MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 52

285
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 52

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

266 . ಓಂ ಕಲ್ಪವಲ್ಲೀಧರಾಯ ನಮಃ
267 . ಓಂ ವಿಶ್ವಾಭಯದೈಕಕರಾಯ ನಮಃ
268 . ಓಂ ವಶಿನೇ ನಮಃ
269 . ಓಂ ಅಕ್ಷಮಾಲಾಧರಾಯ ನಮಃ
270 . ಓಂ ಜ್ಞಾನಮುದ್ರಾವತೇ ನಮಃ

266. ಓಂ ಕಲ್ಪವಲ್ಲೀ ಧರಃ-
ಭಾ:- ಕಲ್ಪವಲ್ಲೀಧರಃ ಕಲ್ಪ-ಲತಾಂ ಧತ್ತೇ ಕರಾಂಬುಜೇ ।
ಕೇಳಿದ್ದನ್ನೆಲ್ಲಾ ಅನುಗ್ರಹಿಸುವ ಕಲ್ಪಲತೆಯನ್ನು (ಬಳ್ಳಿಯನ್ನು) ತನ್ನ ಪದ್ಮದಂತಹ ಕೈಯಲ್ಲಿ ಧರಿಸಿರುವುದರಿಂದ ಗಣಪತಿಯು ಕಲ್ಪವಲ್ಲೀಧರನು.
ಓಂ ಕಲ್ಪವಲ್ಲೀಧರಾಯ ನಮಃ

267. ಓಂ ವಿಶ್ವಾಭಯದೈಕಕರಃ-
ಭಾ: ವಿಶ್ವಸ್ಮಾದಭಯಂ ದತ್ತೇ ಯಸ್ಯ ಮುಖ್ಯಃ ಕರಃ ಸ ತು ।
ಮಹಾಗಣಪತಿರ್ವಿಶ್ವಾಭಯದೈಕಕರಃ ಸ್ಮೃತಃ ॥
ಪ್ರಪಂಚದಿಂದ ಭಯಪಟ್ಟವರಿಗೆ ತನ್ನ ಮುಖ್ಯಹಸ್ತವಾದ ಬಲಗೈಯಿಂದ, ಅಭಯವನ್ನು ಕೊಡುತ್ತಿದ್ದಾನೆ. ಅದರಿಂದ ಮಹಾಗಣಪತಿಯು ವಿಶ್ವಾಭಯದೈಕಕರನು.
ಓಂ ವಿಶ್ವಾಭಯದೈಕಕರಾಯ ನಮಃ

268. ಓಂ ವಶೀ-
ಭಾ: ವಶೇ7ಸ್ಯ ವಿಶ್ವಂ ಸರ್ವಸ್ಯ ವಶೀತಿ ಶ್ರುತಿತೋ ವಶೀ ।
‘ವಶೀ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ’ – ಎಂಬ ಉಪನಿಷದ್ವಾಕ್ಯಾನು -ಸಾರವಾಗಿ ವಿಶ್ವವೆಲ್ಲವೂ ಅವನ ವಶದಲ್ಲಿಯೇ ಇರುವುದರಿಂದ ಅವನು ವಶಿಯಾಗಿದ್ದಾನೆ.
ಓಂ ವಶಿನೇ ನಮಃ

269. ಓಂ ಅಕ್ಷಮಾಲಾಧರಃ-
ಭಾ: ಅಕಾರಾದಿ ಕ್ಷಕಾರಾನ್ತಮಾತೃಕಾತ್ಮಕಮಾಲಿಕಾ ।
ಉಕ್ತಾಕ್ಷಮಾಲಾ ತದ್ಧಾರೀ ತ್ವಕ್ಷಮಾಲಾಧರೋ ಮತಃ ॥
ಅಕಾರದಿಂದ ಕ್ಷಕಾರಾಂತ ಅಕ್ಷರಗಳನ್ನು ಮಾತೃಕಾ ವರ್ಣಗಳೆನ್ನುತ್ತಾರೆ. ಅವುಗಳ ಮಾಲಿಕೆಯನ್ನು ಅಕ್ಷಮಾಲಾ ಎಂದು ಕರೆಯುತ್ತಾರೆ. ಆ ಅಕ್ಷಮಾಲೆಯನ್ನು ಧರಿಸಿರುವುದರಿಂದ ಗಜಮುಖನು ಅಕ್ಷಮಾಲಾಧರನು.
ಓಂ ಅಕ್ಷಮಾಲಾಧರಾಯ ನಮಃ

270. ಓಂ ಜ್ಞಾನಮುದ್ರಾವಾನ್-
ಭಾ: ತರ್ಜನ್ಯಂಗುಷ್ಠ ಸಂಯೋಗೋ ಜ್ಞಾನಮುದ್ರಾ ಹೃದಿ ಸ್ಥಿತಾ ।
ತಾದೃಶೈಕಕರೋ ಜ್ಞಾನಮುದ್ರಾವಾನಿತಿ ಕಥ್ಯತೇ ॥
ತೋರುಬೆರಳು, ಹೆಬ್ಬೆರಳಿನ ಸಂಯೋಗವನ್ನು ಜ್ಞಾನಮುದ್ರೆಯೆಂದು ಕರೆಯುತ್ತಾರೆ. ತನ್ನ ಹೃದಯಸ್ಥಾನದಲ್ಲಿ ಒಂದು ಕೈಯಿಂದ ಜ್ಞಾನಮುದ್ರೆಯನ್ನು ಧರಿಸಿರುವುದರಿಂದ ಅವನು ಜ್ಞಾನಮುದ್ರಾವಂತನು.
ಓಂ ಜ್ಞಾನಮುದ್ರಾವತೇ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share