ಮೈಸೂರು-ಕನ್ನಡ ಭಾಷೆ ನಾಮಫಲಕದ ಅಳವಡಿಕೆ: ಮಾ.31 ಅಂತಿಮ ಗಡವು

197
Share

 

ಕನ್ನಡ ಭಾಷೆ ನಾಮಫಲಕದ ಅಳವಡಿಕೆ: ಮಾ.31 ಅಂತಿಮ ಗಡುವು*

ಮೈಸೂರು.ಮಾ.:- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆದಾರರು ತಮ್ಮ ಉದ್ದಿಮೆಗಳಲ್ಲಿ ಅಳವಡಿಸುವ ನಾಮಫಲಕಗಳು ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಯನ್ನು ನಾಮಫಲಕದ ಮೇಲ್ಬಾಗದಲ್ಲಿ ಪ್ರದರ್ಶಿಸಲು ಮಾರ್ಚ್ 31 ರ ತನಕ ಅಂತಿಮ ಗಡುವು ನೀಡಲಾಗಿದೆ.

ಮಾರ್ಚ್ 31 ರ ನಂತರ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ 60 ರಷ್ಟು ಪ್ರದರ್ಶಿಸದೇ ಇದ್ದಲ್ಲಿ ಪ್ರಥಮ ಹಂತದಲ್ಲಿ 5000 ರೂ, ದ್ವಿತೀಯ ಹಂತದಲ್ಲಿ 10,000 ರೂ. ಹಾಗೂ ತೃತೀಯ ಹಂತದಲ್ಲಿ ರೂ. 20,000 ದಂಡವನ್ನು ವಿಧಿಸಿ, ಉದ್ದಿಮೆಗೆ ನೀಡಿರುವ ಉದ್ದಿಮೆ ರಹದಾರಿ ಪತ್ರವನ್ನು  ರದ್ದುಗೊಳಿಸುವ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share