MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 170

341
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 170

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

916 . ಓಂ ನವನಾಗವಿಭೂಷಣಾಯ ನಮಃ
917 . ಓಂ ನವರತ್ನವಿಚಿತ್ರಾಂಗಾಯ ನಮಃ
918 . ಓಂ ನವಶಕ್ತಿಶಿರೋಧೃತಾಯ ನಮಃ
919 . ಓಂ ದಶಾತ್ಮಕಾಯ ನಮಃ
920 . ಓಂ ದಶಭುಜಾಯ ನಮಃ

916. ಓಂ ನವನಾಗ ವಿಭೂಷಣಃ-
ಭಾ: ಕರ್ಕೋಟಕಾದಿ ಮಂಡ್ಯತ್ವಾನ್ನವನಾಗವಿಭೂಷಣಃ|
ಹಿಂದೆ ಹೇಳಿಕೊಂಡ ಕರ್ಕೋಟಕಾದಿ ನವನಾಗ ದೇವತೆಯರು ಗಣೇಶನ ಅಲಂಕಾರಗಳಾಗಿದ್ದಾರೆ. ಆದ್ದರಿಂದ ನವನಾಗವಿಭೂಷಣನು.
ಓಂ ನವನಾಗವಿಭೂಷಣಾಯ ನಮಃ

917. ಓಂ ನವರತ್ನ ವಿಚಿತ್ರಾಂಗಃ-
ಭಾ: ನವರತ್ನವಿಚಿತ್ರಾಂಗೋ ವಜ್ರಮುಕ್ತಾದಿಭೂಷಿತಃ|
1. ಮಾಣಿಕ್ಯ 2. ಮುತ್ತು 3. ಹವಳ 4. ಪಚ್ಚೆ 5. ಪುಷ್ಪರಾಗ 6. ವಜ್ರ 7. ನೀಲ 8. ಗೋಮೇದಕ 9. ವೈಡೂರ್ಯಗಳೆಂಬ ನವರತ್ನಗಳಿಂದ ಅಲಂಕರಿಸಲ್ಪಟ್ಟ ವಿಚಿತ್ರವಾದ ಶರೀರದ ಅಂಗಗಳು ಇರುವವನಾದ್ದರಿಂದ ನವರತ್ನವಿಚಿತ್ರಾಂಗನು.
ಓಂ ನವರತ್ನವಿಚಿತ್ರಾಂಗಾಯ ನಮಃ

918. ಓಂ ನವಶಕ್ತಿಶಿರೋಧೃತಃ-
ಭಾ: ತೀವ್ರಾದ್ಯಾ ನವ ತೇ ಪೀಠೇ ನವಶಕ್ತಿಶಿರೋಧೃತಃ||
ಈ ಹಿಂದೆ ತಿಳಿದ ತೀವ್ರಾ ಮೊದಲಾದ ಶಕ್ತಿದೇವತೆಯರೂ ಹಾಗೂ ಅವರ ಜೊತೆಯಲ್ಲಿ ವಿಘ್ನನಾಶಿನೀ ಎಂಬ ನವಮ ಶಕ್ತಿದೇವತೆಯೂ ಗಣೇಶನನ್ನು ಪೂಜಿಸಿ, ಅವನ ಪಾದಗಳನ್ನು ತಮ್ಮ ತಲೆಗಳ ಮೇಲೆ ಅಲಂಕರಿಸಿಕೊಂಡಿದ್ದಾರೆ. ಆದ್ದರಿಂದ ಅವನು ನವಶಕ್ತಿಶಿರೋಧೃತನು.
ಓಂ ನವಶಕ್ತಿಶಿರೋಧೃತಾಯ ನಮಃ
ದಶಾತ್ಮಕೋ ದಶಭುಜೋ ದಶದಿಕ್ಪತಿವಂದಿತಃ|
ದಶಾಧ್ಯಾಯೋ ದಶಪ್ರಾಣೋ ದಶೇಂದ್ರಿಯನಿಯಾಮಕಃ||

919. ಓಂ ದಶಾತ್ಮಕಃ-
ಭಾ: ದಿಶೋ ದಶ ತದಾತ್ಮಾ ಯೋ ವ್ಯಾಪಕಃ ಸ ದಶಾತ್ಮಕಃ|
ಹತ್ತುದಿಕ್ಕುಗಳು ತಾನೇ ಆದ್ದರಿಂದಲೂ, ಹತ್ತು ದಿಕ್ಕುಗಳನ್ನೂ ವ್ಯಾಪಿಸಿರುವವನಾದ್ದರಿಂದಲೂ ದಶಾತ್ಮಕನು. (ಪೂರ್ವಾದಿ ಎಂಟು ದಿಕ್ಕುಗಳು, ಊರ್ಧ್ವ, ಅಧಸ್- ಇವು ದಶದಿಕ್ಕುಗಳು)
ಓಂ ದಶಾತ್ಮಕಾಯ ನಮಃ

920. ಓಂ ದಶಭುಜಃ-
ಭಾ: ಮಹಾಗಣಪತೇರ್ಮೂರ್ತ್ಯಾ ಭವಾನ್ ದಶಭುಜೋsಭವತ್‌|
ದಶಭುಜ ಗಣಪತಿಯನ್ನು ಮಹಾಗಣಪತಿ ಎನ್ನುತ್ತಾರೆ. ಹೇ ಗಣೇಶ! ನೀನು ಮಹಾಗಣಪತಿ ರೂಪನಾದ್ದರಿಂದ ದಶಭುಜನು.
ಓಂ ದಶಭುಜಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share