ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 76

233
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 76
ಓಂ ನಮೋ ಹನುಮತೇ ನಮಃ

19. ಇವಳ ಹುಟ್ಟೂರು ಭಾಷೆ ಮೈಥಿಲಿ ಭಾಷೆ. ಸೇರಿದ ಮನೆಯ ಭಾಷೆ ಸಾಕೇತ ಭಾಷೆ. ಇವೆರಡರಲ್ಲಿ ಯಾವುದರಲ್ಲಾದರೂ ಮಾತಾಡುವುದು ಒಳ್ಳೆಯದು.
20. ಸಾಕೇತ ಭಾಷೆ ರಾಮನ ಭಾಷೆಯಾದ್ದರಿಂದ ಅದೇ ಇವಳಿಗೆ ಇಷ್ಟವಾಗಿರುತ್ತದೆ. ಆದ್ದರಿಂದ
ಆ ಭಾಷೆಯಲ್ಲೇ ಮಾತಾಡಿದರೆ ಒಳ್ಳೆಯದು.
21. ಭಾಷೆ ಸರಿ, ಇಷ್ಟಕ್ಕೂ ಏನು ಮಾತಾಡುವುದು? ನೇರವಾಗಿ ನನ್ನನ್ನು ನಾನು ಪರಿಚಯ ಮಾಡಿಕೊಂಡರೆ ನಂಬುತ್ತಾಳೋ ಇಲ್ಲವೋ.
22. ಇದು ಮಾಯಾವಿಗಳ ಪ್ರದೇಶವಾದ್ದರಿಂದ ಅವಳು ನನ್ನನ್ನೂ ಮಾಯಾವಿ ಅಂತಲೇ ಅನುಮಾನಿಸಬಹುದು.
23. ಈ ಎಲ್ಲಾ ಸಮಸ್ಯೆಗಳೂ ತೊಲಗಿ ಕಾರ್ಯಸಿದ್ಧಿ ಆಗಬೇಕಾದರೆ ರಾಮಸ್ತುತಿಯೊಂದೇ ದಾರಿ. ಸೀತೆಯ ಮನಸ್ಸು ಕರಗಿ ಹೋಗಬೇಕಾದರೂ ಅದೇ ಉಪಾಯ.
24. ಆದ್ದರಿಂದ ಸ್ವಲ್ಪ ರಾಮಕಥೆಯನ್ನು ಸೇರಿಸಿ ಶ್ರೀರಾಮ ಗುಣಗಾನವನ್ನೇ ಮಾಡೋಣ.
25. ಅವಳ ಪ್ರತಿಕ್ರಿಯೆ ನೋಡಿ ಮುಂದೇನು ಮಾತಾಡಬೇಕೋ ನೋಡೋಣ.

