ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 35

221
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 35
ಓಂ ನಮೋ ಹನುಮತೇ ನಮಃ

304) ಹನುಮಂತನ ಬಾಯಿಂದ ನಿಜ ಹೊರಬರುತ್ತಲೇ ಆ ಹೊಸಬರಲ್ಲಿ ದೊಡ್ಡವನ ಮುಖ ಮೊರದಷ್ಟು ಅಗಲವಾಯಿತು.
305) ಅದನ್ನು ನೋಡಿದ ಹನುಮಂತ ಉಬ್ಬಿಹೋದ. “ನಮ್ಮ ಸುಗ್ರೀವ ಮಹಾರಾಜ ತಮ್ಮ ಸ್ನೇಹಕ್ಕಾಗಿ ಹಾತೊರೆಯುತ್ತಿದ್ದಾನೆ. ಒಂದು ಸಾರಿ ನಮ್ಮ ಬೆಟ್ಟಕ್ಕೆ ಬನ್ನಿ” ಎಂದು ಕೇಳಿ ವಿನಯದಿಂದ ನಮಸ್ಕಾರ ಮಾಡಿದ.
306) ಈ ಮಾತನ್ನು ಕೇಳುತ್ತಲೇ ದೊಡ್ಡವನ ತುಟಿಗಳ ಮೇಲೆ ತುಂಬು ಬೆಳದಿಂಗಳಿನಂತಹ ಕಿರುನಗೆ ಮೂಡಿತು.
307) ಅವನು ತನ್ನ ತಮ್ಮನ ಕಡೆಗೆ ತಿರುಗಿ ಆನಂದದಿಂದ ಹೀಗೆ ಹೇಳಿದ –
1. ಲಕ್ಷ್ಮಣಾ! ನಾವು ಯಾರಿಗೋಸ್ಕರ ಹುಡುಕುತ್ತಿದ್ದೆವೋ ಆ ಸುಗ್ರೀವನ ಮಂತ್ರಿಯೇ ನಮ್ಮ ಹತ್ತಿರ ಬಂದಿದ್ದಾನೆ. ಅವನೊಡನೆ ನಗುತ್ತಾ ಮಾತಾಡು.
2. ಈ ಹನುಮಂತ ಸಾಮಾನ್ಯದವನಲ್ಲ. ಮಹಾ ಪಂಡಿತನ ಹಾಗೆ ಕಾಣಿಸುತ್ತಾನೆ.
3. ಶ್ಲೋಕ೤೤
ನಾನೃಗ್ವೇದ ವಿನೀತಸ್ಯ
ನಾಯಜುರ್ವೇದ ಧಾರಿಣಃ೤
ನಾ ಸಾಮವೇದ ವಿದುಷಃ
ಶಕ್ಯಮೇವಂ ಪ್ರಭಾಷಿತುಮ್‌೤೤
ನೂನಂ ವ್ಯಾಕರಣಂ ಕೃತ್ಸ್ನಂ
ಅನೇನ ಬಹುಧಾ ಶ್ರುತಮ್‌೤
ಬಹುವ್ಯಾಹಾರತಾನೇನ ನಕಿಂಚಿದಪಶಬ್ದಿತಮ್‌೤೤
(ಅರ್ಥ : ಋಗ್ವೇದ, ಯಜುರ್ವೇದ, ಸಾಮವೇದಗಳು ಬರದವನು
ಈ ವಿಧವಾಗಿ ಮಾತಾಡಲಾರ. ಇವನು ವ್ಯಾಕರಣವನ್ನೂ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಇಷ್ಟು ಮಾತಾಡಿದರೂ ಒಂದೇ ಒಂದು ಅಪಶಬ್ದವನ್ನೂ ನುಡಿದಿಲ್ಲ.)
4. ಎಂದು ರಾಮನು ಬಗೆಬಗೆಯಾಗಿ ಹನುಮಂತನನ್ನು ಪ್ರಶಂಸೆ ಮಾಡಿದನು.
308) ಆಗ ಲಕ್ಷ್ಮಣನು –
1. “ಸುಗ್ರೀವನ ಬಗ್ಗೆ ಕೇಳಿದ್ದೇವೆ. ಅವನು ಹೇಳಿದಂತೆ ಮಾಡೋಣ ಎಂದುಕೊಂಡಿದ್ದೇವೆ.” ಎಂದು ಹೇಳಿದ.
2. ತಾವು ವನವಾಸಕ್ಕೆ ಬಂದ ಕಥೆಯನ್ನು ವಿವರಿಸಿ, ಸೀತಾಪಹರಣದ ಸಂಗತಿಯನ್ನು ವಿಶೇಷವಾಗಿ ಹೇಳಿದ. ಕಬಂಧ ಎಂಬ ರಾಕ್ಷಸನು ದಾರಿಯಲ್ಲಿ ಸಿಕ್ಕಿದ್ದನೆಂದೂ, ರಾಮನ ಕೃಪೆಯಿಂದ ಅವನು ಶಾಪಮುಕ್ತನಾಗಿ ಗಂಧರ್ವರೂಪವನ್ನು ಪಡೆದದನ್ನೂ ಹೇಳಿದ. “ಅವನು ನಮಗೆ ಸುಗ್ರೀವನ ಬಗ್ಗೆ ಒಳ್ಳೆ ಮಾತುಗಳನ್ನು ಹೇಳಿದ್ದಾನೆ” ಎಂದೂ ಹೇಳಿದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share