ಸಂಪಾದಕೀಯ-ಕಾಂಗ್ರೆಸ್ಸಿಗೆ ಈಗ ಕರ್ನಾಟಕ ಮಾತ್ರ ಆಸರೆ

226
Share

 

ಉತ್ತರ ಪ್ರದೇಶ ಉತ್ತರಾಖಂಡ ಮಣಿಪುರ ಪಂಜಾಬ್ ಹಾಗೂ ಗೋವಾ ಈ ಪಂಚ ರಾಜ್ಯಗಳ ಚುನಾವಣೆಯ ಪ್ರಕ್ರಿಯೆ ನಂತರ ಇದೀಗ ಇಂದು ಸೋಲು ಗೆಲುವುಗಳು ಹೊರಹೊಮ್ಮಿದ್ದು ಭಾರತೀಯ ಜನತಾ ಪಕ್ಷ ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದರೆ,ಪಂಜಾಬ್ ಮಾತ್ರ ಎಎಪಿ ಪಾರ್ಟಿಯ ಪಾಲಾಗಿದೆ.
ಕಾಂಗ್ರೆಸ್ ಪಕ್ಷ ಎಲ್ಲೆಡೆಯೂ ಹೀನಾಯ ಸೋಲು ಅನುಭವಿಸಿದ್ದು ಬರುವ ದಿನಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಂಭವವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಂಜಾಬಿನಲ್ಲಿ ಕಾಂಗ್ರೆಸ್ ಆಡಳಿತ  ವಿದ್ದಾಗಲೂ ಆಂತರಿಕವಾಗಿ ನಾಯಕರ ಕಚ್ಚಾಟದಿಂದ ಆಮ್ ಆದ್ಮಿ ಪಕ್ಷ ತನ್ನ ಬಾವುಟ ಹಾರಿಸಬೇಕಾಯಿತು.
ಗೋವಾ ಹೊರತುಪಡಿಸಿದಂತೆ ಭಾರತೀಯ ಜನತಾ ಪಕ್ಷವು ಉತ್ತರಪ್ರದೇಶ ಉತ್ತರಖಂಡ ಮಣಿಪುರದಲ್ಲಿ ನಿಶ್ಚಳ ಬಹುಮತದಿಂದ ಯಾವುದೇ ತೊಂದರೆಯಿಲ್ಲದೆ ಸ್ವತಂತ್ರವಾಗಿ ಆಡಳಿತ ನಿರ್ವಹಿಸಬಹುದಾಗಿದೆ ಆದರೆ ಗೋವಾದಲ್ಲಿ ಕೇವಲ 1ಅಥವಾ 2ಸ್ಥಾನಗಳು ವಂಚಿತವಾಗುವ ಸಾಧ್ಯತೆ ಇದ್ದು ಇತರರ ಸಹಾಯದಿಂದ ಆಡಳಿತ ನಡೆಸುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್ ಎತ್ತ ಸಾಗುತ್ತಿದೆ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಉತ್ತರಪ್ರದೇಶದಲ್ಲಂತೂ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಅಳಿಸಿ ಹೋಗಿದೆ.
ಐತಿಹಾಸಿಕ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರುವ ಮುನ್ನ ತಮ್ಮ ನಾಯಕತ್ವವನ್ನು ಪರಾಮರ್ಶಿಸಿದರೆ ಒಳಿತು.
ಕಾಂಗ್ರೆಸ್ ಮುಖಂಡರುಗಳಾದ ಸೋನಿಯಾಗಾಂಧಿಯ ನಿರ್ಲಿಪ್ತತೆ, ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿಯವರ ಪರಿಪಕ್ವವಿಲ್ಲದ ನಾಯಕತ್ವ , ವಿವಿಧ ರಾಜ್ಯಗಳಲ್ಲಿ ಹಿರಿಯನಾಯಕರ ಕಚ್ಚಾಟ ಇಂದು ಕಾಂಗ್ರೆಸ್ ಪಕ್ಷ ಅಧೋಗತಿಗೆ ತಳ್ಳಲ್ಪಡುತ್ತಿದೆ.
