ಸಂಪಾದಕೀಯ :ಹೆಸರು ಬದಲಿಸುವ ಸಂಕುಚಿತ ರಾಜಕಾರಣದಿಂದ ಹೊರಗೆ ಬನ್ನಿ

258
Share

ಭಾರತದಲ್ಲೀಗ ಎಪ್ಪತ್ತೈದನೇ ವರ್ಷದ ಅಮೃತ ಸ್ವಾತಂತ್ರ್ಯೋತ್ಸವ ಕಹಳೆ ಮೊಳಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಅಮೃತ ಧಾರೆಯನ್ನೇ ಹರಿಸುತ್ತಿವೆ. ಎಪ್ಪತ್ತೈದು ವರ್ಷಗಳ ಭವ್ಯ ಇತಿಹಾಸದಲ್ಲಿ ಅನೇಕ ಪ್ರಧಾನಿಗಳು ಆಡಳಿತ ನಡೆಸಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ.ಆದರೆ ಹಾಲಿ ಆಡಳಿತ ದಲ್ಲಿರುವ ಸರ್ಕಾರಗಳು ಹಿಂದಿನವರ ಸಾಧನೆಗಳನ್ನು ತೇಜೋವಧೆ ಮಾಡುತ್ತಾ ತಾವು ಘೋಷಿಸುವ ಯೋಜನೆಗಳೇ ಪ್ರಮುಖವಾದವು ಎಂಬಂತೆ ಬಿಂಬಿಸಲು ಹೊರಟಿರುವುದು ದೊಡ್ಡ ವಿಪರ್ಯಾಸ ಯಾವುದೇ ಸರ್ಕಾರ ಜನಮನ್ನಣೆ ಇಲ್ಲದೆ ಅಧಿಕಾರಕ್ಕೆ ಬರುವುದಿಲ್ಲ ಆದರೆ ಹಾಲಿ ಅಧಿಕಾರಕ್ಕೆ ಬಂದವರು ಹಿಂದಿನ ಸರ್ಕಾರದ ಕೊಡುಗೆಗಳನ್ನು ಸ್ಮರಿಸುತ್ತಾ ಗೌರವಪೂರ್ಣವಾಗಿ ಮುಂದುವರೆಸಿ ಹೊಸ ಕೊಡುಗೆಗಳನ್ನು ನೀಡುವುದರ ಜತೆಗೆ ಮತ್ತಷ್ಟು ಜನಮನ್ನಣೆಗಳಿಸಬೇಕು.
ಸಂಕುಚಿತ ರಾಜಕಾರಣಕ್ಕೆ ಕೈ ಹಾಕಬಾರದು.
ಹಿಂದಿನ ಸರ್ಕಾರ ಘೋಷಿಸಿದಂತ ಅನ್ನಭಾಗ್ಯ ಯೋಜನೆಯಡಿಯ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸಿ ಬೇರೊಂದು ಹೆಸರಿಡುವ ಹುನ್ನಾರ .ರಾಜೀವ್ ಗಾಂಧಿ ಹೆಸರಿನ ಸಂಸ್ಕೃತ ಗ್ರಂಥಾಲಯದ ಹೆಸರು ಬದಲಾವಣೆ, ಖೇಲ್ ರತ್ನ ಪ್ರಶಸ್ತಿಯ ಹೆಸರು ಬದಲಾವಣೆ ಹೀಗೆ ಹತ್ತು ಹಲವು ಉದಾರಹಣೆಗಳನ್ನು ಪಟ್ಟಿ ಮಾಡಬಹುದು.
ಯಾವುದೇ ಸರ್ಕಾರಗಳು
ಸಂಕುಚಿತ ರಾಜಕಾರಣದಿಂದ ಹೊರಗೆ ಬರದೇ ಹೋದರೆ ಮುಂದೊಂದು ದಿನ ಹಾಲಿ ಸರ್ಕಾರಗಳು ನೀಡುವ ಯೋಜನೆಗಳು ಅದರ ಹೆಸರುಗಳನ್ನು ಮುಂಬರುವ ಸರಕಾರಗಳು ಮತ್ತೊಮ್ಮೆ ಬದಲಿಸಿದರೆ ಇದು ಅವಮಾನಕರ ಇಂಥ ಸೂಕ್ಷ್ಮ ವಿಚಾರಗಳು ಮೇಧಾವಿ ನಾಯಕರು ಅನ್ನಿಸಿಕೊಂಡಂಥ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಏಕೆ ಹೊಳೆಯುತ್ತಿಲ್ಲ? ವಾಜಿಪೇಯಿ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ವತಃ ಮೋದಿ ಹೆಸರುಗಳನ್ನೇ ಮುಂದೊಂದು ದಿನ ಬದಲಿಸಿದರೆ ಹೇಗಾಗಬಹುದು? ಪ್ರಧಾನ ಮಂತ್ರಿಗಳು ಭಟ್ಟಂಗಿಗಳಿಗೆ ಏಕೆ ಪ್ರೋತ್ಸಾಹಿಸುತ್ತಿದ್ದಾರೆಂದು ತಿಳಿಯುತ್ತಿಲ್ಲ ?
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ
” ಮಹನೀಯರ ಹೆಸರು ಬದಲಿಸಿದರೂ ಅವರು ಜನಮಾನಸದಲ್ಲಿ ಚಿರಸ್ಥಾಯಿ ಆಗಿರುವರು ಎನ್ನುವುದನ್ನು ಮರೆಯಬಾರದು”ಎಂಬುದು ಅಕ್ಷರ ಸಹ ಸತ್ಯ.ಹಾಲಿ ಆಡಳಿತಗಾರರು ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ಬರದ ಹಾಗೆ ಆಡಳಿತ ನೀಡಲಿ ಎಂಬುದೇ ಎಲ್ಲರ ಆಶಯ.


Share