ಮೈಸೂರು ಮೊಸಳೆ ಬಂತು ಮೊಸಳೆ …. ಮೋರಿಯಲ್ಲಿ ಮರೆಯಾಯ್ತು. ವೀಕ್ಷಿಸಿ

339
Share

ಮೈಸೂರು,  ನಗರದ ಜನನಿ ಬೀಡು ಸ್ಥಳವಾದ ರಾಮಾನುಜಾ ರಸ್ತೆ ಸಮೀಪದಲ್ಲಿರುವ ಎಲೆ ತೋಟದ ಸಮೀಪ ಪೆಟ್ರೋಲ್ ಬಂಕ್ ಬಳಿಯ ದೊಡ್ಡ ಮೋರಿಯಲ್ಲಿ ಇಂದು ಮೊಸಳೆ ಒಂದು ಕಾಣಿಸಿಕೊಂಡು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದೆ. ದಾರಿಹೋಕರು ಕೆಲವರು ಇದನ್ನು ಕಂಡು ಹೌಹಾರಿದ್ದಾರೆ. ಮಧ್ಯಾಹ್ನದಿಂದ ಇದನ್ನು ಸೆರೆಹಿಡಿಯುವ ಪ್ರಯತ್ನದಲ್ಲಿ ಕೆಲವರು ನಿರತರಾಗಿದ್ದು ಈವರೆಗೆ ಸಫಲರಾಗಿಲ್ಲ.ಹಗ್ಗ ಬೇಸಿ ಹಿಡಿಯುವ ಪ್ರಯತ್ನ ನಡೆಸಲಾಯಿತಾದರೂ ಎರಡು ಬಾರಿ ತಪ್ಪಿಸಿಕೊಂಡಿತು. ನಗರದಲ್ಲಿ ಅಪರೂಪಕ್ಕೆ ಕಾಣಿಸಿಕೊಂಡಿರುವ ಈ ಮೊಸಳೆ ರಭಸವಾಗಿ ಹರಿಯುತ್ತಿರುವ ನೀರಿನ ಮೋರಿಯಾ ಇಕ್ಕಡೆಗಳಲ್ಲಿರುವ ಕಲ್ಲು ಸಂದಿಗಳೆಲ್ಲೋ ಮರೆಮಾಚಿಕೊಂಡು ಕೈಗೆ ಸಿಗದಾಗೆ ಆಗಿದೆ. ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಕಾಣಿಸಿಕೊಂಡಂತ ಈ ಮೊಸಳೆ ಸಂಜೆ 6:30 ವರೆಗೂ ಹುಡುಕಿದರೂ ಪ್ರಯೋಜನವಾಗಿಲ್ಲ. ಇಲ್ಲಿ ಹರಿಯುವ ನೀರು ಸುವೇಜ್ ಫಾರಂನ ಶುದ್ಧೀಕರಣ ಕೇಂದ್ರಕ್ಕೆ ತಲುಪು ವುದರಿಂದ ಹಾಗೂ ಸ್ವವೇಜ್ ಫಾರಂ ಒಳಭಾಗದಲ್ಲಿ ದಟ್ಟವಾದ ಹುಲ್ಲು ಬೆಳೆದಿರುವುದರಿಂದ ಒಂದು ವೇಳೆ ಮೊಸಳೆ ಇಲ್ಲಿಂದ ತಪ್ಪಿಸಿಕೊಂಡು ಹುಲ್ಲುಗಾವಲು ಮಧ್ಯೆ ತಲುಪಿದ್ದೆ ಆದರೆ ಅದನ್ನು ಕಂಡುಹಿಡಿಯುವುದು ಕಷ್ಟ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಈಗ ಈ ಮೊಸಳೆಯು ಜನರ ನಿದ್ದೆಗೆಡಿಸಿದೆ. ಎಲೆ ತೋಟದ ರಸ್ತೆಯಲ್ಲಿ ಇದನ್ನು ನೋಡಲು ಜನಜಂಗುಳಿಯೆ ಸೇರಿದ್ದು ಪೊಲೀಸರು ಜನರನ್ನು ನಿಯಂತ್ರಿಸಲು ಮಗ್ನರಾಗಿರುವುದು ಕಂಡುಬಂದಿತು. ನಾಳೆ ಹಗಲಿನಲ್ಲಿ ಎಲ್ಲಾದರೂ ಇದು ಕಾಣಿಸಿಕೊಳ್ಳಲಿದೆಯೇ ಕಾದು ನೋಡಬೇಕಾಗಿದೆ. ನಗರದಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆ ಬರುತ್ತಿದ್ದು ಇದು ಕಾರಂಜಿ ಕೆರೆಯಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ.


Share