MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 177

293
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 177

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

951 . ಓಂ ಏಕವಿಂಶತ್ಯಂಗುಲಿಪಲ್ಲವಾಯ ನಮಃ
952 . ಓಂ ಚತುರ್ವಿಂಶತಿತತ್ವಾತ್ಮನೇ ನಮಃ
953 . ಓಂ ಪಂಚವಿಂಶಾಖ್ಯಪೂರುಷಾಯ ನಮಃ
954 . ಓಂ ಸಪ್ತವಿಂಶತಿತಾರೇಶಾಯ ನಮಃ
955 . ಓಂ ಸಪ್ತವಿಂಶತಿಯೋಕೃತೇ ನಮಃ

951 . ಓಂ ಏಕವಿಂಶತ್ವಂಗುಲಿಪಲ್ಲವಃ –
ಭಾ : ಸಹ ಶುಂಡಾಂಚಲೇನೈಕವಿಂಶತ್ಯಂಗುಲಿಪಲ್ಲವ ।
ಗಣೇಶನು ಚಿಗುರಿನಂತಹ ೨೧ ಬೆರಳುಗಳಿಂದ ರಾರಾಜಿಸುತ್ತಿದ್ದಾನೆ . ೧೦ ಕಾಲಿನ ಬೆರಳುಗಳು , ೧೦ ಕೈ ಬೆರಳುಗಳು , ಸೊಂಡಿಲಿನ ಅಗ್ರಭಾಗ – ಇವಿಷ್ಟು ಸೇರಿ ಇಪ್ಪತ್ತೊಂದು ಬೆರಳುಗಳು . ಶುಂಡಾಗ್ರವನ್ನು ಬೆರಳಿನಂತೆ ಗ್ರಹಿಸಲಾಗಿದೆ .
ಓಂ ಏಕವಿಂಶತ್ಯಂಗುಲಿಪಲ್ಲವಾಯ ನಮಃ
ಚತುರ್ವಿಂಶತಿತಾತ್ಮಾ ಪಂಚವಿಂಶಾಖಪೂರುಷಃ ।
ಸಪ್ತವಿಂಶತಿತಾರೇಶಃ ಸಪ್ತವಿಂಶತಿಯೋಗಕೃತ್ ||

952 . ಓಂ ಚತುರ್ವಿಂಶತಿ ತತ್ವಾತ್ಮಾ
953 . ಓಂ ಪಂಚವಿಂಶಾಖ್ಯ ಪೂರುಷಃ
ಭಾ : ತತ್ವಾನಿ ನಿಜಸಂಖ್ಯಾನಿ ತದೂರ್ಧ್ವಃ ಪುರುಷೋ ಭವಾನ್ । ಚತುರ್ವಿಂಶತಿತತ್ವಾತ್ಮಾ ಪಂಚವಿಂಶಾಖ್ಯ ಪೂರುಷಃ ॥
ಪಂಚಮಹಾಭೂತಗಳು , ಪಂಚತನ್ಮಾತ್ರೆಗಳು , ಪಂಚಕರ್ಮೇಂದ್ರಿಯಗಳು , ಪಂಚ ಜ್ಞಾನೇಂದ್ರಿಯಗಳು , ಮನಸ್ಸು , ಬುದ್ಧಿ , ಅಹಂಕಾರ , ಅವ್ಯಕ್ತ ( ಮಹತ್ ) ಇವುಗಳನ್ನು ಚತುರ್ವಿಂಶತಿ ( ಇಪ್ಪತ್ನಾಲ್ಕು ) ತತ್ವಗಳೆನ್ನುತ್ತಾರೆ . ಗಣೇಶನು ತತ್ವಸ್ವರೂಪಿಯಾಗಿದ್ದಾನೆ . ಆದ್ದರಿಂದ ಚತುರ್ವಿಂಶತಿತತ್ವಾತ್ಮನು .
ಓಂ ಚತುರ್ವಿಂಶತಿತತ್ವಾತ್ಮನೇ ನಮಃ
ಇಪ್ಪತ್ನಾಲ್ಕು ತತ್ವಗಳನ್ನು ದಾಟಿ ಮೇಲಿರುವ ಪರಮಾತ್ಮಸ್ವರೂಪನಾದ್ದರಿಂದ ಪಂಚವಿಂಶಾಖ್ಯಪೂರುಷನು .
ಓಂ ಪಂಚವಿಂಶಾಖ್ಯಪೂರುಷಾಯ ನಮಃ
.
954 .ಓಂ ಸಪ್ತವಿಂಶತಿತಾರೇಶಃ
955 . ಓಂ ಸಪ್ತವಿಂಶತಿಯೋಗಕೃತ್
ಭಾ : ನಕ್ಷತ್ರಾಣಾಂ ಚ ಯೋಗಾನಾಂ ಈಶಃ ಕರ್ತಾ ಕ್ರಮಾದ್ಭವಾನ್ । ಸಪ್ತವಿಂಶತಿತಾರೇಶಸ್ಸಪ್ತವಿಂಶತಿಯೋಗಕೃತ್ ॥
ಇಪ್ಪತ್ತೇಳು ನಕ್ಷತ್ರಗಳಿಗೆ ಪ್ರಭುವಾದ್ದರಿಂದ ಸಪ್ತವುಂಶತಿತಾರೇಶನು.
ಓಂ ಸಪ್ತವಿಂಶತಿತಾರೇಶಾಯ ನಮಃ
ಓಂ ಸಪ್ತವಿಂಶತಿಯೋಕೃತೇ ನಮಃ
( 710, 712 ನಾಮಗಳಲ್ಲಿ ನಕ್ಷತ್ರ ಹಾಗೂ ಯೋಗಗಳ ಹೆಸರುಗಳನ್ನು ತಿಳಿಸಲಾಗಿದೆ. )
ದ್ವಾತ್ರಿಂಶದ್ಭೈರವಾಧೀಶ – ಶ್ಚತುಸ್ತ್ರಿಂಶನ್ಮಹಾಹ್ರದಃ ।
ಷಟ್ತ್ರಿಂಶತ್ತತ್ತ್ವ ಸಂಭೂತಿ – ರಷ್ಟಾತ್ರಿಂಶತ್ಕಲಾತನುಃ ॥

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share