ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 90

186
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 90
ಓಂ ನಮೋ ಹನುಮತೇ ನಮಃ

650) ಅತ್ತ ಮೈರಾವಣನು ರಾಮಲಕ್ಷ್ಮಣರನ್ನು ಪಾತಾಳಕ್ಕೆ ಕೊಂಡೊಯ್ದು, ಇವರನ್ನು ಏನು ಮಾಡುವುದು ಎಂದು ಯೋಚಿಸಿ, ಕೊನೆಗೆ ತನ್ನ ಉಪಾಸನಾ ದೇವತೆಯಾದ ಮಹಾಮಾರಿಗೆ ಬಲಿ ಕೊಡಲು ನಿರ್ಧರಿಸಿದ.
651) ಆದರೆ ಬಲಿ ಕೊಡುವ ವಿಧಾನದ ಪ್ರಕಾರ ಮನೆಯ ಹೆಣ್ಣುಮಗಳು ಕೊಡದಲ್ಲಿ ನೀರುತಂದು, ಬಲಿಯಾಗಲಿರುವ ವ್ಯಕ್ತಿಗೆ ಸ್ನಾನ ಮಾಡಿಸಬೇಕಾಗಿತ್ತು.
ದುರ್ದಂಡಿ
652) ರಾವಣನಿಗೆ ದುರ್ದಂಡಿ ಎಂಬ ತಂಗಿ ಇದ್ದಳು. ಆದರೆ ಅವಳಿಗೂ ರಾವಣನಿಗೂ ಒಂದುಸಾರಿ ಜಗಳವಾಗಿ, ಅವನು ಅವಳನ್ನೂ, ಅವಳ ಗಂಡನನ್ನೂ ಅವಳ ಮಗನನ್ನೂ ಸಂಕೋಲೆ ಹಾಕಿ ಬಂಧನದಲ್ಲಿ ಇಟ್ಟಿದ್ದ.
653) ಈಗ ವಿಧಿಯಿಲ್ಲದೇ
ಆ ತಂಗಿಯನ್ನೇ ಕರೆದುಕೊಂಡು ಬಂದು ಹೀಗೆ ಹೇಳಿದು.
1. ದುರ್ದಂಡೀ! ಮಹಾಮಾರಿಗೆ ಬಲಿಕೊಡೋಣವೆಂದು ಈ ಇಬ್ಬರು ಮನುಷ್ಯರನ್ನು ತಂದಿದ್ದೇನೆ.
2. ನೀನು ಊರ ಹೊರಗಡೆ ಇರುವ ಕೊಳದಿಂದ ನೀರು ತಂದು ಇವರ ನೆತ್ತಿಯಮೇಲೆ ಹಾಕಬೇಕು.
3. ಇವರನ್ನು ಬಲಿಕೊಟ್ಟರೆ ನನಗೆ ಇನ್ನೂ ಹೆಚ್ಚು ಶಕ್ತಿ ಬರುತ್ತದೆ.
4. ನನಗೆ ಈ ಸಹಾಯ ಮಾಡಿದರೆ ನಿಮ್ಮೆಲ್ಲರ ಸಂಕೋಲೆಗಳನ್ನೂ ತೆಗೆಸುತ್ತೇನೆ.
5. ಈಗ ಮಾತ್ರ ಈ ಸಂಕೋಲೆಗಳೊಡನೆಯೇ ಹೋಗಿ ನೀರು ತಾ!
654) ಮೊದಲೇ ದುಃಖದಲ್ಲಿದ್ದ ದುರ್ದಂಡಿ ಇನ್ನೂ ವಿಲಪಿಸಿದಳು. ಸೌಮ್ಯರಾಗಿದ್ದ ರಾಮಲಕ್ಷ್ಮಣರನ್ನು ನೋಡಿದಾಗಲಿಂದ ಅವಳಿಗೆ ‘ಅಯ್ಯೋ ಪಾಪ’ ಅನಿಸುತ್ತಿತ್ತು. ರಾಮನನ್ನು ಭಕ್ತಿಯಿಂದ ಹೀಗೆ ಸ್ತೋತ್ರಮಾಡಿದಳು.
ಶ್ಲೋಕ೤೤
ಕನಕನಿಕಷಭಾಸಾ ಲಕ್ಷ್ಮಣೇ ನಾನುನೀತೋ
ನವಕುವಲಯ ದಾಮ ಶ್ಯಾಮ
ವರ್ಣಾಭಿರಾಮಃ
ಅಭಿನವ ಇವ ವಿದ್ಯುನ್ಮಂಡಿತೋ
ಮೇಘದಂಡಃ
ಶಮಯತು ಮಮ ತಾಪಂ ಸರ್ವತೋ
ರಾಮಚಂದ್ರಃ
ಪುತ್ತಳಿಗೊಂಬೆಯಂತಹ ಲಕ್ಷ್ಮಣನಿಂದ ಹಿಂಬಾಲಿಸಲ್ಪಡುವವನೂ, ಹೊಸ ಕಮಲದ ಹೂವಿನಂತೆ ಕಾಂತಿಯಿಂದ ಪ್ರಕಾಶಿಸುತ್ತಾ ಆನಂದ ಕೊಡುವವನೂ, ವಿದ್ಯುತ್ ಕಾಂತಿಯಿಂದ ಶೋಭಿಸುತ್ತಿರುವ ಹೊಸ ಮೇಘಮಾಲೆಗಳಂತೆ ಇರುವವನೂ ಆದ
ರಾಮಚಂದ್ರನು ನನ್ನ ತಾಪವನ್ನು (ದುಃಖವನ್ನು ಪಾಪವನ್ನು) ಶಮನ ಮಾಡಲಿ!
655) ಅಣ್ಣ ಸಾಯಿಸಿಬಿಡುತ್ತಾನೆಂದು ಹೆದರಿ, ಅವಳು ಕೊಡ ಹಿಡಿದುಕೊಂಡು ನೀರಿಗಾಗಿ ಹೊರಟಳು.
656) ಅತ್ತ ಲಂಕೆಯಲ್ಲಿ ಹನುಮಂತನು, ‘ನನ್ನಿಂದಲೇ ಈ ಅಚಾತುರ್ಯ ನಡೆಯಿತು’ ಎಂದು ಕಣ್ಣೀರು ಹಾಕಿಕೊಂಡು ಅಳುತ್ತಿದ್ದ. ಸ್ವಲ್ಪ ಹೊತ್ತಾಯಿತು. ಹನುಮಂತ ಉಗ್ರನಾದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share