ಸಂಪಾದಕೀಯ : ಬಿಜೆಪಿ – ಶೆಟ್ಟರ್ : ಇಬ್ಬರೂ ಸೋತವರು, ಮತ್ತೆ ಇಬ್ಬರೂ ಗೆಲ್ಲುತ್ತಾರೆಯೇ ?

215
Share

ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸುದ್ದಿಯಲ್ಲಿದ್ದ ವಿಷಯ ಶೆಟ್ಟರ್ ಬಿಜೆಪಿ ಬಿಟ್ಟಿದ್ದು, ಕಾಂಗ್ರೆಸ್ ಸೇರಿದ್ದು. ಎಲ್ಲರಿಗೂ ಕುತೂಹಲ ಮೂಡಿಸಿದ ವಿಷಯದಲ್ಲಿ ಶೆಟ್ಟರ್ ಅವರು ಕಾಂಗ್ರೆಸ್ ನಿಂದ ಶಾಸಕರ ಸ್ಥಾನದಲ್ಲಿ ಸೋತರು. ಕಾಂಗ್ರೆಸ್ ಪಕ್ಷವು ಅವರನ್ನು ಎಂಎಲ್ಸಿ ಮಾಡಿತು. ಬಿಜೆಪಿಯವರು ಶೆಟ್ಟರ್ ವಿರುದ್ಧ ಗೆದ್ದರೂ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳನ್ನು ಕಳೆದುಕೊಂಡು ಒಂದು ರೀತಿಯಲ್ಲಿ ಸೋತಿತ್ತು.
ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜಗದೀಶ್ ಶೆಟ್ಟರ್ ಇಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸೋತವರೆಂದೇ ಹೇಳಬಹುದು. ಈಗ ಮುಂಬರುವ ಲೋಕಸಭಾ ಚುನಾವಣೆ ಸಮಯದಲ್ಲಿ ಇದೇ ಜಗದೀಶ್ ಶೆಟ್ಟರ್ ಅವರು ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದಾರೆ.
ಬಿಜೆಪಿ ಮತ್ತೆ ಜಗದೀಶ್ ಶೆಟ್ಟರ್ ಅವರಿಗೆ ಲೋಕಸಭಾ ಟಿಕೆಟ್ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಯವರೇ ಅವರನ್ನು ಮತ್ತೆ ಆಹ್ವಾನಿಸಿದ್ದು ಜಗದೀಶ್ ಶೆಟ್ಟರ್ ಗೆ ತಾವು ಒಂದು ರೀತಿಯಲ್ಲಿ ಗೆದ್ದಂತೆ ಎಂದು ಭಾವಿಸಿರಬಹುದು. ಬಿಜೆಪಿಯು ಶೆಟ್ಟರ್ ರನ್ನು ವಾಪಸ್ಸು ಕರೆಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರಿಂದ ಉತ್ತರ ಕರ್ನಾಟಕದ ಲಿಂಗಾಯತ ಮತಗಳನ್ನು ಮತ್ತೆ ಪಡೆಯುವಲ್ಲಿ ಯಶಸ್ವಿಯಾಗಬಹುದು, ಗೆಲ್ಲಬಹುದು ಎನ್ನುವ ನಿರೀಕ್ಷೆ ಇರಬಹುದು. ಒಮ್ಮೆ ಬಿಜೆಪಿ ಶೆಟ್ಟರ್ ಇಬ್ಬರೂ ಸೋತಿದ್ದಾಯಿತು ಮತ್ತೆ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇದು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದಾ ಅನ್ನುವುದು ಸಾರ್ವಜನಿಕರು ಹುಬ್ಬೇರಿಸಿ ನೋಡುವಂತಾಗಿದೆ. ಬಹುಶಃ ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಬಹುದು. ಅಲ್ಲಿಯವರೆಗೆ ಕಾದು ನೋಡೋಣ.

Share