ಹನುಮಂತನ ಮಾತಿನ ಜಾಣ್ಮೆ
535) ಇಷ್ಟು ಜಾಗರೂಕತೆಯಿಂದ ಯೋಚಿಸಿ ಸ್ವರದಲ್ಲಿ ಸುಮಧುರವಾಗಿ ಶ್ರೀರಾಮನ ಗುಣಗಾನ ಪ್ರಾರಂಭಿಸಿದನು.
536) ರಾಜಾ ದಶರಥೋ ನಾಮ ರಥ ಕುಂಜರ ವಾಜಿಮಾನ್
ಪುಣ್ಯಶೀಲೋ ಮಹಾಕೀರ್ತಿಃ ಋಜುರಾಸೀನ್ಮಹಾಯಶಾಃ೤೤
ದಶರಥನೆಂಬ ಮಹಾರಾಜನಿದ್ದ. ಅವನು ಚಕ್ರವರ್ತಿಗಳ ವಂಶದಲ್ಲಿ ಹುಟ್ಟಿದವನು. ಇಂದ್ರ ಸಮನಾದವನು. ಆದರೂ ಅಹಿಂಸಾಪರನು. ಅವನ ಹಿರಿಯಮಗ ರಾಮ. ಅವನು ಇಂದಿನ ಅತಿಶ್ರೇಷ್ಠ ಧನುರ್ಧರ. ಧರ್ಮನಿಷ್ಠನು.
537)
1. ಅವನು ತನ್ನ ತಂದೆಯ ಆಜ್ಞೆಯ ಮೇರೆಗೆ, ಹೆಂಡತಿಯೊಡನೆ ತಮ್ಮನೊಡನೆ ವನವಾಸಕ್ಕೆ ಬಂದ. ಅಲ್ಲಿ ಅನೇಕ ಮಂದಿ ರಾಕ್ಷಸರನ್ನು ಸಂಹರಿಸಿದ. ಜನಸ್ಥಾನದಲ್ಲಿ ಅವನು ರಾಕ್ಷಸ ಸಂಹಾರ ಮಾಡಿದ್ದಕ್ಕೆ ರಾವಣನಿಗೆ ಕೋಪ ಬಂತು.
2. ಆದರೆ ರಾಮನನ್ನು ನೇರವಾಗಿ ಎದುರಿಸಲಾಗದೇ ಮಾಯೆಯಿಂದ ಮೋಸಮಾಡಿ, ಅವನ ಹೆಂಡತಿಯಾದ ಸೀತಾದೇವಿಯನ್ನು ಅಪಹರಿಸಿಕೊಂಡು ಹೋದ.
3. ಹೆಂಡತಿಗೋಸ್ಕರ ಹುಡುಕುತ್ತಾ ಕಾಡಿನಲ್ಲಿ ತಿರುಗಾಡುತ್ತಿದ್ದಾಗ ರಾಮನಿಗೆ ‘ಸುಗ್ರೀವ’ ಎಂಬ ವಾನರನೊಡನೆ ಸ್ನೇಹ ಉಂಟಾಯಿತು.
4. ಸುಗ್ರೀವನನ್ನು ಅವನ ಅಣ್ಣ ವಾಲಿಯು ಸಾಯಿಸಲು ಪ್ರಯತ್ನಿಸಿದಾಗ ಶ್ರೀರಾಮನು ಸುಗ್ರೀವನ ಪಕ್ಷ ವಹಿಸಿ ವಾಲಿಯನ್ನು ಕೊಂದುಹಾಕಿದ.
5. ನಂತರ ಸುಗ್ರೀವನು ಸೀತಾದೇವಿಯನ್ನು ಹುಡುಕಲು ಸಾವಿರಾರು ಮಂದಿ ವಾನರರನ್ನು ನಾಲ್ಕು ದಿಕ್ಕುಗಳಿಗೂ ಕಳಿಸಿದ.
6. ಅವರಲ್ಲಿ ನಾನೂ ಒಬ್ಬ. ದಕ್ಷಿಣ ಸಮುದ್ರ ತೀರದಲ್ಲಿ ‘ಸಂಪಾತಿ’ ಎಂಬ ಹದ್ದಿನ ರಾಜನ ಮಾತನ್ನು ಕೇಳಿ ಆ ಸೀತಾದೇವಿಯನ್ನು ಹುಡುಕಲು ನೂರು ಯೋಜನ ಸಮುದ್ರವನ್ನು ಒಬ್ಬೊಂಟಿಗನಾಗಿ ಹಾರಿ ಇಲ್ಲಿಗೆ ಬಂದಿದ್ದೇನೆ.
7. ರಾಮನು ಹೇಳಿದ್ದ ಗುರುತುಗಳೆಲ್ಲಾ ಇದೋ ಇಲ್ಲಿ ನನಗೆ ಕಾಣುತ್ತಿದೆ. ಅವಳು ನನಗೆ ಕಾಣಿಸುತ್ತಿದ್ದಾಳೆ.
539) ಹನುಮಂತ ಅಷ್ಟು ಹೇಳಿ ತಟಕ್ಕನೆ ನಿಲ್ಲಿಸಿದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share