31/03/2022 ರ ಸರ್ಕಾರಿ ಅರ್ಜಿ ಆಹ್ವಾನ

358
Share

ರೀಲರ್ಸ್ ಯಿಂದ ಅರ್ಜಿ ಆಹ್ವಾನ

ರಾಮನಗರ, ರೇಷ್ಮೆ ಇಲಾಖೆ ವತಿಯಿಂದ 2022-23 ನೇ ಸಾಲಿನ ವಿವಿಧ ಕಾರ್ಯಕ್ರಮಗಳಡಿ ರೇಷ್ಮೆ ನೂಲು ಬಿಚ್ಚಣಿಕೆಗೆ ರೀಲಿಂಗ್ ಶೆಡ್, ಮಲ್ಟಿ ಎಂಡ್ ಹಾಗೂ ಸುಧಾರಿತ ಕಾಟೇಜ್ ಬೇಸಿನ್ ರೀಲಿಂಗ್ ಘಟಕ ಮತ್ತು ರೀಲಿಂಗ್ ಘಟಕಗಳಿಗೆ ಹೆಚ್ಚುವರಿಯಾಗಿ ಬಾಯ್ಲರ್, ಜನರೇಟರ್, ಸೋಲಾರ್ ವಾಟರ್ ಹೀಟರ್, ಹೀಟ್ ರೀಕವರಿಂಗ್, ಬೇಸನ್ ಕಾಟೇಜ್ ರೀಲಿಂಗ್ ಯಂತ್ರ ಹಾಗೂ ಪರ್ಮಿಯೇಷನ್ ಛೇಂಬರ್ ಅಳವಡಿಕೆ ಕಾರ್ಯಕ್ರಮಗಳಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ನೂಲು ಬಿಚ್ಚಣಿಕೆದಾರರು ಅರ್ಜಿಯನ್ನು ತಾಂತ್ರಿಕ ಸೇವಾ ಕೇಂದ್ರ (ರೀಲಿಂಗ್) ಗೌಸಿಯಾ ಇಂಜಿನಿಯರಿAಗ್ ಕಾಲೇಜು ಎದುರು, ಬಿ.ಎಂ ರಸ್ತೆ ರಾಮನಗರ ಇಲ್ಲಿ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯೊಂದಿಗೆ ಅರ್ಜಿದಾರರ ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ನೂಲು ಬಿಚ್ಚಾಣಿಕೆದಾರರ ರಹದಾರಿ ಪುಸ್ತಕ ಲಗತ್ತಿಸಿ ಏಪ್ರಿಲ್ 13 ರೊಳಗಾಗಿ ಸಲ್ಲಿಸುವುದು ಎಂದು ರೇಷ್ಮೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೇಷ್ಮೆ ಸಹಾಯಕ ನಿರ್ದೇಶಕರು, ಗೂಡಿನ ನಂತರದ ಚಟುವಟಿಕೆಗಳು, ರಾಮನಗರ ಹಾಗೂ ರೇಷ್ಮೆ ನೀರಿಕ್ಷಕರು, ತಾಂತ್ರಿಕಾ ಸೇವಾ ಕೇಂದ್ರ(ರೀಲಿAಗ್), ಗೌಸಿಯಾ ಇಂಜಿನಿಯರಿAಗ್ ಕಾಲೇಜು ಎದುರು, ಬಿ.ಎಂ ರಸ್ತೆ ರಾಮನಗರ ಇವರನ್ನು ಸಂಪರ್ಕಿಸುವುದು.

ಗAಗಾ ಕಲ್ಯಾಣ ಯೋಜನೆ: ಅರ್ಜಿ ಆಹ್ವಾನ

: ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ವತಿಯಿಂದ 2021-22 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಚಿಸುವ ವೀರಶೈವ ಲಿಂಗಾಯತ ಸಮುದಾಯದ 3ಬಿ ಗೆ ಒಳಪಡುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು, ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿದ್ದು, ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿಲ್ಲದೆ ಇರುವ ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ವಾರ್ಷಿಕ ವರಮಾನ ರೂ.40,000/- ಗಳ ಮಿತಿಯಲ್ಲಿರಬೇಕು. ಆಸಕ್ತರು ಏಪ್ರಿಲ್ 25 ರೊಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಛೇರಿ #102, ಮೊದಲನೇ ಮಹಡಿ, 3ನೇ ಕ್ರಾಸ್, ಉತ್ತರ ಬಡಾವಣೆ, 1ನೇ ಫೇಸ್, ರತ್ನಾಕರ ಬ್ಯಾಂಕ್ ಪಕ್ಕ, ಬಿ.ಎಂ ರಸ್ತೆ, ರಾಮನಗರ ಟೌನ್ ಅಥವಾ ಇಲಾಖಾ ವೆಬ್ ಸೈಟ್ ತಿತಿತಿ.ಜbಛಿಜಛಿ.ಞಚಿಡಿಟಿಚಿಣಚಿಞ.gov.iಟಿ. ದೂರವಾಣಿ ಸಂಖ್ಯೆ:080-27271554 ಅನ್ನು ಸಂಪರ್ಕಿಸುವುದು ಎಂದು ಕರ್ನಾಟಕ ವೀರಶೈವ ಲಿಂಗಾಯತ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share