ಮುಕ್ತಾರ್ ಅನ್ಸಾರಿ ಅವರಿಗೆ ಜೀವಾವಧಿ ಶಿಕ್ಷೆ

41
Share

ನವ ದೆಹಲಿ:
32 ವರ್ಷಗಳಷ್ಟು ಹಳೆಯದಾದ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಾರಣಾಸಿಯ ನ್ಯಾಯಾಲಯವು ಜೈಲಿನಲ್ಲಿರುವ ದರೋಡೆಕೋರ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ಹಾಗೂ 1,00,000 ರೂ ದಂಡ ವಿಧಿಸಿದೆ.
ಅನ್ಸಾರಿ ಅವರು 1991 ರಲ್ಲಿ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯಲು ಪ್ರಾರಂಭಿಸಿದಾಗ ಕಾಂಗ್ರೆಸ್ ಮುಖಂಡರೊಬ್ಬರ ಕೊಲೆಯ ಆರೋಪವನ್ನು ಹೊರಿಸಲಾಗಿತ್ತು. ಆಗಸ್ಟ್ 3, 1991 ರಂದು, ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈ ಅವರನ್ನು ವಾರಣಾಸಿಯಲ್ಲಿ ಅಜಯ್ ರೈ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಅಪರಾಧ ಎಸಗಿದಾಗ ಮುಕ್ತಾರ್ ಅನ್ಸಾರಿ ಅವರು ಶಾಸಕರಾಗಿರಲಿಲ್ಲ. ತೀರ್ಪಿನ ಪೂರ್ವಭಾವಿಯಾಗಿ ನ್ಯಾಯಾಲಯದ ಆವರಣದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಶ್ರೀ ರೈ ಅವರು ಎಫ್‌ಐಆರ್‌ನಲ್ಲಿ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಮಾಜಿ ಶಾಸಕ ಅಬ್ದುಲ್ ಕಲೀಂ ಮತ್ತು ಇತರ ಇಬ್ಬರನ್ನು ಹೆಸರಿಸಿದ್ದಾರೆ.
ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಐದನೇ ಶಿಕ್ಷೆಯಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಐದು ಅವಧಿಯ ಶಾಸಕರಾಗಿರುವ ಮುಖ್ತಾರ್ ಅನ್ಸಾರಿಗೆ ಈ ಏಪ್ರಿಲ್‌ನಲ್ಲಿ ಮತ್ತೊಂದು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ವಾರಣಾಸಿ ಎಂಪಿ ಎಂಎಲ್ಎ ನ್ಯಾಯಾಲಯವು ಮೇ 19 ರಂದು ಅಂತಿಮ ವಾದಗಳ ನಂತರ ಅವಧೇಶ್ ರೈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿತು, ತನ್ನ ಆದೇಶವನ್ನು ಕಾಯ್ದಿರಿಸಿ ಅದನ್ನು ನೀಡಲು ಜೂನ್ 5 ರಂದು ದಿನಾಂಕವನ್ನು ನಿಗದಿಪಡಿಸಿದ್ದು ಇಂದು ತೀರ್ಪು ಹೊರ ಬಿದ್ದಿದೆ.

Share