ಭಗತ್ ಸಿಂಗ್ ಮತ್ತು ರಾಜಗುರು ಸುಖದೇವ್ ರವರ 94ನೇ ಹುತಾತ್ಮ ದಿನಾಚರಣೆ

55
Share

ಮೈಸೂರಿನ ನಗರದ ರಾಮಸ್ವಾಮಿ ವೃತ್ತದ ಬಳಿ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ರಾಜಿರಹಿತ ಹೋರಾಟವನ್ನು ಕಟ್ಟಿ ,  ಸಮಾಜದ ನಿರ್ಮಾಣಕ್ಕಾಗಿ ಕನಸು ಕಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರಾದ *ಶಹೀದ್ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ 94 ನೇ ಹುತಾತ್ಮ ದಿನಾಚರಣೆಯನ್ನು ನಮ್ಮ ವಿದ್ಯಾರ್ಥಿ,ಯುವಜನ ಮತ್ತು ಮಹಿಳಾ ಸಂಘಟನೆ ಗಳಾದ ಎಐಡಿಎಸ್ಓ, ಎಐಡಿವೈಓ, ಎಐಎಂಎಸ್ಎಸ್ ಸಂಘಟನೆಗಳಿಂದ* ಸಂಘಟಿಸಲಾಗಿತ್ತು.
*ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀತು ಶ್ರೀ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯುವಜನ ಸಂಘಟನೆಯ ಜಿಲ್ಲಾ  ಅಧ್ಯಕ್ಷರಾದ ಸುನಿಲ್ ಟಿ ಆರ್* ರವರು ಭಗತ್ ಸಿಂಗ್ ಸ್ವಾತಂತ್ರ್ಯ ಚಳುವಳಿಯಲ್ಲಿ *ರಾಜಿ ರಹಿತ ಹೋರಾಟ ಪಂಥದ ಪ್ರಮುಖ ಕ್ರಾಂತಿಕಾರಿಯಾಗಿದ್ದರು 23ನೇ ವಯಸ್ಸಿಗೆ ನಗುನಗುತ್ತಾ ಗಲ್ಲುಗಂಬಕ್ಕೀರಿದ್ದರಿಂದಲೇ ಧೀರ ಹುತಾತ್ಮ ಶಹೀದ್ ಭಗತ್ ಸಿಂಗ್ ಎಂದು ಕರೆಯುವುದು ಮತ್ತು  ಭಗತ್ ಸಿಂಗ್ ರವರು ಗಾಂಧಿ ನೇತೃತ್ವದ ಕಾಂಗ್ರೆಸ್ ಮತ್ತು ಆಗಿನ ಕಾಲದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿರಲು ಪ್ರಮುಖ ಕಾರಣವೆಂದರೆ ಅವರ ಸಿದ್ಧಾಂತ..*
ಇದು ವರ್ಗ ವಿಭಜಿತ ಸಮಾಜ, ಇಲ್ಲಿ ಶ್ರೀಮಂತರು ಬಡ ರೈತ ಕಾರ್ಮಿಕರನ್ನು ಶೋಷಿಸಿ ಬದುಕುತ್ತಾರೆ ಈ ಶೋಷಣೆ ವಿರುದ್ಧ ಸಮ ಸಮಾಜ ಸ್ಥಾಪನೆಯಾಗಬೇಕು, ನಮಗೆ ಸ್ವಾತಂತ್ರ್ಯ ಬೇಕಿರುವುದು ಕೇವಲ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಮಾತ್ರ ಅಲ್ಲ ಬದಲಿಗೆ *ಮಾನವನಿಂದ ಮಾನವನ ಶೋಷಣೆ  ಅಂತ್ಯವಾಗಬೇಕು,* ಎಂಬುವುದು ಭಗತ್ ಸಿಂಗರ ಸಿದ್ದಾoತವಾಗಿತ್ತು ಅಂದರೆ ಶೋಷಣಾ ಮುಕ್ತ ಬಡತನ ಮುಕ್ತ ಸಮಾಜ ಸ್ಥಾಪನೆಯಾಗಬೇಕು, ಆಗ ಮಾತ್ರ ನಮಗೆ ನಿಜವಾದ ಸ್ವಾತಂತ್ರ್ಯ ಲಭಿಸುತ್ತದೆ ಎಂದು ಮಾತನಾಡಿದರು.
ಮತ್ತೋರ್ವ *ಭಾಷಣಕಾರರಾಗಿ ಮಾತನಾಡಿದ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷರಾದ ನಿತಿನ್* ಮಾತನಾಡುತ್ತಾ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳಾದ ರಾಜಗುರು,ಸುಖದೇವ್ ಅವರು ಅಂದು ಜಡವಾಗಿ ಮಲಗಿದ್ದಂತಹ ವಿದ್ಯಾರ್ಥಿ ಯುವ ಜನರನ್ನು ಬಡಿದು ಎಬ್ಬಿಸಿದ ವ್ಯಕ್ತಿತ್ವಗಳು ಎಂದು ಮಾತನಾಡಿದರು,  ಭಗತ್ ಸಿಂಗ್ ರವರ ವಿಚಾರ ಇವತ್ತಿಗೂ ಬಹಳ ಪ್ರಸ್ತುತವಾಗಿತ್ತು ಅದನ್ನು ಅರಿಯುವುದು ಇಂದಿನ ವಿದ್ಯಾರ್ಥಿ ಯುವ ಜನರಿಗೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.
 *ಸಂಘಟನೆಯ ಪದಾಧಿಕಾರಿಗಳಾದ  ಸೀಮಾ,ಸುಮಾ,ಚಂದ್ರಕಲಾ ಸದಸ್ಯರಾದ ನಿತಿನ್ ,ಸ್ವಾತಿ, ಅಂಜಲಿ, ಹೇಮಲತಾ ಹಾಗೂ ಪುಷ್ಪ* ಮತ್ತಿತರರು ಭಾಗವಹಿಸಿದ್ದರು

 


Share