ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 48

178
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 48
ಓಂ ನಮೋ ಹನುಮತೇ ನಮಃ

388 . ಅಷ್ಟೇ ! ಇದ್ದಕ್ಕಿದ್ದಂತೆ ಹನುಮಂತನ ಎದುರಿಗೆ ಅಷ್ಟು ದೂರದಲ್ಲಿ ಸಮುದ್ರದೊಳಗಿಂದ ಒಂದು ದೊಡ್ಡ ರಾಕ್ಷಸಾಕಾರವೊಂದು ಮೈಲಿಗಟ್ಟಲೆ ಎತ್ತರ ಎದ್ದಿತು.
389 . ಆ ಆಕಾರಕ್ಕೆ ಕೈ ಗಳಿರಲಿಲ್ಲ. ಕಾಲುಗಳು ಇಲ್ಲ. ಬರೀ ತಲೆ ಮಾತ್ರ ಇತ್ತು. ಅಗ್ನಿಪರ್ವತದಂತೆ ಕಣ್ಣುಗಳು, ಧೂಮಕೇತುವಿನಂತೆ ಇದ್ದ ಕೋರೆಹಲ್ಲುಗಳು, ಪಾತಾಳ ದ್ವಾರದಂತಿದ್ದ ಬಾಯಿ, ಭಯಂಕರವಾದ ನಾಲಿಗೆ. ಇದು ಆಕಾರ.
390 . ಘೋರಾತಿಘೋರವಾಗಿದ್ದ ಆ ಭಯಂಕರ ರಾಕ್ಷಸಿಯ ತಲೆಯನ್ನು ನೋಡಿದಾಗ ಹನುಮಂತನಿಗೆ ಏಕೋ ಭಯವಾಗಲಿಲ್ಲ. ಕೋಪವು ಬರಲಿಲ್ಲ. ಒಂದು ಸಾರಿ ಮನಸ್ಸನ್ನು ಏಕಾಗ್ರಗೊಳಿಸಿ ನೋಡಿದ. ಎದುರಿಗಿದ್ದ ವ್ಯಕ್ತಿ ದೇವತಾ ಮಹಿಳೆಯೆಂದು ತನ್ನನ್ನು ಪರೀಕ್ಷೆ ಮಾಡಲು ಹೀಗೆ ರೂಪವನ್ನು ಧರಿಸಿದ್ದಾಳೆಂದು ಅವನಿಗೆ ಅರ್ಥವಾಗಿ ಹೋಯಿತು .
391 . ಇಷ್ಟರಲ್ಲಿ ಆಕಾರವು ಸಿಡಿಲು ಬಡಿದಂತೆ ಮಾತಾಡಲು ಪ್ರಾರಂಭಿಸಿತು. ” ಬಾ ಹನುಮ ! ಬಾ ! ಬಹಳ ಕಾಲದ ನಂತರ ದೇವತೆಗಳು ನನಗೆ ಒಳ್ಳೆಯ ಆಹಾರವನ್ನು ಒದಗಿಸಿದ್ದಾರೆ. ನಿನ್ನನ್ನು ಆಹಾರವನ್ನಾಗಿ ಸ್ವೀಕರಿಸಬಹುದೆಂದು ನನಗೆ ದೇವತೆಗಳಿಂದ ಅನುಮತಿ ಸಿಕ್ಕಿದೆ. ಈಗ ನಾನು ಬಾಯಿ ತೆರೆಯುತ್ತೇನೆ. ಬಂದು ಬಾಯೊಳಗ ಬೀಳು ” ಎನ್ನುತ್ತಿದೆ , ಆ ಆಕಾರ.
393 . ಆದರೂ ಹನುಮಂತನಿಗೆ ವ್ಯತಿರೇಕ ಭಾವವೂ ಉಂಟಾಗಲಿಲ್ಲ. ಅವನು ಕೈಗಳನ್ನು ಜೋಡಿಸಿ ನಮಸ್ಕರಿಸಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಲೇ ಹೀಗೆ ಹೇಳಿದ –
1 . ಮಾತೆ ! ದಕ್ಷ ಪುತ್ರಿ ! ನಿನಗೆ ನಮಸ್ಕಾರ .
2 . ನಾನು ರಾಮ ಕಾರ್ಯಾಥಿಯಾಗಿ ರಾಮದೂತನಾಗಿ ಹೋಗುತ್ತಿದ್ದೇನೆ.
3 . ಇದು ರಾಮರಾಜ್ಯ. ಅವನ ರಾಜ್ಯದಲ್ಲಿ ನೀನು ಇದ್ದೀಯ. ಅವನ ಕಾರ್ಯಕ್ಕೆ ನೀನು ಸಹಾಯಮಾಡಬೇಕಾದ್ದು ನಿನ್ನ ಧರ್ಮ .
4 . ಆದ್ದರಿಂದ ನನ್ನ ದಾರಿಗೆ ಅಡ್ಡ ಬರಬೇಡ .
( ಮುಂದುವರೆಯುವುದು )

* ರಚನೆ – ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share