ಏಕೆ ಕಾಂಗ್ರೆಸ್ ಪಕ್ಷ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ? ಇದು ಹೀಗೆ ಮುಂದುವರೆದರೆ ಖಂಡಿತಾ ಕಾಂಗ್ರೆಸ್ ಮುಂದೆ ತಲೆ ಎತ್ತಲು ಸಾಧ್ಯವಿಲ್ಲ .
ಕಾಂಗ್ರೆಸ್ ವರಿಷ್ಠರು ಕೂಡಲೇ ಆತ್ಮವಿಮರ್ಶೆ ಮಾಡಿಕೊಂಡು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಇತಿಹಾಸಕ್ಕೆ ತಳ್ಳಲ್ಪಡುವುದು.
ಬಹುಶಃ ಅಖಂಡ ಭಾರತದಲ್ಲಿ ಕಾಂಗ್ರೆಸ್ಸಿಗೆ ಇರುವುದೊಂದೇ ನೆಲ ಎಂದರೆ ಈಗ ಕರ್ನಾಟಕ ಮಾತ್ರ ಎಂದರೆ ತಪ್ಪಾಗಲಾರದು.
ಕರ್ನಾಟಕದಲ್ಲಿ ಆಡಳಿತದಲ್ಲಿರುವ ಭಾರತೀಯ ಪಕ್ಷವನ್ನು ಸಮರ್ಥವಾಗಿ ನಾಯಕರುಗಳ ಕಚ್ಚಾಟ ವಿಲ್ಲದೆ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಬೆಲೆ ಕೊಟ್ಟು ಸಮರ್ಥವಾಗಿ ಹೋರಾಡಿದರೆ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಉಸಿರು ಉಳಿಸಿಕೊಳ್ಳಬಹುದು.
ಪ್ರಚಾರಕ್ಕಷ್ಟೇ ಸೀಮಿತಗೊಳ್ಳದೆ ವ್ಯವಸ್ಥಿತವಾಗಿ ಆಡಳಿತದ ಲೋಪದೋಷಗಳನ್ನು ಎತ್ತಿ ಹಿಡಿದು ಜನರೊಡನೆ ಸ್ಪಂದಿಸಿದರೆ ಮಾತ್ರ ಕಾಂಗ್ರೆಸ್ ಅಸ್ತಿತ್ವಕ್ಕೆ ಪೂರಕವಾಗುವುದು.
ಫೀನಿಕ್ಸ್ ಪಕ್ಷಿಯಂತೆ ಕಾಂಗ್ರೆಸ್ ಪಕ್ಷವು ಈಗ ಕರ್ನಾಟಕದಿಂದ ಮಾತ್ರ ಹೊರಬರಲು ಸಾಧ್ಯ.ಒಟ್ಟಿನಲ್ಲಿ ಕಾಂಗ್ರೆಸ್ ಗೆ ಈಗ ಕಾಲಾಯ ತಸ್ಮೈ ನಮಃ ಎಂದು ಹೇಳಬಹುದು.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನೆಹರು ಕುಟುಂಬದ ಮೇಲಿನ ಅಭಿಮಾನ ಕಾಂಗ್ರೆಸ್ ಪಕ್ಷ ಇಂದು ಹೀನಾಯ ಪರಿಸ್ಥಿತಿಗೆ ತಲುಪಲು ಕಾರಣವಾಗುತ್ತದೆ.
ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರ ಕೊರತೆ ನೀಗಿಸಲು ಸಾಧ್ಯವಾಗಲೇ ಇಲ್ಲ
ಈಗಲಾದರೂ ಕಾಂಗ್ರೆಸ್ ಪಕ್ಷ ಪಕ್ಷ ತೊರೆದವರನ್ನು ಮತ್ತೆ ವಿಶ್ವಾಸಕ್ಕೆ ಗಣನೆಗೆ ತೆಗೆದುಕೊಂಡರೆ ಮಾತ್ರ ದೇಶದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಭವಿಷ್ಯ ಎದುರುನೋಡಬಹುದು.

Share