MP : ಆಧ್ಯಾತ್ಮಿಕ ಅಂಗಳ : ಶ್ರೀಪಾದ ವಲ್ಲಭರ ಚರಿತ್ರೆ ಪುಟ : 272

312
Share

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 49
ಪುಟ : 272

ಸತ್ತವರಿಗೆ ಜೀವದಾನ

ಆಗ ಶ್ರೀಪಾದರು , ‘ ವಿಶ್ವಾಸೋ ಫಲದಾಯಕಂ ‘ ನನ್ನಲ್ಲಿ ನಿನಗೆ ಅಷ್ಟು ಧೃಡವಾದ ನಂಬಿಕೆಯಿದ್ದರೆ ನಿನ್ನ ಪತಿ ಖಂಡಿತವಾಗಿ ಸಜೀವನಾಗುವನು . ಆದರೆ ಕರ್ಮ ಸಿದ್ಧಾಂತಕ್ಕೆ ವಿರೋಧವಾಗದಂತಹ ಉಪಾಯವನ್ನು ಹೇಳುತ್ತೇನೆ . ನಿನ್ನ ಮಂಗಳಸೂತ್ರವನ್ನು ಮಾರಿ ನಿನ್ನ ಪತಿಯ ಭಾರಕ್ಕೆ ಸಮಾನ ಭಾರದ ಕಟ್ಟಿಗೆಗಳನ್ನು ತಂದುಕೊಡು . ಆ ಕಟ್ಟಿಗೆಗಳನ್ನು ಹರಿ ಒಲೆಗೆ ಹಾಕಿ ಅಡಿಗೆ ಮಾಡುತ್ತೇವೆ . ನೀನು ಮಾಂಗಲ್ಯವನ್ನು ಕಳೆದುಕೊಳ್ಳುವಷ್ಟು ಅಮಾಂಗಲ್ಯವು , ಕಟ್ಟಿಗೆಯ ಉರಿಯಿಂದ ನಿನ್ನ ಪತಿಯ ಶರೀರವು ದಗ್ಧವಾಗುವ ಅಮಾಂಗಲ್ಯವು , ಮೃತ್ಯು ರೂಪ ಕರ್ಮ ಸ್ಪಂದನಗಳನ್ನು ಆಕರ್ಷಿಸಲ್ಪಟ್ಟ ಕಟ್ಟಿಗೆಗಳನ್ನು ಉಪಯೋಗಿಸಿ ಮಾಡಿದ ಶ್ರಾದ್ಧಾನ್ನ ಅಮಾಂಗಲ್ಯವು , ಎಲ್ಲವೂ ಕೂಡ ಶಾಂತವಾಗುವುವು ‘ ಎಂದು ನುಡಿದರು . ಆಗ ಆಕೆ ಹಾಗೆಯೇ ಮಾಡಿದುದರಿಂದ ಆಕೆಯ ಪತಿಯು ಬದುಕಿದನು .
ಶ್ರೀಪಾದರು ತಮ್ಮ ಭಕ್ತರ ವಿಧವಿಧವಾದ ಪಾಪಕರ್ಮಗಳನ್ನು ಕಟ್ಟಿಗೆಗಳಿಗೆ ಆಕರ್ಷಿಸುತ್ತಿದ್ದರು . ಆ ರೀತಿ ಮಾಡುವುದರಿಂದ ಆ ಕಟ್ಟಿಗೆಗಳು ಹರಿ ಒಲೆಯಲ್ಲಿ ಉರಿದು ರುಚಿಕರವಾದ ಅಡಿಗೆಗಳು ತಯಾರಾಗಿ ಪ್ರಸಾದ ರೂಪವಾದ ಶುಭ ಫಲಗಳನ್ನು ಕೊಡುತ್ತಿದ್ದೆವು .

