ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 95

164
Share

ಶ್ರೀ ಆಂಜನೇಯ ಚರಿತ್ರೆ ಭಾಗ ಒಂದು ಪುಟ 95
ಓಂ ನಮೋ ಹನುಮತೆ ನಮಃ

681.ಮತ್ಸ್ಯ ವಲ್ಲಭ ಹೇಳ ತೊಡಗಿದ.
1. ದೀರ್ಘ ದೇವಿ ಎಂಬ ಗಂಧರ್ವ ಸ್ತ್ರೀ ಮೇಲೆ ಮತಂಗ ಮಹರ್ಷಿಗೆ ಕೋಪ ಬಂತು.
2 . ಅವನು ಅವಳಿಗೆ ಮತ್ಸ್ಯಕನ್ಯೆ ಆಗುವಂತೆ ಶಾಪಕೊಟ್ಟ.
3. ಅವಳು ಅವನ ಕಾಲಿಗೆ ಬಿದ್ದು ಬೇಡಿಕೊಂಡಳು. ಅವನು ಶಾಂತನಾಗಿ ಹನುಮಂತನ ಅನುಗ್ರಹದಿಂದ ನಿನಗೆ ಶಾಪದಿಂದ ಮುಕ್ತಿ ಸಿಗುತ್ತದೆ ಎಂದು ಅನುಗ್ರಹಿಸಿದ.
ಶ್ಲೋಕ :
ಮತ್ಸ್ಯಾ ಕಾರಂ ದೀರ್ಘದೇಹಿ
ಧೃತ್ವಾ ಲವಣ ಸಾಗರೇ
ಪ್ರಾಣಮಾನ್ ಆಂಜನೇಯಸ್ಯ ಕೃಪಯಾ ಶಾಪ ಮುಗ್ಭವ
ಅರ್ಥ : ದೀರ್ಘದೇಹಿ ! ನೀನು ಮತ್ಸ್ಯಾಕಾರವನ್ನು ಧರಿಸಿ ಲವಣ ಸಾಗರದಲ್ಲಿ ಜೀವಂತವಾಗಿರು. ಆಂಜನೇಯನ ಕೃಪೆಯಿಂದ ಶಾಪಮುಕ್ತಳಾಗುವೆಯಂತೆ.
4 . ಅವಳು ಲವಣಸಮುದ್ರದಲ್ಲಿ ದೊಡ್ಡ ಮೀನಾಗಿ ಇದ್ದಳು.
5 . ರಾಮಭಕ್ತನಾದ ಹನುಮಂತನ ದರ್ಶನ ಭಾಗ್ಯ ಕ್ಕಾಗಿ ಕಾದುಕೊಂಡಿದ್ದಳು. ಸದಾ ಹನುಮಂತನನ್ನೇ ಧ್ಯಾನ ಮಾಡಿಕೊಂಡಿದ್ದಳು.
6 . ಹೀಗಿರುವಾಗ ಸೀತಾನ್ವೇಷಣೆಗಾಗಿ ಸಮುದ್ರದ ಮೇಲೆ ಹಾರುತ್ತಿರುವಾಗ ಹನುಮಂತನಿಗೆ ಹಣೆಯ ಮೇಲೆ ಬೆವರು ಬರಲಾರಂಭಿಸಿತು.
7 . ಅವನು ತನ್ನ ಬೆರಳಿನಿಂದ ಬೆವರನ್ನು ಒರಸಿ ಕೈಕೊಡವಿಕೊಂಡ.
8 . ಆ ಸ್ವೇದಬಿಂದು ನೇರವಾಗಿ ಮೀನಿನ ರೂಪದಲ್ಲಿ ಇದ್ದ ದೀರ್ಘದೇಹಿಯ ಬಾಯೊಳಗೆ ಬಿತ್ತು.
9 . ಮಹಾತ್ಮನಾದ ಹನುಮಂತನನ್ನು ತದೇಕ ದೃಷ್ಟಿಯಿಂದ ನೋಡುತ್ತಿದ್ದ ಮತ್ಸ್ಯಕನ್ಯೆಯು ಆ ಬೆವರಿನ ಹನಿಯನ್ನು ನುಂಗುತ್ತಲೇ ಗರ್ಭವತಿಯಾದಳು.
