ಸಂಪಾದಕೀಯ : ತಾಯಿಯ ಅಗಲಿಕೆಯಲ್ಲೂ ಕರ್ತವ್ಯ ಚುತಿ ಮಾಡದ ಮೋದಿ

216
Share

ಎಂತಹವರೇ ಆಗಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಡೆ-ನುಡಿಗಳನ್ನು ಏಕೆ ಇಷ್ಟಪಡುತ್ತಾರೆ ? ಎಂದರೆ ಅವರ ಸರಳತೆ ಹಾಗೂ ಬದ್ಧತೆ. ಇದಕ್ಕೆ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದಾರೆ.
ಇಂದು ತಮ್ಮ ಶತಾಯುಷಿ ತಾಯಿ ಹೀರಬೇನ್ ರವರನ್ನು ಕಳೆದುಕೊಂಡ ದಿನ . ಜೀವನದ ಉದ್ದಕ್ಕೂ ಅತ್ಯಂತ ಕಷ್ಟಮಯವಾಗಿ ಸರಳತೆಯಿಂದ ಸಂಸಾರ ಮಾಡಿಸಿಕೊಂಡು ಬಂದಂತಹ ಹೀರಾ ಬೇನ್ ಕುಟುಂಬ, ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಹಾದಿಗಾಗಿ ಮನೆಯನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಅವರ ತಾಯಿ ಅವರನ್ನು ಹೋಗಲು ಅವಕಾಶ ಮಾಡಿಕೊಟ್ಟು, ಅವರಿಗೆ ಹೇಳಿದ ಮಾತು ಇಷ್ಟಪಟ್ಟು ಮಾಡುವ ಕೆಲಸವನ್ನು ಜನ ಮೆಚ್ಚುವರು, ಬುದ್ಧಿವಂತನಾಗಿ ಶುದ್ಧ ಹಸ್ತದಿಂದ ಕೆಲಸ ಮಾಡು, ಹಣದ ಆಸೆಗೆ ಒಳಗಾಗಬೇಡ, ನೀ ಮಾಡಿದ ಕೆಲಸ ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು. ಆ ತಾಯಿಯ ಆಶೀರ್ವಾದದಿಂದಲೇ ಭವ್ಯ ಭಾರತದ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದವರು.
ನರೇಂದ್ರ ಮೋದಿ ಅವರ ಸರಳತೆಗೆ ಇಂದು ಮತ್ತೊಂದು ಉದಾಹರಣೆ ಎಂದರೆ ತಮ್ಮ ತಾಯಿಯ ಅಗಲಿಕೆಯಿಂದ ದೃತಿಗೆಡದೆ ಮಾಡಬೇಕಾದ ಅಂತ್ಯಕ್ರಿಯೆಯನ್ನು ಅತ್ಯಂತ ಸರಳವಾಗಿ, ವೈದಿಕ ಕರ್ಮಾನು ಸಾರವಾಗಿ ಹೆಗಲಿಗೆ ಹೆಗಲು ಕೊಟ್ಟು ಸರ್ಕಾರಿ ರುದ್ರಭೂಮಿಯಲ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮುಖಾಂತರ ಎಲ್ಲಾ ಕಾರ್ಯಗಳನ್ನು ಕೇವಲ ಕೆಲವೇ ತಾಸುಗಳಲ್ಲಿ ಮಾಡಿ ಮುಗಿಸಿದರು. ಅಲ್ಲದೆ ತಮ್ಮ ಮುಂದಿನ ಕೆಲಸಕ್ಕೆ ಸಜ್ಜಾಗಿ ಹೊರಟರು. ಪಶ್ಚಿಮ ಬಂಗಾಳದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಾವುದೇ ಕಾರ್ಯಕ್ರಮವನ್ನು ರದ್ದು ಪಡಿಸದೆ ನಿಗದಿತ ಸಮಯಕ್ಕೇ ತೆರಳಿದರು.
ಯಾವುದೇ ಕರ್ತವ್ಯ ಚುತಿ ಮಾಡದೆ ತಮ್ಮ ತಮ್ಮ ನಿತ್ಯ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂದು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿ ಅಂತ್ಯಕ್ರಿಯೆ ಸಮಯಕ್ಕೆ ಯಾರನ್ನು ಬರಮಾಡಿಕೊಳ್ಳಲಿಲ್ಲ.
ಇದು ಸರ್ವರು ಮೆಚ್ಚುವಂತಹ ನಡೆ, ಆದ್ದರಿಂದಲೇ ಮೋದಿ ಒಂದು ರೀತಿ ಎಲ್ಲರಿಗೂ ಮಾದರಿ.
ದೇಶ ಸೇವೆಗೆ ಮೊದಲ ಆದ್ಯತೆ ನೀಡಿ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿರುವ ನರೇಂದ್ರ ಮೋದಿ ಮತ್ತು ಅವರ ಕುಟುಂಬಕ್ಕೆ ತಾಯಿಯ ಅಗಲಿಕೆಯ ನೋವು ಬರಿಸುವ ಶಕ್ತಿ ನೀಡಲೆಂದು ನಾವು ನೀವೆಲ್ಲರೂ ಪ್ರಾರ್ಥಿಸೋಣ.


Share