ದರಿದ್ರ ಬ್ರಾಹ್ಮಣನ ಮೇಲೆ ವಿಶೇಷ ಅನುಗ್ರಹ

ಮತ್ತೊಮ್ಮೆ ಒಬ್ಬ ಬಡಬ್ರಾಹ್ಮಣನು ಶ್ರೀಪಾದರ ದರ್ಶನಾರ್ಥವಾಗಿ ಬಂದನು . ಶ್ರೀಪಾದರು ತನ್ನನ್ನು ಕರುಣಿಸದೇ ಹೋದರೆ ಆತ್ಮಹತ್ಯೆಯೇ ಗತಿಯೆಂದು ತನ್ನ ಗೋಳನ್ನು ತೋಡಿಕೊಂಡನು . ಆಗ ಶ್ರೀಪಾದರು ಉರಿಯುತ್ತಿರುವ ಕೊಳ್ಳಿಯನ್ನು ತಂದು ಆ ಬ್ರಾಹ್ಮಣನಿಗೆ ತಾಕಿಸಿದರು . ಆ ಬ್ರಾಹ್ಮಣನು ಬಹಳ ಹೊತ್ತಿನವರೆಗೂ ಬಾಧೆ ಪಟ್ಟನು . ಎಲವೋ ಬ್ರಾಹ್ಮಣ ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಇದ್ದೆ . ನಾನು ನಿನ್ನ ಮೇಲೆ ದಯೆ ತೋರದಿದ್ದರೆ , ಕರುಣಿಸದಿದ್ದರೆ ನಿಜವಾಗಿಯೂ ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ . ಆ ಆತ್ಮಹತ್ಯೆಗೆ ಸಂಬಂಧಿಸಿರುವ ಸಮಸ್ತ ಪಾಪಕರ್ಮಗಳ ಸ್ಪಂದನಗಳನ್ನು ಈ ಉರಿಯುತ್ತಿರುವ ಕೊಳ್ಳಿಯನ್ನು ನಿನಗೆ ತಾಕಿಸುವ ಮೂಲಕ ನಾಶಪಡಿಸಿದೆನು . ಇನ್ನು ಮೇಲೆ ನಿನಗೆ ದಾರಿದ್ರದದ ಬಾಧೆ ಇರುವುದಿಲ್ಲ , ಈ ತಣ್ಣಗಾದ ಕೊಳ್ಳಿಯನ್ನು ನೀನು ನಿನ್ನ ಮಡಿಪಂಚೆಯಲ್ಲಿ ಸುತ್ತಿಕೊಂಡು ಜಾಗ್ರತೆಯಾಗಿ ನಿನ್ನ ಮನೆಗೆ ತೆಗೆದುಕೊಂಡು ಹೋಗು ಎಂದರು . ಆತನು ಹಾಗೆಯೇ ಮಾಡಿದನು . ಮನೆಗೆ ಹೋಗಿ ಆ ಗಂಟನ್ನು ಬಿಚ್ಚಿದಾಗ ಅದು ಬಂಗಾರವಾಯಿತು . ಅವನ ದಾರಿದ್ರವು ತೀರಿತು .
ಶ್ರೀಪಾದರು ತಮ್ಮ ಅಗ್ನಿ ಯಜ್ಞದ ಮುಖಾಂತರ ಬಹಳ ವಿಚಿತ್ರ ರೀತಿಗಳಲ್ಲಿ ತಮ್ಮ ಭಕ್ತರ ಪಾಪಕರ್ಮಗಳನ್ನು ಧ್ವಂಸ ಮಾಡುತ್ತಿದ್ದರು . ಒಮ್ಮೊಮ್ಮೆ ತನ್ನ ಭಕ್ತರಿಗೆ ಯಾವುದಾದರೂ ಕಾಯಿಪಲ್ಯವನ್ನು ಎಂದರೆ ಬೆಂಡೆಕಾಯಿ , ಬದನೆಕಾಯಿಗಳನ್ನು ತಂದುಕೊಡು ಎಂದು ಹೇಳುತ್ತಿದ್ದರು . ಆ ಕಾಯಿ ಪಲ್ಯೆಯಲ್ಲಿ ಆ ಭಕ್ತನ ಪಾಪಕರ್ಮರೂಪ ಸ್ಪಂದನಗಳನ್ನು ಆಕರ್ಷಿಸುತ್ತಿದ್ದರು . ಆ ಕಾಯಿಪಲ್ಯದ ಅಡಿಗೆಯನ್ನು ಭಕ್ತರಿಗೆ ಪ್ರಸಾದವನ್ನಾಗಿ ಬಡಿಸುತ್ತಿದ್ದರು . ಇದರ ಮೂಲಕ ಭಕ್ತರ ಪಾಪಕರ್ಮದೋಷಗಳನ್ನು ನಾಶ ಪಡಿಸುವರು .
