MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 161

223
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 161

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

870 . ಓಂ ಷಟ್ಕೋಣಪೀಠಾಯ ನಮಃ
871 . ಓಂ ಷಟ್ಚಕ್ರಧಾಮ್ನೇ ನಮಃ
872 . ಓಂ ಷಡ್ಗ್ರಂಥಿಭೇದಕಾಯ ನಮಃ
873 . ಓಂ ಷಡಧ್ವಧ್ವಾತವಿಧ್ವಸಿನೇ ನಮಃ
874 . ಓಂ ಷಡಂಗುಲಮಹಾಹ್ರದಾಯ ನಮಃ

870. ಓಂ ಷಟ್ಕೋಣಪೀಠಃ-
ಭಾ: ಷಟ್ಕೋಣಪೀಠಃ ಕೋಣಾಃ ಷಟ್ ಪೂಜಾಸ್ಥಾನಾನಿ ಯಸ್ಯ ಸಃ|
ಪೂಜಾ ಸ್ಥಾನಗಳಾದ ಆರು ಕೋಣಗಳಲ್ಲಿ ಇರುವವನು ಷಟ್ಕೋಣಪೀಠನು.
ಓಂ ಷಟ್ಕೋಣಪೀಠಾಯ ನಮಃ

871. ಓಂ ಷಟ್ಚಕ್ರಧಾಮಾ-
ಭಾ: ಷಟ್ಚಕ್ರಧಾಮಾ ತ್ವಂ ಮೂಲಾಧಿಷ್ಠಾನಮಣಿಪೂರಕಾಃ| ಅನಾಹತವಿಶುದ್ಧ್ಯಾಜ್ಞಾsವಾಸಸ್ಥಾನಾನಿ ಯಸ್ಯ ಸಃ||
ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾಗಳೆಂಬ ಆರು ಚಕ್ರಗಳು ಯಾರ ಆವಾಸ ಸ್ಥಾನಗಳಾಗಿವೆಯೋ ಅವನು ಷಟ್ಚಕ್ರಧಾಮನು.
ಓಂ ಷಟ್ಚಕ್ರಧಾಮ್ನೇ ನಮಃ

872. ಓಂ ಷಡ್ಗ್ರಂಥಿಭೇದಕಃ-
ಭಾ: ಮೂಲಾಜ್ಞಾಮಣಿಪೂರೇಷು ದ್ವೌ ದ್ವೌ ಗ್ರಂಥೀ ಭಿನತ್ತಿ ಯಃ|
ವಹ್ನಿಕುಂಡಲಿನೀ ಸೈವ ಭವಾನ್ ಷಡ್ಗ್ರಂಥಿಭೇದಕಃ||
ಮೂಲಾಧಾರ, ಮಣಿಪೂರ, ಆಜ್ಞಾಗಳೆಂಬ ಮೂರು ಚಕ್ರಗಳ ಆರು ಗ್ರಂಥಿಗಳನ್ನು ಭೇದಿಸುತ್ತಾ ವಹ್ನಿಕುಂಡಲಿನೀ ಶಕ್ತಿರೂಪನಾಗಿರುವುದರಿಂದ ಷಡ್ಗ್ರಂಥಿಭೇದಕನು.
ಓಂ ಷಡ್ಗ್ರಂಥಿಭೇದಕಾಯ ನಮಃ

873. ಷಡಧ್ವಧ್ವಾಂತವಿಧ್ವಂಸೀ-
ಭಾ: ಪದಭುವನವರ್ಣತತ್ತ್ವಕಲಾ ಮಂತ್ರಾಖ್ಯಾಃ ಷಡಧ್ವಾನಃ|
ತಚ್ಛೋಧನಕರ್ತೃತ್ವೇನ ಷಡಧ್ವಧ್ವಾಂತವಿಧ್ವಂಸೀ||
ಪದಾಧ್ವ, ಭುವನಾಧ್ವ, ವರ್ಣಾಧ್ವ, ತತ್ತ್ವಾಧ್ವ, ಕಲಾಧ್ವ, ಮಂತ್ರಾಧ್ವಗಳೆಂಬ ಆರು ಮಾರ್ಗಗಳು ಜೀವಿಗಳಿಗೆ ಸಂಸಾರಬಂಧವನ್ನು ಉಂಟುಮಾಡುತ್ತವೆ. ಆದ್ದರಿಂದ ಅವು ತಮಸ್ಸ್ವರೂಪಗಳು. (ಕತ್ತಲಿನಂತಹವು)
ಗಣೇಶನು ಆ ಮಾರ್ಗಗಳಿಂದ ಹೊರಗಿದ್ದು ಅವುಗಳನ್ನು ಶೋಧಿಸಿ, ತನ್ನ ಭಕ್ರರಿಗೆ ಉಂಟಾಗಿರುವ ಕಗ್ಗತ್ತಲನ್ನು ನಾಶ ಮಾಡುತ್ತಾನೆ. ಆದ್ದರಿಂದ ಅವನು ಷಡಧ್ವಧ್ವಾತವಿಧ್ವಸೀ.
ಓಂ ಷಡಧ್ವಧ್ವಾತವಿಧ್ವಸಿನೇ ನಮಃ

874 . ಓಂ ಷಡಂಗುಲಮಹಾಹ್ರದಃ –
ಭಾ : ಮಹಾಹ್ರದೋ ನಾಭಿರೂಪೋ ಗಾಂಭೀರ್ಯೇಣ ಷಡಂಗುಲ ।
ಪಿಚಂಡಿಲತ್ವಾದ್ಯಸ್ಯೈಷ ಷಡಂಗುಲಮಹಾಪ್ರದಃ ॥
ನಲವತ್ತೆಂಟು ಬಾರ್ಲಿಕಾಳುಗಳು ಉದ್ದವನ್ನು ಷಡಂಗವೆನ್ನುತ್ತಾರೆ. ಗಣೇಶನು ದೊಡ್ಡ ಹೊಟ್ಟೆ ಉಳ್ಳವನಾದ್ದರಿಂದ ಅವನ ಹೊಕ್ಕಳು ಆರಂಗುಳದ ಆಳದಲ್ಲಿದೆ. ಆದ್ದರಿಂದ ಅವನ ನಾಭಿಯು ಒಂದು ದೊಡ್ಡ ಸರಸ್ಸಿನಂತಿದೆ. ಹಾಗಾಗಿ ಅವನು ಷಡಂಗುಲಮಹಾಪ್ರದನು.
ಓಂ ಷಡಂಗುಲಮಹಾಹ್ರದಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share