482 ರಸ್ತೆ ಡಾಂಬರೀಕರಣ  ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ

77
Share

 

 

 

 

482 ರಸ್ತೆ ಡಾಂಬರೀಕರಣ  ಕಾಮಗಾರಿಗಳಿಗೆ ಶಾಸಕ ರಾಮದಾಸ್ ಚಾಲನೆ
ಮೈಸೂರು:
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ೪೮೨ ಕಿಮೀ ರಸ್ತೆಗಳನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲು ಚಾಲನೆ ನೀಡಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಮಂಗಳವಾರ ಮತ್ತಷ್ಟು ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.
ಅಂದಾಜು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ವಾರ್ಡ್ ನಂ.59ರ ವಿವೇಕಾನಂದ ನಗರದಿಂದ ರಾಮಕೃಷ್ಣನಗರಕ್ಕೆ ಸಂಪರ್ಕ ಹೊಂದುವ ಎಂ. ಬ್ಲಾಕ್ ಅಡ್ಡರಸ್ತೆಗಳ ಡಾಂಬರೀಕರಣ, ವಾರ್ಡ್ ನಂ.64ರ ಅರವಿಂದನಗರ ಭಾಗದ ಎಸ್ ಬಿ ಎಂ ಉದ್ಯಾನವನ ಹತ್ತಿರವಿರುವ ಬ್ಲಾಕ್ 3 ಮತ್ತು 4ರ ಅಡ್ಡರಸ್ತೆಗಳು, ವಾರ್ಡ್ ನಂ.56ರ ಕೃಷ್ಣಮೂರ್ತಿಪುರಂ ಭಾಗದ ಜಯನಗರ ರೈಲ್ವೆ ಗೇಟ್ ನಿಂದ ಶಾರದವಿಲಾಸ ಕಾಲೇಜು ಸಂಪರ್ಕ ಹೊಂದುವ ಮುಖ್ಯರಸ್ತೆ ಡಾಂಬರಿಕರಣ, ವಾರ್ಡ್ ನಂ.49ರ ಲಕ್ಷ್ಮಿಪುರಂ ಭಾಗದ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಿಂದ ನ್ಯೂ ಕಾಂತರಾಜ್ ಮುಖ್ಯರಸ್ತೆ ಡಾಂಬರೀಕರಣ, ಬಸವೇಶ್ವರ ರಸ್ತೆ 3,5 ಮತ್ತು 6ನೇ ಅಡ್ಡರಸ್ತೆಗಳ ಡಾಂಬರೀಕರಣ, ವಾರ್ಡ್ ನಂ.55ರ ಚಾಮುಂಡಿಪುರಂ ಭಾಗದ ಬಸವೇಶ್ವರ ರಸ್ತೆ 14 ಮತ್ತು ಸಿಹಿ ನೀರು ಕಟ್ಟೆ ರಸ್ತೆಗಳ ಅಡ್ಡರಸ್ತೆಗಳಲ್ಲಿ ರಸ್ತೆ ಡಾಂಬರೀಕರಣ, ಜೆ ಎಲ್ ಬಿ ಮುಖ್ಯ ರಸ್ತೆಯಿಂದ 3ನೇ ಮೇನ್ ಮುಖ್ಯ ರಸ್ತೆಯ ಮಾರ್ಗವಾಗಿ ಸಾರ್ವಜನಿಕ ಹಾಸ್ಟೆಲ್ ಮುಖ್ಯರಸ್ತೆ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಮದಾಸ್, ಈವರೆಗೆ ಬಹುತೇಕ ಮುಖ್ಯರಸ್ತೆಗಳು ಡಾಂಬರೀಕರಣಗೊಂಡಿದ್ದು, ಅದರೊಂದಿಗೆ ಕ್ರಾಸ್ ರಸ್ತೆಗಳನ್ನೂ ಡಾಂಬರೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾತ್ರವಲ್ಲ, ಇದರೊಂದಿಗೆ ಡ್ರೈನೆಜ್ ಅಭಿವೃದ್ಧಿ ಕಾರ್ಯ ಮತ್ತು ಆಸ್ವಾಲ್ಟ್ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇಡೀ ಕ್ಷೇತ್ರವನ್ನು ಅಪಘಾತ ರಹಿತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಸಾಗಿದ್ದು, ಮಾರ್ಚ್ ೧೫ರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಕ್ಷೇತ್ರವನ್ನು ಅಪಘಾತ ಮುಕ್ತ ವಲಯವಾಗಿ ಮಾಡುವ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕ್ಷೇತ್ರ ಮಾದರಿಯಾಗಿ ಇರಬೇಕು ಎಂಬ ಕಾರಣಕ್ಕಾಗಿ ಅತ್ಯಂತ ವ್ಯವಸ್ಥಿತವಾಗಿ ಎಲ್ಲಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


Share