10 . ಸ್ವಲ್ಪ ಕಾಲದ ನಂತರ ನಾನು ಅವಳ ಹೊಟ್ಟೆಯಲ್ಲಿ ಹುಟ್ಟಿದೆ.
11 . ನನ್ನ ತಾಯಿಗೆ ಶಾಪ ವಿಮೋಚನೆ ಆಯಿತು. ಹಿಂದಿನ ರೂಪ ಮರಳಿ ಬಂತು.
12 . ಭೂತ ಭವಿಷ್ಯತ್ತುಗಳನ್ನೂ ತಿಳಿದ ನನ್ನ ತಾಯಿ ನನ್ನನ್ನು ತಂದು ಈ ಮೈರಾವಣನ ಬಳಿ ಕೆಲಸಕ್ಕೆ ಸೇರಿಸಿದಳು.
13 . ಅವರ ಆಜ್ಞೆಯಂತೆ ನಾನು ಇಲ್ಲಿ ದ್ವಾರಪಾಲಕನಾಗಿ ಜೀವನ ಮಾಡಿಕೊಂಡು ಸುಖವಾಗಿದ್ದೇನೆ.
14 . ನನ್ನ ಕಥೆ ಹೇಳಿದೆ. ನೀನು ಯಾರು ? ನಿನ್ನ ವೃತ್ತಾಂತವೇನು?
682 . ಬಾಯ್ಬಿಟ್ಟುಕೊಂಡು ಕೇಳುತ್ತಾ ಕೂತಿದ್ದ ಹನುಮಂತನ ಬಾಯಿಂದ ಮಾತೇ ಹೊರಡುತ್ತಿಲ್ಲ. ಏನು ಹೇಳಬೇಕೆಂದು ತಿಳಿಯದೆ ಚೆನ್ನಾಗಿ ಯೋಚಿಸಿ ಕೊನೆಗೆ ಹೀಗೆ ಹೇಳಿದ .
1 .ಅಪ್ಪ ಆ ರಾಮದಾಸ ಆ ಹನುಮಂತ ನಾನೆಪ್ಪ !
2 . ಆ ರಾಮ ಪ್ರಭುವಿಗಾಗಿಯೇ ನಾನಿಲ್ಲಿಗೆ ಬಂದಿರುವುದು.
3 . ನಿದ್ರೆಯಲ್ಲಿದ್ದ ರಾಮಲಕ್ಷ್ಮಣರನ್ನು ಮೈರಾವಣ ಮಾಯೆಯಿಂದ ಎತ್ತಿಕೊಂಡು ಬಂದು ಮಹಾ ಮಾರಿಗೆ ಬಲಿ ಕೊಡುವುದರಲ್ಲಿದ್ದಾನೆ ಎಂದು ತಿಳಿಯಿತು.
4 . ಆ ಮಾಯಾವಿಗೆ ಆ ಅವಕಾಶ ಕೊಟ್ಟ ತಪ್ಪು ನನ್ನದೇ .
5 .ಆದ್ದರಿಂದ ನನ್ನ ಪ್ರಾಣ ಹೋದರೂ ಸರಿ ನನ್ನ ಪ್ರಭುವನ್ನು ಬಿಡಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನನ್ನದೇ.
6 . ಈ ವಿಷಯದಲ್ಲಿ ಯಾವುದು ಧರ್ಮವೆಂದು ನೀನೇ ನಿರ್ಣಯಿಸಿ ಒಂದು ನಿರ್ಣಯ ತೆಗೆದುಕೋ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share