26/03/2022 ರ ಸರ್ಕಾರಿ ಅರ್ಜಿ ಆಹ್ವಾನ

275
Share

ನಂಜನಗೂಡು: ನಿವೇಶನಕ್ಕೆ ಅರ್ಜಿ ಆಹ್ವಾನ
ಮೈಸೂರು,):- ನಂಜನಗೂಡು ನಗರಸಭಾ ಕಾರ್ಯಾಲಯ ವತಿಯಿಂದ ನಗರ ನಿವೇಶನ ಯೋಜನೆಯಡಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ನಿವೇಶನ ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ಕರ್ನಾಟಕ ಪ್ರಜೆಗಳಾಗಿರಬೇಕು, ನಂಜನಗೂಡು ನಗರಸಭೆಯಲ್ಲಿ ಕನಿಷ್ಠ 05 ವರ್ಷಗಳಿಂದ ಖಾಯಂ ನಿವಾಸಿಗಳಾಗಿರಬೇಕು, 18 ರಿಂದ 35 ವರ್ಷ ವಯೋಮಿತಿಯಲ್ಲಿರಬೇಕು, ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು.
ಅರ್ಜಿಯೊAದಿಗೆ ಬಿ.ಪಿ.ಎಲ್ ಕಾರ್ಡ್ ಪ್ರತಿ ಲಗತ್ತಿಸಬೇಕು ಮತ್ತು ಅರ್ಜಿದಾರರು ಹಾಗೂ ಕುಟುಂಬದ ಇತರೆ ಸದಸ್ಯರ ಹೆಸರಿನಲ್ಲಿ ಸರ್ಕಾರದ ಯಾವುದೇ ಯೋಜನೆ ವತಿಯಿಂದ ನಿವೇಶನ ಮತ್ತು ವಸತಿ ಸೌಲಭ್ಯ ಹೊಂದಿರಬಾರದು.
ಇತ್ತೀಚಿನ 3 ಫೋಟೋವನ್ನು ಲಗತ್ತಿಸಬೇಕು ಮತ್ತು ಕಡ್ಡಾಯವಾಗಿ ಮಹಿಳಾ ಫಲಾನುಭವಿ ಅರ್ಜಿಯನ್ನು ಪರಿಗಣಿಸಲಾಗುವುದು(ಅಂಗವಿಕಲ, ಮಾಜಿ ಸೈನಿಕ, ವಿಧುರ, ಹಿರಿಯ ನಾಗರೀಕರನ್ನು ಹೊರತು ಪಡಿಸಿ)
ಫಲಾನುಭವಿಯನ್ನು ಸರ್ಕಾರದ ಮಾರ್ಗಸೂಚಿ ರೀತ್ಯಾ ಮೀಸಲಾತಿಯನ್ನು ಆಯ್ಕೆ ಪ್ರಕ್ರಿಯೆಯನ್ನು ನಗರ ಆಶ್ರಯ ಸಮಿತಿ ಕ್ರಮ ಕೈಗೊಳ್ಳುತ್ತದೆ, ಅರ್ಜಿದಾರರ ಅರ್ಜಿಯನ್ನು ಪರಿಗಣಿಸುವ ಮತ್ತು ತಿರಸ್ಕರಿಸುವ ಅಧಿಕಾರವನ್ನು ಕಾನೂನು ರೀತ್ಯಾ ಪೌರಾಯುಕ್ತರು ಕಾಯ್ದಿರಿಸಿಕೊಂಡಿರುತ್ತಾರೆ.
ಅರ್ಜಿಯನ್ನು 2022ರ ಮಾರ್ಚ್ 22 ರಿಂದ ಏಪ್ರಿಲ್ 11 ರವರೆಗೆ ವಿತರಿಸಲಾಗುತ್ತದೆ ಹಾಗೂ ಭರ್ತಿ ಮಾಡಿದ ಅರ್ಜಿಯನ್ನು 2022ರ ಏಪ್ರಿಲ್ 21ರೊಳಗೆ ಸಲ್ಲಿಸಬೇಕು, ತಡವಾಗಿ ಬಂದ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಂಜನಗೂಡಿನ ನಗರಸಭೆಯನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬೇಕು ಎಂದು ನಂಜನಗೂಡಿನ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share