MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 164

259
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 164

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

885 . ಓಂ ಸಪ್ತಸಪ್ತಿವರಪ್ರದಾಯ ನಮಃ
886 . ಓಂ ಸಪ್ತಾಂಗರಾಜ್ಯಸುಖದಾಯ ನಮಃ
887 . ಓಂ ಸಪ್ತಾಂಗರಾಜ್ಯಸುಖದಾಯ ನಮಃ
888 . ಓಂ ಸಪ್ತರ್ಷಿಗಣಮಂಡಿತಾಯ ನಮಃ
889 . ಓಂ ಸಪ್ತಚ್ಛಂದೋನಿಧಯೇ ನಮಃ
890 . ಓಂ ಸಪ್ತಹೋತ್ರೇ ನಮಃ

886 . ಓಂ ಸಪ್ತಸಪ್ತಿವರಪ್ರದಃ –
ಭಾ : ತಾಭಿರ್ಜಟಾಭಿಸ್ಸಹಿತಃ ಸಪ್ತ ಇತ್ಯುಚ್ಯತೆರ ಶಿವಃ ।
ಮಣಿಮಲ್ಲಮೃಧೇ ತಸ್ಮೈ ಭವಾನ್ ಪ್ರಾದಾದ್ಧಯೋತ್ತಮಮ್ ॥
ಮೇಲೆ ತಿಳಿಸಿರುವ ಲೋಕಗಳನ್ನು ತನ್ನ ಜಟೆಗಳನ್ನಾಗಿ ಧರಿಸಿರುವುದರಿಂದ ಶಿವನನ್ನು ‘ಸಪ್ತ’ ಎನ್ನುತ್ತಾರೆ. ಮಣಿಮಲ್ಲನನ್ನು ಸಂಹಾರ ಮಾಡುವ ಸಂದರ್ಭದಲ್ಲಿ ಗಣೇಶನು ಶಿವನಿಗೆ ಉತ್ತಮವಾದ ಒಂದು ಕುದುರೆಯನ್ನು ಕೊಟ್ಟನು. ಆದ್ದರಿಂದಲೂ ಮತ್ತು ಸೂರ್ಯನಿಗೆ ವರವನ್ನು ಕೊಟ್ಟಿದ್ದರಿಂದಲೂ ಗಣೇಶನಿಗೆ ಸಪ್ತಸಪ್ತಿ ವರಪ್ರದನೆಂದು ಹೆಸರು. (ಸಪ್ತಸಪ್ತಿ ಸೂರ್ಯ)
ಓಂ ಸಪ್ತಸಪ್ತಿವರಪ್ರದಾಯ ನಮಃ
ಸಪ್ತಾಂಗ ರಾಜ್ಯಸುಖದಃ ಸಪ್ತರ್ಷಿ ಗಣ ಮಂಡಿತಃ|

887. ಓಂ ಸಪ್ತಾಂಗ ರಾಜ್ಯಸುಖದಃ-
ಭಾ: ಸ್ವಾಮ್ಯಮಾತ್ಯಾದಿ ಸಪ್ತಾಂಗ ಯುಗರಾಜ್ಯಾತ್ ಸುಖಂ ದದತ್‌|
ಸಪ್ತಾಂಗ ರಾಜ್ಯಸುಖದಃ……………||
ರಾಜ, ಮಂತ್ರಿ, ಮಿತ್ರ, ಕೋಶಾಗಾರ, ದುರ್ಗ, ರಾಷ್ಟ್ರ, ಸೇನೆ ಎಂಬ ಸಪ್ತಾಂಗಗಳಿಂದ ಉಂಟಾಗುವ ರಾಜ್ಯವನ್ನೂ ಹಾಗೂ ರಾಜ್ಯಸುಖವನ್ನೂ ಕೊಡುವುದರಿಂದ ಗಣೇಶನು ಸಪ್ತಾಂಗರಾಜ್ಯಸುಖದನು.
ಓಂ ಸಪ್ತಾಂಗರಾಜ್ಯಸುಖದಾಯ ನಮಃ

