ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ – 47.

1024
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 47
ತುಂಬುರು, ಕುಮಾರ ತೀರ್ಥದ ಬಗ್ಗೆ ಕೇಳಿದೆವು ನಿನ್ನೆಯ ದಿನ ಸಂಚಿಕೆಯಲ್ಲಿ.
ಇನ್ನು ಶ್ರೀ ಸ್ವಾಮೀಜಿ ಯವರು 4. ಆಕಾಶ ಗಂಗೆ ತೀರ್ಥ, 5. ಪಾಪವಿನಾ ತೀರ್ಥ, 6. ಪಾಂಡವ ತೀರ್ಥ, 7. ರಾಮಕೃಷ್ಣ ತೀರ್ಥ, 8. ದೇವ ತೀರ್ಥ, 9. ಚಕ್ರ ತೀರ್ಥ, 10. ಸನಕಸನಂದ ತೀರ್ಥ, 11. ಕಾಮ ರಸಾಯನ ತೀರ್ಥ, 12. ಫಲ್ಗುಣಿ ತೀರ್ಥ, 13. ಜಾಬಾಲಿ ತೀರ್ಥ, 14. ವರಾಹ ತೀರ್ಥ, 15. ಕಪಿಲ ತೀರ್ಥ, 16. ಪದ್ಮ ಸರೋವರ ತೀರ್ಥ ಹೀಗೆ 66 ಸಾವಿರ ಕೋಟಿ ತೀರ್ಥ ಗಳಿವೆ ಸಪ್ತಗಿರಿಯಲ್ಲಿ. ಈ ತೀರ್ಥಗಳು ಭಕ್ತರ ಕೋರಿಕೆಯನ್ನು ಈಡೇರಿಸಿ ವಿಷ್ಣು ಸಾನಿಧ್ಯವನ್ನು ಉಂಟುಮಾಡುತ್ತದೆ.
ಮೇಲಿನ ಎಲ್ಲಾ ತೀರ್ಥ ಗಳ ವೈಶಿಷ್ಟ್ಯಗಳು ಮತ್ತು ಫಲಗಳು ಮತ್ತು ಆ ಹೆಸರಿನಿಂದ ಏಕೆ ಕರೆಯುತ್ತಾರೆ ಎಂಬುದನ್ನು ಶ್ರೀ ಸ್ವಾಮೀಜಿ ಯವರು ವಿವರಿಸಿದ್ದಾರೆ.

  1. ಆಕಾಶಗಂಗೆ ತೀರ್ಥ – ಕೇಸರಿ ಮತ್ತು ಅಂಜನಾದೇವಿಗೆ ಬಹಳ ಕಾಲದವರೆಗೆ ಸಂತಾನ ಭಾಗ್ಯ ವಿರಲಿಲ್ಲ. ಮಾತಂಗ ಮಹರ್ಷಿಯು ಈ ದಂಪತಿಗಳಿಗೆ ಆಕಾಶ ಗಂಗೆ ತೀರ್ಥದಲ್ಲಿ ಸ್ನಾನ ಮಾಡಿ 12 ವರ್ಷ ವ್ರತ ಮಾಡಲು ಸೂಚಿಸುತ್ತಾರೆ ಮತ್ತು ಹೀಗೆ ಮಾಡುವುದರಿಂದ ಶಕ್ತಿವಂತ ಪುತ್ರನು ಲಭಿಸುವುದಾಗಿ ಹೇಳುತ್ತಾರೆ. ಅಂಜನದೇವಿ ಹೀಗೆ ಮಾಡಿ ಆಂಜನೇಯನನ್ನು ಪುತ್ರನಾಗಿ ಪಡೆದಳು. ಸ್ವಾಮಿಯ ಎಲ್ಲಾ ಕೈಂಕರ್ಯಕ್ಕೆ ಈ ತೀರ್ಥವನ್ನೆ ಬಳಸುತ್ತಾರೆ.
  2. ಪಾಪವಿನಾಶನ ತೀರ್ಥ – ಕೆಲವು ಬ್ರಾಹ್ಮಣರು ಯಘ್ನ್ಯ ಮಾಡುತ್ತಿದ್ದಾಗ ಒಬ್ಬ ಬ್ರಾಹ್ಮಣನು ಶ್ರದ್ಧೆ ಇಲ್ಲದವನಿಗೆ ಕರ್ಮ ಪ್ರಯೋಗ ಮಾಡುತ್ತಾನೆ. ಇದರಿಂದ ಅವನಿಗೆ ನರಕ ಪ್ರಾಪ್ತಿಯಾಗಿ ಮತ್ತೆ ಬ್ರಾಹ್ಮಣ ನಿಗೆ ಜನಿಸುತ್ತಾನೆ. ಆದರೆ ಒಬ್ಬ ಬ್ರಹ್ಮ ರಾಕ್ಷಸನ ಪೀಡೆಗೊಳಗಾಗುತ್ತಾನೆ. ಅಗಸ್ತ್ಯರ ಆದೇಶದಂತೆ ಪಾಪವಿನಾಶನ ತೀರ್ಥ ದಲ್ಲಿ ಸ್ನಾನ ಮಾಡಿ ಬ್ರಹ್ಮ ರಾಕ್ಷಸನಿಂದ ಬಿಡುಗಡೆ ಹೊಂದುತ್ತಾನೆ.
    ಇನ್ನು ಯಾವ ಯಾವ ತೀರ್ಥ ದಲ್ಲಿ ಸ್ನಾನ ಮಾಡುವುದರಿಂದ ಯಾವ್ಯಾವ ಫಲಗಳು ದೊರೆಯುತ್ತದೆಂದು ಪೂರ್ತಿ ಸಂಚಿಕೆ ನೋಡಿ ತಿಳಿದು ಕೊಳ್ಳಿ. ಪ್ರತಿ ತೀರ್ಥ ಗಳ ಅಪಾರವಾದ ಮಹಿಮೆಯನ್ನು ಶ್ರೀ ಸ್ವಾಮೀಜಿ ಯವರು ತಿಳಿಸಿದ್ದಾರೆ. ಇವೆಲ್ಲವನ್ನು ತಿಳಿದುಕೊಂಡು ಮುಂದೆ ವೆಂಕಟಾದ್ರಿಗೆ ತೆರಳಿದಾಗ ತಪ್ಪದೆ ತೀರ್ಥ ಗಳನ್ನು ದರ್ಶನ ಮಾಡಿ ನಿಮ್ಮ ಮನೋ ಇಚ್ಛೆಗಳನ್ನು ಪೂರ್ಣಗೊಳಿಸಿಕೊಳ್ಳಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share