ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 84

210
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 84
ಓಂ ನಮೋ ಹನುಮತೇ ನಮಃ

597) ಹನುಮಂತನು ಈ ವಾರ್ತೆಯನ್ನು ತಂದಾಗ ಶ್ರೀರಾಮನಿಗೆ ಹೊಸ ಚಿಂತೆಯೊಂದು ಹಿಡಿದುಕೊಂಡಿತು. ನೂರುಯೋಜನದ ಸಮುದ್ರವನ್ನು ಹನುಮಂತನೇನೋ ಲೀಲಾಜಾಲವಾಗಿ ದಾಟಿಬಿಟ್ಟ. ನಾನು ಹೇಗೆ ದಾಟಲಿ? ಲಕ್ಷ್ಮಣ ಹೇಗೆ ದಾಟುತ್ತಾನೆ? ತನ್ನ
ಜೊತೆಯಲ್ಲಿದ್ದ ವಾನರ ಸೈನ್ಯ ಹೇಗೆ ದಾಟುತ್ತದೆ? ಎಂದು.
598) ಶ್ರೀರಾಮನ ಚಿಂತೆಯನ್ನು ಗ್ರಹಿಸಿದ ಆಂಜನೇಯನು ಅವನಿಗೆ ಧೈರ್ಯಹೇಳಿ ಪ್ರೋತ್ಸಾಹಿಸಿ, ಅವನನ್ನು ತನ್ನ ಭುಜದಮೇಲೆ ಕೂರಿಸಿಕೊಂಡು, ಲಕ್ಷ್ಮಣನನ್ನು ಅಂಗದನ ಭುಜದಮೇಲೆ ಕೂರಿಸಿ, ನೇರವಾಗಿ ಸಮುದ್ರ ತೀರಕ್ಕೆ ಬಂದನು.
599) ಹಿಂದೆಯೇ ಸುಗ್ರೀವನು ವಾನರ ಸೈನ್ಯವನ್ನು ಪ್ರತ್ಯೇಕ ವಿಭಾಗಗಳನ್ನಾಗಿ ವಿಂಗಡಿಸಿ, ಶಿಸ್ತಿನಿಂದ ಸಮುದ್ರ ತೀರಕ್ಕೆ ಕರೆತಂದನು.
ವಿಭೀಷಣ ಶರಣಾಗತಿ
600) ಸಮುದ್ರ ತೀರದಲ್ಲಿ ವಾನರ ಸೈನ್ಯ ಬಿಡಾರ ಹೂಡಿತು. ಈ ಸಮುದ್ರವನ್ನು ಹೇಗೆ ದಾಟುವುದು? ಎಂದು ಶ್ರೀರಾಮನು ಯೋಚಿಸುತ್ತಿರುವಾಗ, ಆಕಾಶದಲ್ಲಿ ರಾವಣಾಸುರನನ್ನು ಹೋಲುವ ಒಬ್ಬ ಬಲಿಷ್ಠ ರಾಕ್ಷಸ ಕಾಣಿಸಿದ. ಅವನು “ಶರಣು ರಾಮಚಂದ್ರ!
ಶರಣು!” ಎಂದು ಕೂಗುತ್ತಿದ್ದ.
601) ಬಂದಿದ್ದು ರಾವಣಾಸುರನ ತಮ್ಮ ವಿಭೀಷಣನೆಂದೂ, ಅಣ್ಣನೊಡನೆ ವಿರೋಧ ಉಂಟಾಗಿ, ಅವನನ್ನು ಬಿಟ್ಟು ಇಲ್ಲಿಗೆ ಬಂದು ಶ್ರೀರಾಮನ ಶರಣು ಬೇಡುತ್ತಿದ್ದಾನೆಂದೂ ತಿಳಿಯಿತು.
602) ಅವನಿಗೆ ಆಶ್ರಯ ಕೊಡಬಹುದೋ ಕೊಡಬಾರದೋ? ಎನ್ನುವುದರ ಬಗ್ಗೆ ದೀರ್ಘ ಚರ್ಚೆ ನಡೆಯಿತು. ಶ್ರೀರಾಮನು ಒಬ್ಬೊರನ್ನಾಗಿ ಎಲ್ಲಾ ವಾನರ ಪ್ರಮುಖರ ಅಭಿಪ್ರಾಯವನ್ನೂ ಕೇಳಿದನು ಯಾರೂ ವಿಭೀಷಣನನ್ನು ಸ್ವೀಕರಿಸಲು ಒಪ್ಪುಲಿಲ್ಲ.
603) ಹನುಮಂತ ಮಾತ್ರ ಏನೂ ಮಾತಾಡದೇ ಒಂದು ಮೂಲೆಯಲ್ಲಿ ಕುಳಿತುಕೊಂಡು ರಾಮನಾಮ ಜಪ ಮಾಡುತ್ತಿದ್ದ. ಕೊನೆಗೆ ರಾಮನೇ ಹನುಮಂತನನ್ನು ಕರೆದು, “ಏನು ಹನುಮಾ! ನಿನ್ನ ಅಭಿಪ್ರಾಯ ಹೇಳುತ್ತಿಲ್ಲವಲ್ಲಾ!” ಎಂದು ಕೇಳಿದ.
604) ಆಗ ಹನುಮಂತನು ಶ್ರೀರಾಮನಿಗೆ ಶಿರಬಾಗಿ ವಂದಿಸಿ, ಹೀಗೆ ಬಿನ್ನವಿಸಿಕೊಂಡ –
1. ದೇವದೇವಾ! ನಿನಗೆ ಒಬ್ಬರ ಸಲಹೆ ಬೇಕೇ?
2. ಎಲ್ಲರ ಬುದ್ಧಿಗಳನ್ನೂ ನಡೆಸುವುದು ನೀನೇ. ಎಲ್ಲರಿಗೂ ಆಶ್ರಯ ಕೊಡುವುದೂ ನೀನೇ.
3. ನೀನೇ ಬಿಟ್ಟುಬಿಟ್ಟರೆ ಇನ್ನು ಜೀವಿಗಳಿಗೆ ಏನು ಆಧಾರವಿದ್ದೀತು?
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share