ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 40

1107
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 40
ಬ್ರಹ್ಮನು ಬೆಳಗಿಸಿದ ಆ ದೀಪವು ಕಲಿಯುಗದ ಅಂತ್ಯ ದವರೆಗೂ ಬೆಳಗುತ್ತಿರುತ್ತದೆ ಎನ್ನುತ್ತಾರೆ ಎಂಬ ವಿಷಯವನ್ನು ತಿಳಿದುಕೊಂಡೆವು. ನಂತರ
ಮೊದಲಿಗೆ ಶ್ರೀ ಸ್ವಾಮೀಜಿ ಯವರು ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ಹೇಳಿದರು.
ನಂತರ ಕಥಾಭಾಗದಲ್ಲಿ ಏನು ಹೇಳಿದರು ನೋಡೋಣ.
ಒಂದು ಬ್ರಹ್ಮ ವಾಕ್ಯವಿದೆ,ಯಾವಾಗ ದೀಪ ಆರಿಹೋಗುತ್ತೋ, ಯಾವಾಗ ವಿಮಾನ ಬಿದ್ದು ಹೋಗುತ್ತೋ ಆಗ ನನ್ನ ಅವತಾರ ಮುಗಿಸುತ್ತೇನೆ ಎನ್ನುತ್ತಾನೆ ಸ್ವಾಮಿಯು.
ಎಲ್ಲಾ ಉತ್ಸವಗಳನ್ನು ನೀನೆ ಮಾಡಬೇಕೆಂದು ಸ್ವಾಮಿಯು ಬ್ರಹ್ಮದೇವ ನಿಗೆ ಆಜ್ಞಾಪಿಸುತ್ತಾನೆ. ಬ್ರಹ್ಮ ನಿಗೆ ನಾಲ್ಕು ಬೇರಿಗಳನ್ನು ತಯಾರು ಮಾಡಲು ಹೇಳುತ್ತಾನೆ. ಆ ನಾಲ್ಕು ಬೇರಿಗಳು ತನ್ನ ಅಧೀನದಲ್ಲೆ ಇರುವುದಾಗಿ ತಿಳಿಸುತ್ತಾನೆ. ಆಗ ಮೊದಲ ಕಲ್ಯಾಣವು ಆರಂಭವಾಯಿತು. ಇತರ ಉತ್ಸವಾದಿ ಬ್ರಹ್ಮೋತ್ಸವ ಆರಂಭವಾಯಿತು. ನಿತ್ಯೋತ್ಸವ ನಿತ್ಯ ಪೂಜೆಗಳು ಆರಂಭವಾಯಿತು ಅಂದಿನಿಂದ.
ತೋಂಡಮಾನನು ಆಗಾಗ ಬಿಲದ್ವಾರದಿಂದ ಬಂದು ಸ್ವಾಮಿಯ ದರ್ಶನ ಮಾಡಿಹೋಗುತ್ತಿದ್ದ.
ಈ ಸಂಬಂಧ ಒಬ್ಬ ವಿಪ್ರನ ಕಥೆಯನ್ನು ಆರಂಭಿಸಿದ್ದಾರೆ ಈ ಸಂಚಿಕೆಯಲ್ಲಿ ಸ್ವಾಮೀಜಿ ಯವರು. ತಪ್ಪದೇ ನೋಡಿ. ವೇಂಕಟೇಶ್ವರನಿಗೆ ನಡೆಯುವ ಒಂದು ಸುಂದರ ಭಜನೆಯನ್ನು ಹಾಡಿದ್ದಾರೆ ಶ್ರೀ ಸ್ವಾಮೀಜಿ ಯವರು.

” ಸಪ್ತಗಿರಿ ವಾಸನೆ ವೇಂಕಟೇಶ ವಂದನೆ
ಪಾಪಗಳ ನಾಶನೆ ಶ್ರೀನಿವಾಸ ವಂದನೆ “

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share