿಳಿದುಕೊಳ್ಳಬೇಕು. ಈಗ ಚುನಾವಣೆಯ ಪರ್ವ ಮುಂಬರುವ ವಿಧಾನಸಭಾ ಚುನಾವಣೆಗೆ ಹಲವು ಪ್ರಭಾವಿ ಅಭ್ಯರ್ಥಿಗಳು ತಮ್ಮ ಮಾತೃ ಪಕ್ಷದಲ್ಲಿ ಸ್ಥಾನ ದೊರೆಯಲಿಲ್ಲ ಎಂದು ವಲಸೆ ಹೋಗುವವರೆ ಹೆಚ್ಚಾಗಿದ್ದಾರೆ. ಆದರೆ ಇದೆಲ್ಲದನ್ನು ಮೀರಿ ಈಶ್ವರಪ್ಪ ರಾಜಕಾರಣಿಗಳಲ್ಲೇ ಓರ್ವ ವಿಶಿಷ್ಟ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ತೀರ್ಮಾನಗಳು ಆದರ್ಶನೀಯ. ತಮ್ಮ ಸುದೀರ್ಘ ರಾಜಕಾರಣಕ್ಕೆ ಉತ್ತಮ ರೀತಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಭಾರತೀಯ ಜನತಾ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿ ಸುಮಾರು 77 ಹೊಸ ಮುಖಗಳಿಗೆ ಮಣೆ ಹಾಕಿ, ಎಷ್ಟೇ ಪ್ರಭಾವವಿದ್ದರೂ ಬಹಳಷ್ಟು ಹಿರಿಯರು, ಅನುಭವಿ ಮುಖಂಡರುಗಳನ್ನು ಕೈ ಬಿಟ್ಟು ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.
ಇದರಲ್ಲಿ ಪ್ರಮುಖವಾಗಿ ಈಶ್ವರಪ್ಪನವರು ಮೊದಲನೇ ಪಟ್ಟಿಯಲ್ಲಿ ವಂಚಿತರಾದರು ತಾವು (ಜಗದೀಶ್ ಶೆಟ್ಟರ್ ಅಂತೆ) ದೃತಿ ಗೆಡದೆ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಸೆಡ್ಡು ಹೊಡೆಯುವುದಿಲ್ಲ ತಾವು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯುವುದಿಲ್ಲ ತಾವು ಜೀವನವನ್ನು ಅಂತ್ಯಕಂಡರು ಬಿಜೆಪಿಯಲ್ಲೇ ಅಂತ್ಯ ಕಾಣುವೆನು ಎಂದಂತಲ್ಲ ತಿಳಿಸಿದರು. ತದನಂತರ ತಮ್ಮ ಮಗನಿಗಾಗಿ ಸ್ವಲ್ಪ ಕಾಲ ಬ್ಯಾಟಿಂಗ್ ಕೂಡ ನಡೆಸಿದರು ಆದರೆ ಆಗಲು ವಂಚಿತರಾದರು, ಪಕ್ಷದ ವರಿಷ್ಠರು ಸೊಸೆಗೆ ಕೊಡುವುದಾಗಿ ತಿಳಿಸಿದರೆ, ಅನುಭವವಿಲ್ಲದ ಅವರಿಗೆ ಕೊಟ್ಟರು ಪ್ರಯೋಜನವಿಲ್ಲ ಎಂದು ತಿರಸ್ಕರಿಸಿದರು.
ಇದೀಗ ಶಿವಮೊಗ್ಗ ಕಣಕ್ಕೆ ನಗರ ಪಾಲಿಕೆ ಸದಸ್ಯ ಮಾಜಿ ಮೇಯರ್ ಆರ್ ಎಸ್ ಎಸ್ ನ ಚನ್ನಬಸಪ್ಪ ರವರನ್ನು ಹೆಸರಿಸಿದೆ. ಇದನ್ನು ಸಹಿಷ್ಣತೆಯಿಂದ ಸ್ವೀಕರಿಸಿದ ಈಶ್ವರಪ್ಪ ತಮ್ಮ ಮಗ ಪಕ್ಷದಲ್ಲಿ ಮತ್ತಷ್ಟು ಗಟ್ಟಿಗೊಂಡ ನಂತರ ಖಂಡಿತ ಅವನಿಗೆ ಒಳ್ಳೆಯ ದಿನಗಳು ಬರಲಿದೆ, ತಾವು ಈಗ ವರಿಷ್ಠರು ಸೂಚಿಸಿರುವ ಅಭ್ಯರ್ಥಿಗೆ ಮನಸ್ಪೂರ್ವಕವಾಗಿ ಸಹಕರಿಸಿ ತಮ್ಮ ಪಕ್ಷ ಗೆಲ್ಲುವಂತೆ ನೋಡಿಕೊಳ್ಳುವೆ ಎಂದು ಪುನರುಚ್ಚರಿಸಿದ್ದಾರೆ.ಇದೇ ಅಲ್ಲವೇ ಸದ್ಯದ ರಾಜಕೀಯ ವಲಯದಲ್ಲಿ ಬೇಕಿರುವುದು ಇದಕ್ಕೆ ಈಶ್ವರಪ್ಪ ಅಗ್ರಗಣ್ಯರಾಗಿ ಮೆರೆದಿದ್ದಾರೆ, ಶಹಬಾಷ್ ಈಶ್ವರಪ್ಪ…


Share