MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 91

266
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 91

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

464 . ಓಂ ಗುಹ್ಯಾಯ ನಮಃ
465 . ಓಂ ಗುಹ್ಯಾಗಮನಿರೂಪಿತಾಯ ನಮಃ
466 . ಓಂ ಗುಹಾಶಯಾಯ ನಮಃ
467 . ಓಂ ಗುಹಾಬ್ಧಿಸ್ಥಾಯ ನಮಃ
468 . ಓಂ ಗುರುಗಮ್ಯಾಯ ನಮಃ

464. ಓಂ ಗುಹ್ಯಃ-
ಭಾ: ಗುಹ್ಯ ಏಕಾಂತವೇದ್ಯತ್ವಾದ್ಧಿತಕಾರೀ ಗುಹಾಯ ವಾ।
ಏಕಾಂತದಲ್ಲಿ ತಿಳಿಯತಕ್ಕವನು ಅಥವಾ ಗುಹನಿಗೆ (ಕುಮಾರಸ್ವಾಮಿಗೆ) ಹಿತವನ್ನು ಉಂಟುಮಾಡುವವನು. ಹಾಗಾಗಿ ಅವನು ಗುಹ್ಯನು.
ಓಂ ಗುಹ್ಯಾಯ ನಮಃ

465. ಓಂ ಗುಹ್ಯಾಗಮನಿರೂಪಿತಃ-
ಭಾ: ರಹಸ್ಯತಂತ್ರವೇದ್ಯತ್ವಾದ್ ಗುಹ್ಯಾಗಮನಿರೂಪಿತಃ।
ರಹಸ್ಯಮಯವಾದ ತಂತ್ರಗಳಿಂದ ವೇದ್ಯನಾದ್ದರಿಂದ ಅವನು ಗುಹ್ಯಾಗಮನಿರೂಪಿತನು.
ಓಂ ಗುಹ್ಯಾಗಮನಿರೂಪಿತಾಯ ನಮಃ

466. ಓಂ ಗುಹಾಶಯಃ-
ಭಾ: ಗುಹಾಯಾಂ ಹೃದಯಾಕಾಶೇ ಶೇತೇ ಯಃ ಸ ಗುಹಾಶಯಃ ।
ಗುಹೆಯಲ್ಲಿ (ಹೃದಯಾಕಾಶದಲ್ಲಿ) ಇರುವವನಾದ್ದರಿಂದ ಅವನು ಗುಹಾಶಯನು.
ಓಂ ಗುಹಾಶಯಾಯ ನಮಃ

467. ಓಂ ಗುಹಾಬ್ಧಿಸ್ಥಃ-
ಭಾ: ಅವ್ಯಾಕೃತಂ ನಭೋ ಗೂಢಮಗಾಧಂ ಚ ಗುಹಾಬ್ಧಿವತ್‌ ।
ಅಧಿತಿಷ್ಠಸಿ ತತ್ತೇನ ಗುಹಾಬ್ಧಿಸ್ಥ ಇತೀರ್ಯಸೇ ॥
ಹೇ ಗುಹಾಗ್ರಜನೇ! ವಿಕೃತಿ ಇಲ್ಲದ ಆಕಾಶವು ಗುಹೆಯ ಸಮುದ್ರವೋ ಎಂಬಂತೆ ಗೂಢವೂ, ಅಗಾಧವೂ ಆಗಿದೆ. ನೀನು ಅದಕ್ಕಿಂತಲೂ ಮೇಲಿರುವೆ. ಆದ್ದರಿಂದ ನಿನ್ನನ್ನು ಗುಹಾಬ್ಧಿಸ್ಥನೆನ್ನುತ್ತಾರೆ.
ಓಂ ಗುಹಾಬ್ಧಿಸ್ಥಾಯ ನಮಃ

468. ಓಂ ಗುರುಗಮ್ಯಃ-
ಭಾ: ಗುರುಗಮ್ಯೋ ಗುರುಪ್ರೋಕ್ತಯೋಗೋಪಾಯೇನ ಲಭ್ಯಸೇ।
ಹೇ ಗಣೇಶ! ಗುರುಗಳಿಂದ ಉಪದಿಷ್ಟವಾದ ಯೋಗ ಸಂಬಂಧವಿರುವ ರಹಸ್ಯೋಪಾಯಗಳಿಂದ ಲಭ್ಯನಾದ್ದರಿಂದ ನೀನು ಗುರುಗಮ್ಯನು.
ಓಂ ಗುರುಗಮ್ಯಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ

ಬೆಂಗಳೂರು


Share