MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 176

267
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 176

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

946 . ಓಂ ಅಷ್ಟಾದಶಪುರಾಣಕೃತೇ ನಮಃ
947 . ಓಂ ಅಷ್ಟಾದಶೌಷಧೀಸೃಷ್ಟಯೇ ನಮಃ
948 . ಓಂ ಅಷ್ಟಾದಶ ವಿಧಿಸ್ಸ ತಾಯ ನಮಃ
949 . ಓಂ ಅಷ್ಟಾದಶಲಿಪಿವೃಷ್ಟಿಸಮಷ್ಟಿಜ್ಞಾನಕೋವಿದಾಯ ನಮಃ
950 . ಓಂ ಏಕವಿಂಶಾಯ ಪುಂಸೇ ನಮಃ

946 . ಓಂ ಅಷ್ಟಾದಶ ಪುರಾಣಕೃತ್
ಭಾ : ಮಾತೃ ಕೌರ್ಮ ಬ್ರಾಹ್ಮ ಪಾದ್ಮಾದ್ಯಷ್ಟಾದಶಪುರಾಣಕೃತ್ |
ಮತ್ಸ , ಕೂರ್ಮ , ಬ್ರಹ್ಮ , ಪದ್ಮ ಮೊದಲಾದ ಹದಿನೆಂಟು ಪುರಾಣಗಳ ಸೃಷ್ಟಿಕರ್ತನಾದ್ದರಿಂದ ಅಷ್ಟಾದಶಪುರಾಣಕೃತ್ . ( ೧೮ ಪುರಾಣಗಳು ಮತ್ತು ಉಪ ಪುರಾಣಗಳ ಹೆಸರುಗಳನ್ನು ೭೭೦ ನೆಯ ನಾಮದಲ್ಲಿ ತಿಳಿಸಲಾಗಿದೆ )
ಓಂ ಅಷ್ಟಾದಶಪುರಾಣಕೃತೇ ನಮಃ

947 . ಓಂ ಅಷ್ಟಾದಶೌಷಧೀಸೃಷ್ಟಿ
ಭಾ : ಅಷ್ಟಾದಶೌಷ ಧೀಸೃಷ್ಟಿ – ರ್ಧಾನ್ಯಸೃಷ್ಟಿ ವಿಚಕ್ಷಣಃ ।
ಮುಖ್ಯಧಾನ್ನೋಪಧಾನ್ಯಾನಿ- ತೇಷು ದ್ವಾದಶ ಷಟ್ಕ್ರಮಾತ್ ।
ಔಷಧ ರೂಪಗಳಾದ ಹನ್ನೆರಡು ಮುಖ್ಯ ಧಾನ್ಯಗಳನ್ನೂ, ಉಪಧಾನ್ಯಗಳನ್ನೂ ಸೃಷ್ಟಿ ಮಾಡುವುದರಲ್ಲಿ ನಿಪುಣನಾದ್ದರಿಂದ ಅಷ್ಟಾದಶೌಷಧೀಸೃಷ್ಟಿಯು. ( ಧ್ಯಾನಗಳನ್ನು ಕುರಿತು ಭಾವಪ್ರಕಾಶ , ಚರಕಸಂಹಿತಾ , ಸುಶ್ರುತ ಸಂಹಿತ ಅಷ್ಟಾಂಗಯೋಗ ಮೊದಲಾದ ಗ್ರಂಥಗಳು ಬಹಳಷ್ಟು ಮಾಹಿತಿಯನ್ನು ಕೊಟ್ಟಿವೆ. ಆ ಎಲ್ಲಾ ಗ್ರಂಥಗಳನ್ನು ಕ್ರೋಡೀಕರಿಸಿ ಇದೀಗ ಹದಿನೆಂಟು ಮುಖ್ಯ ಧಾನ್ಯಗಳ ಹೆಸರುಗಳನ್ನು ಪಾಠಕರ ಅನುಕೂಲಕ್ಕಾಗಿ ಕೊಡಲಾಗುತ್ತಿದೆ . ಶಾಲಿಧಾನ್ಯ ವ್ರೀಹಿಧಾನ್ಯ, ಶೂಕಧಾನ್ಯ , ಶಿಂಬಿಧಾನ್ಯ , ಕ್ಷುದ್ರಧಾನ್ಯಗಳೆಂಬುವು ಎಲ್ಲಾ ತರದ ಧಾನ್ಯಗಳ ಮೂಲಧಾನ್ಯಗಳಾಗಿವೆ . ಹದಿನೆಂಟು ಧಾನ್ಯಗಳು ೧. ಗೋಧಿ ೨. ಭತ್ತ ೩. ತೊಗರಿ ೪ , ಹೆಸರುಕಾಳು ೫. ಕಡ ೬. ಅಲಸಂದೆ ೭. ಎಳ್ಳು ೮. ಉದು ೯ , ಹುರಳಿ ೧೦ , ಜವೆಗೋಧಿ ಬಾರ್ಲಿ ೧೩. ಸಣ್ಣಗೋದಿ ೧೪ , ಸೋಯ ೧೫ , ರಾಗಿ ೧೬. ಮುಸುಕಿನಜೋಳ ೧೭. ಮೆಂತ್ಯ ೧೮ , ಸಜ್ಜೆ ,
ಓಂ ಅಷ್ಟಾದಶೌಷಧೀಸೃಷ್ಟಯೇ ನಮಃ