ಒಂದು ಹುಡುಗಿಗೆ ರಜಸ್ವಲೆಯಾದರೂ ವಿವಾಹವಾಗಲಿಲ್ಲ . ಆಕೆಗೆ ಕುಜದೋಷವಿದೆಯೆಂದು ಗ್ರಹಿಸಿ ಅವಳ ಕೈಯಲ್ಲಿ ತೊಗರಿಬೇಳೆ ತರಿಸಿ , ಆ ಬೇಳೆಯಿಂದ ಅಡಿಗೆ ಮಾಡಿಸಿ ಎಲ್ಲ ಭಕ್ತರ ಜೊತೆಗೆ ಅವಳೂ ಅದನ್ನು ಪ್ರಸಾದವಾಗಿ ಸ್ವೀಕರಿಸುವಂತೆ ಮಾಡಿ ಈ ವಿಧವಾಗಿ ಅವಳ ಕರ್ಮಬಂಧವು ತೀರಿಹೋಗಿ ಆ ಹುಡುಗಿಗೆ ಯೋಗ್ಯ ವರನೊಂದಿಗೆ ಮದುವೆಯಾಯಿತು .
ಕೆಲವರನ್ನು ದರ್ಬಾರು ಅಡಿಗೆಗೆ ಹಸುವಿನ ತುಪ್ಪವನ್ನು ತಂದುಕೊಡುವಂತೆ ಹೇಳುತ್ತಿದ್ದರು . ಇನ್ನು ಕೆಲವರಿಗೆ ಹಸುವಿನ ತುಪ್ಪಗಳಿಂದ ದೀಪಗಳನ್ನು ಹಚ್ಚುವಂತೆ ಹೇಳುತ್ತಿದ್ದರು . ತುಂಬಾ ಕಷ್ಟಕರ ಪರಿಸ್ಥಿತಿಯು ಒದಗಿದಾಗ ಕನ್ಯೆಯರಿಗೆ ವಿವಾಹವಾಗದಾಗ , ರಾಹುಕಾಲದಲ್ಲಿ ಶುಕ್ರವಾರದ ದಿನ ಅಂಬಿಕೆಗೆ ಪೂಜೆಮಾಡುವಂತೆ ಹೇಳುತ್ತಿದ್ದರು .
ಒಂದು ಸಲ ಒಬ್ಬ ಭಕ್ತನು ಖಾಯಿಲೆ ಬಂದು ಹಾಸಿಗೆ ಹಿಡಿದನು . ಶ್ರೀಪಾದರು ಆತನು ಮಲಗುವ ಕೋಣೆಯಲ್ಲಿ ಅರಳೆಣ್ಣೆ ದೀಪ ಹಚ್ಚಿ ಅದು ರಾತ್ರಿಯೆಲ್ಲಾ ಸರಿಯಾಗಿ ಉರಿಯುವಂತೆ ನೋಡಿಕೊಳ್ಳಬೇಕು ಎಂದರು . ಅವರು ಹಾಗೆ ಮಾಡಿದುದರಿಂದ ಆ ಭಕ್ತನು ರೋಗ ವಿಮುಕ್ತನಾದನು .
ಒಬ್ಬ ಭಕ್ತನು ಪರಮನಿರ್ಭಾಗ್ಯ ಸ್ಥಿತಿಯಲ್ಲಿದ್ದನು . ಆಗ ಶ್ರೀಪಾದರು ಅವರ ಮನೆಯಲ್ಲಿ ಒಂದು ವಾರ ಹಸುವಿನ ತುಪ್ಪದಿಂದ ಅಖಂಡವಾಗಿ ದೀಪವನ್ನು ಬೆಳಗಿಸಿದರೆ ಮತ್ತೆ ಆ ಮನೆಯಲ್ಲಿ ಲಕ್ಷ್ಮಿಕಳೆ ಪ್ರವೇಶಿಸುವುದೆಂದು ತಿಳಿಸಿದರು . ಇಂತಹ ಎಷ್ಟೆಷ್ಟೊ ಪದ್ಧತಿಗಳ ಮೂಲಕ ತಮ್ಮ ಆಶ್ರಿತ ಭಕ್ತರನ್ನು ಪಾಪಕರ್ಮ ವಿಮುಕ್ತರನ್ನಾಗಿ ಮಾಡುತ್ತಿದ್ದರು . ಆ ಪದ್ಧತಿಗಳೆಲ್ಲವನ್ನೂ ತಿಳಿದು ಕೊಳ್ಳುವುದಕ್ಕೆ ಮಾನವ ಮಾತ್ರನಿಗೆ ಸಾಧ್ಯವಾಗುವುದಿಲ್ಲ .

॥ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ॥

( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 273

ಹಡಗು ನಡೆಸುವವನ ಕ್ಯಾಪ್ಟನೆನ್ನುತ್ತಾರೆ .
ಸಂಸಾರ ನಡೆಸುವವನ ಯಜಮಾನ ಎನ್ನುವರು.
ಯಾರಿಗೇನಾದರೂ ನಡೆಸುವವನದೇ ಹೊಣೆ.
ಯಾವ ಕಾಲಿಗೆ ನೋವು ಬಂದರೂ ಸೊಂಟಕೆ ಮಾರಿ.
ಇದುವೆ ಲೋಕದ ರೂಢಿ
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share