ಬ್ರಾಹ್ಮಣರು: ಆಗಸ್ಟ್ 5ರಿಂದ ಜಾತಿ , ಆದಾಯ ಪತ್ರಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ

5329
Share

ಮೈಸೂರು,
5-8-2020 ರಾಜ್ಯದಲ್ಲಿನ ಎಲ್ಲಾ ಬ್ರಾಹ್ಮಣ ಜಾತಿಗೆ ಸೇರಿದವರು ನಾಡಕಚೇರಿಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ .
14.7.2020 ರ೦ದು ಸರ್ಕಾರ ಹೊರಡಿಸಿದ ಆದೇಶದಲ್ಲಿ ಹಲವಾರು ತೊಡಕುಗಳು ಇದ್ದ ಕಾರಣ ಸರ್ಕಾರಿ ತಾಲೂಕು ಕಚೇರಿಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ತೊಂದರೆ ಉಂಟಾಗುತ್ತಿತ್ತು .
ಸದರಿ ತೊಂದರೆಗಳನ್ನು ನಿವಾರಣೆ ಮಾಡಿದ್ದು ಒಂದು ಪಕ್ಷ ಬ್ರಾಹ್ಮಣರಿಗೆ ಗೊಂದಲವಿದ್ದಲ್ಲಿ (0821-2484444) ಸಂಪರ್ಕಿಸುವಂತೆ ಕೆ ಆರ್ ಕ್ಷೇತ್ರದ ಶಾಸಕರಾದ ರಾಮದಾಸ್ ಅವರು ಮನವಿ ಮಾಡಿದ್ದಾರೆ.


Share