948 . ಓಂ ಅಷ್ಟಾದಶವಿಧಿಸ್ಮೃತಃ
ಭಾ : ವಿಧಯೋ ೭ ಪೂರ್ವನಿಯಮ ಪರಿಸಂಖ್ಯಾಃ ಪೃಥಕ್ ಪೃಥಕ್ ।
ಪ್ರಯೋಗ ವಿನಿಯೋಗೇತ್ಯಾ – ಖ್ಯಾಭಿರ್ನವ ಚ ತೇ ದ್ವಿಧಾ ॥
ಗುಣ ಪ್ರಧಾನ ಭೇದಾದಿತ್ಯಷ್ಟಾದಶವಿಧಿಸ್ಮೃತಃ ।
ಅಪೂರ್ವವಿಧಿ , ನಿಯಮವಿಧಿ , ಪರಿಸಂಖ್ಯಾವಿಧಿ ಎಂಬುವು ಮೂರು ವಿಧಿಗಳು . ಇವುಗಳು ಪ್ರಯೋಗವಿಧಿ , ವಿನಿಯೋಗವಿಧಿ , ಅಧಿಕಾರವಿಧಿಗಳೆಂಬ ವಿಧಿರೂಪಗಳನ್ನು ಹೊಂದಿ ೩x೩ = ೯ ಒಂಭತ್ತು ವಿಧಗಳಾಗಿವೆ . ಈ ಒಂಬತ್ತು ವಿಧಿಗಳು ಗುಣಪ್ರಧಾನ , ಅಪ್ರಧಾನಗಳೆಂದು ೯x೨ = ೧೮ ಹದಿನೆಂಟು ವಿಧಗಳಾಗಿವೆ . ಈ ಹದಿನೆಂಟು ವಿಧಿವಿಧಾನಗಳಿಂದ ಹೇಳಲ್ಪಡುವವನಾದ್ದರಿಂದ ಗಣೇಶನ ಅಷ್ಟಾದಶವಿಧಿಸ್ಮೃತನು .
ಓಂ ಅಷ್ಟಾದಶ ವಿಧಿಸ್ಸ ತಾಯ ನಮಃ

ಅಷ್ಟಾದಶಲಿಪಿವೃಷ್ಟಿ – ಸಮಷ್ಟಿಜ್ಞಾನಕೋವಿಃ ।
ಏಕವಿಂಶಃ ಪುಮಾನೇಕ – ವಿಂಶತ್ಯಂಗುಲಿ ಪಲ್ಲವಃ ।।

949 . ಓಂ ಅಷ್ಟಾದಶಲಿಪಿವೃಷ್ಟಿಸಮಷ್ಟಿಜ್ಞಾನಕೋವಿದಃ
ಭಾ .: ನಾಗರ ದ್ರಾವಿಡಾಂಧ್ರಾದ್ಯಾಃ ಸ್ವತಂತ್ರಾ ಲಿಪಯೋ ಭುವಿ ।
ಅಷ್ಟಾದಶ ತದಂಶೋತ್ಥಾ ಅವಾನ್ತರಭಿದಾ ಅಪಿ ।
ದೇಶಭೇದೇನ ಬಹವ – ಸದ್ ಜ್ಞಾನೇ ತ್ವಂ ವಿಚಕ್ಷಣಃ ।। ಅಷ್ಟಾದಶಲಿಪಿವ್ಯಷ್ಟಿಸಮಷ್ಟಿಜ್ಞಾನಕೋವಿದಃ ।
ನಾಗರಲಿಪಿ , ದ್ರಾವಿಡಲಿಪಿ , ಆಂಧ್ರಲಿಪಿ – – ಎಂದು ಹೀಗೆ ಸ್ವತಂತ್ರವಾದ ಹದಿನೆಂಟು ಲಿಪಿಗಳಿವೆ . ಇವುಗಳಿಂದ ಹುಟ್ಟಿಕೊಂಡ ದೇಶೀಯ ಲಿಪಿಗಳು ಅಸಂಖ್ಯಾತವಾಗಿವೆ . ಅವುಗಳನ್ನು ಬಲ್ಲವನಾದ್ದರಿಂದ ಅಷ್ಟಾದಶ ಲಿಪಿವ್ಯಷ್ಟಿಸಮಷ್ಟಿ ಜ್ಞಾನಕೋವಿದನು .
ಓಂ ಅಷ್ಟಾದಶಲಿಪಿವೃಷ್ಟಿಸಮಷ್ಟಿಜ್ಞಾನಕೋವಿದಾಯ ನಮಃ

950 . ಓಂ ಏಕವಿಂಶಃ ಪುಮಾನ್ –
ಭಾ : ದಶಹಸ್ತ್ಯ ಅಂಗುಲಯಃ ಪದಾ ಅಂಗುಲಯೋ ದಶ ।
ಏಕವಿಂಶಃ ಪುಮಾನಾತ್ಮೇ – ತ್ಯಾಮನಂತ್ಯೈತರೇಯಿಣಃ ।।
‘ ದಶಹಸ್ತ್ಯಾ ‘ ಎಂಬ ಐತರೇಯದ ಮಂತ್ರವನ್ನನುಸರಿಸಿ ಅವನು ಇಪ್ಪತ್ತೊಂದನೆಯ ಪುರುಷನಾಗಿದ್ದಾನೆ ಯಾದ್ದರಿಂದಲೂ ಮಾನವರಿಗೆಲ್ಲರಿಗೂ ಹತ್ತು ಕೈಬೆರಳುಗಳು , ಹತ್ತು ಕಾಲ್ಪೆರಳುಗಳು ಇರುತ್ತವೆ . ಗಣೇಶನಿಗೆ ಮಾತ್ರ ಒಂದು ವಿಶೇಷವಾದ ಬೆರಳು ಸೊಂಡಿಲಿನ ರೂಪದಲ್ಲಿದೆ . ಆದ್ದರಿಂದ ಅವನು ಏಕವಿಂಶಃಪುಮಾನ್ .
ಓಂ ಏಕವಿಂಶಾಯ ಪುಂಸೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share