888. ಓಂ ಸಪ್ತರ್ಷಿಗಣಮಂಡಿತಃ-
ಭಾ: …………………ಸಪ್ತಭಿಃ ಕಶ್ಯಪಾದಿಭಿಃ|
ಗಣದೇವೈಶ್ಚ ಸೇವ್ಯತ್ವಾತ್ ಸಪ್ತರ್ಷಿಗಣಮಂಡಿತಃ||
ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಶಿಷ್ಠರೆಂಬ ಸಪ್ತರ್ಷಿಗಳಿಂದ ಕೂಡಿದ್ದವನಾದರಿಂದಲೂ ಮತ್ತು ಆದಿತ್ಯ, ವಿಶ್ವೇದೇವ, ರುದ್ರ, ವಸು, ತುಷಿತ, ಆಭಾಸ್ವರ, ಮರುತ್, ಮಹಾರಾಜಿಕ, ಸಾಧ್ಯಗಳೆಂಬ ಗಣದೇವತೆಯರು ಪರಿವಾರ ದೇವತೆಗಳಾಗಿರುವುದರಿಂದಲೂ ಗಣೇಶನು ಸಪ್ತರ್ಷಿಗಣಮಂಡಿತನು.
ಓಂ ಸಪ್ತರ್ಷಿಗಣಮಂಡಿತಾಯ ನಮಃ
ಸಪ್ತಚ್ಛಂದೋನಿಧಿ ಸ್ಸಪ್ತ – ಹೋತಾ ಸಪ್ತಸ್ವರಾಶ್ರಯಃ|
ಸಪ್ತಾಬ್ಧಿ ಕೇಲಿಕಾಸಾರಃ ಸಪ್ತಮಾತೃನಿಷೇವಿತಃ||

889. ಓಂ ಸಪ್ತಚ್ಛಂದೋನಿಧಿಃ-
ಭಾ: ಸಪ್ತಚ್ಛಂದೋನಿಧಿಃ ಪಥ್ಯ-ಛಂದಸ್ಸಪ್ತಕಸಂಶ್ರಯಃ|
ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತಿ, ತ್ರಿಷ್ಟುಪ್, ಜಗತೀಗಳೆಂಬ ಏಳು ಛಂದಸ್ಸುಗಳಿಗೂ ವೇದಸ್ವರೂಪದಲ್ಲಿ ನಿಧಿಯಾಗಿದ್ದಾನೆ. ಆದ್ದರಿಂದ ಗಣೇಶನು ಸಪ್ತಚ್ಛಂದೋನಿಧಿಯು.
ಓಂ ಸಪ್ತಚ್ಛಂದೋನಿಧಯೇ ನಮಃ

890. ಓಂ ಸಪ್ತಹೋತಾ-
ಭಾ: ಹೋತ್ರಾದಯೋsಚ್ಛಾವಾಕಾಂತಾ ಹೋತಾರಃ ಸಪ್ತಸೌಮಿಕಾಃ|
ಮಹಾಹವಿರ್ಮನುರ್ವಾಪಿ ಸಪ್ತಹೋತಾ ತದಾತ್ಮಕಃ||
ಹೋತಾ, ಮೈತ್ರಾವರುಣ, ನೇಷ್ಟಾ, ಪೋತಾ, ಬ್ರಾಹ್ಮಣಾಚ್ಛಂಸೀ, ಆಗ್ನೀಧ್ರ, ಅಚ್ಛಾವಾಕ-ಎಂಬ ಈ ಏಳು ಮಂದಿ ಋತ್ವಿಕ್ಕರು ಸೋಮಯಾಗವನ್ನು ನಡೆಸಿಕೊಡುತ್ತಾರೆ. ಗಣೇಶನು ಸಪ್ತಹೋತೃ ಸ್ವರೂಪನು. ಅಥವಾ ಶ್ರೌತ, ಸ್ಮಾರ್ತ ಕರ್ಮಗಳನ್ನು ಮಾಡದೇ ಹೋದ ಪಾಪದ ಪ್ರಾಯಶ್ಚಿತ್ತಕ್ಕಾಗಿ ವಿನಿಯೋಗಿಸುವ ‘ಮಹಾಹವಿರ್ಹೋತಾ’ ಎಂಬ ಏಳು ವಾಕ್ಯದ ಮಂತ್ರವನ್ನು ಸಪ್ತಹೋತೃ ಮಂತ್ರವೆನ್ನುತ್ತಾರೆ. ಗಣೇಶನು ಆ ಮಂತ್ರಸ್ವರೂಪಿಯಾಗಿದ್ದಾನೆ. ಆದ್ದರಿಂದಲೂ ಅವನಿಗೆ ಸಪ್ತಹೋತಾ ಎಂದು ಹೆಸರು. (ಅನೇಕ ಕಾಲ ಔಪಾಸನಾಂತರಿತಲೋಪ ಪ್ರಾಯಶ್ಚಿತ್ತಾರ್ಥಂ ಪುನರೌಪಾಸನಾಧಿಕಾರ ಸಿದ್ಧ್ಯರ್ಥಂ ಸಪ್ತಹೋತಾರಂ ಹೋಷ್ಯೇ- ಎಂದು ಸಂಕಲ್ಪ ಮಾಡಿ ಸಪ್ತಹೋತೃ ಮಂತ್ರದಿಂದ ಹೋಮ ಮಾಡಬೇಕು.)
ಓಂ ಸಪ್ತಹೋತ್ರೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share