MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 3

445
Share

8-7-21

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 3

ಸಂಸ್ಕೃತದಿಂದ ಕನ್ನಡ ಅನುವಾದ : ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ
ಅವಧೂತ ದತ್ತಪೀಠ
ಮೈಸೂರು .

ಇಂದಿನ ನಾಮಾವಳಿಗಳು

7. ಓಂ ಗಜವಕ್ತ್ರಾಯ ನಮಃ
8. ಓಂ ಮಹೋದರಾಯ ನಮಃ
9. ಓಂ ಲಂಬೋದರಾಯ ನಮಃ
10. ಓಂ ಧೂಮ್ರವರ್ಣಾಯ ನಮಃ
11. ಓಂ ವಿಕಟಾಯ ನಮಃ

6. ಓಂ ಗಜವಕ್ತ್ರ :-
ಭಾಷ್ಯ : ಗಜಸೈವ ಮುಖಂ ಯಸ್ಯ ಗಜವಕ್ತಃ ಸ ಉಚ್ಯತೇ |

ಯಾವ ದೇವನಿಗೆ ಆನೆಯ ಮುಖದಂತಹ ಮುಖವಿದೆಯೋ ಆತನು ಗಜವಕ್ತ್ರನು .
ಓಂ ಗಜವಕ್ತಾಯ ನಮಃ

8. ಓಂ ಮಹೋದರ :-
ಭಾಷ್ಯ : ಅನಂತಕೋಟಿ ಬ್ರಹ್ಮಾಂಡಪೂರ್ಣ ಕುಕ್ಷಿರ್ಮಹೋದರಃ ।

ಲೆಕ್ಕವಿಲ್ಲದಷ್ಟು ಬ್ರಹ್ಮಾಂಡಗಳನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡಿರುವುದರಿಂದ ಗಣೇಶನು ಮಹೋದರನು . ಓಂ ಮಹೋದರಾಯ ನಮಃ

ಲಂಬೋದರೋ ಧೂಮ್ರವರ್ಣೋ ವಿಕಟೋ ವಿಘ್ನನಾಯಕಃ ।
ಸುಮುಖೋ ದುರ್ಮುಖೋ ಬುದ್ದೋ ವಿಘ್ನರಾಜೋ ಗಜಾನನಃ ||

9. ಓಂ ಲಂಬೋದರ :-
ಭಾಷ್ಯ : ಬ್ರಹ್ಮಾಂಡಾಲಂಬನಂ ಯಸ್ಯ ಕುಕ್ಷಿಃ
ಲಂಬೋದರಸ್ತು ಸಃ ।

ಯಾವ ದೇವನ ಊರುಗೋಲಾಗಿದೆಯೋ ಆ ದೇವನು ಲಂಬೋದರನು .
ಓಂ ಲಂಬೋದರಾಯ ನಮಃ

10. ಓಂ ಧೂಮ್ರವರ್ಣ :-
ಭಾಷ್ಯ : ವಾಯೋರ್ಬಿಜಂ ಧೂಮ್ರವರ್ಣಂ ತದ್ರೂಪತ್ವಾದಸಾವಪಿ ।
‘ ಯಂ ‘ ಎಂಬುದು ವಾಯುಬೀಜ . ಅದು ಹೊಗೆಯ ಬಣ್ಣದಲ್ಲಿ ಇರುತ್ತದೆ . ಗಣೇಶನು ಕೂಡಾ ಆ ಬಣ್ಣದಲ್ಲಿಯೇ ಮಿಂಚುತ್ತಿರುತ್ತಾನೆ . ಆದ್ದರಿಂದ ಅವನಿಗೆ ಧೂಮ್ರವರ್ಣನೆಂದು ಹೆಸರು .
ಓಂ ಧೂಮ್ರವರ್ಣಾಯ ನಮಃ

11. ಓಂ ವಿಕಟ :-
ಭಾಷ್ಯ : ‘ಕಟೇವರ್ಷಾವರಣಯೋಃ ‘ ಇತಿ ಧಾತೋರನಾವೃತಃ ।
ವಿಭುತ್ವಾತ್ ವಿಕಟಃ ಪ್ರೋಕ್ತಃ ಸ ಯಸ್ಯ ವಿಗತಃ ಕಟಃ ll

‘ ಕಟೇ ವರ್ಷಾವರಣಯೋ ‘ ಎಂಬ ಧಾತ್ವರ್ಥದಿಂದ ಕಟ ಎಂಬ ಶಬ್ದಕ್ಕೆ ಮಳೆ ಹಾಗೂ ಆವರಣ ( ಸುತ್ತಿಕೊಳ್ಳುವುದು ) ಎಂಬ ಅರ್ಥಗಳು ಸಿದ್ಧವಾಗುತ್ತವೆ .
ಕಟ ಧಾತುವಿನಿಂದ ಗಣೇಶನು ಅನಾವೃತನಾಗಿದ್ದಾನೆ . ಆದ್ದರಿಂದ ಅವನು ವಿಕಟನು . ” ವಿಗತಃ ಕಟಃ ಯಸ್ಮಾತ್ ಸಃ ” ಯಾರ ಅನುಗ್ರಹದಿಂದ ಜೀವಿಗಳಿಗೆ ಆವರಣೆ ತೊಲಗುತ್ತದೆಯೋ ಅವನು ವಿಕಟನು . “ ವಿಗತಃ ಕಟಃ ಯಸ್ಯ ಸಃ ” ಯಾರಿಗೆ ಅಥವಾ ಯಾರ ವಿಷಯದಲ್ಲಿ ಯಾವ ವಿಧವಾದ ಆವರಣೆಯೂ ಇಲ್ಲವೋ ಅಂತಹ ಗಣೇಶನು ವಿಕಟನು .
ಸರ್ವಸ್ವಾಮಿ , ಸರ್ವಪ್ರಭುವು ಆದ್ದರಿಂದಲೂ ವಿಕಟನೆನಿಸಿಕೊಳ್ಳುತ್ತಾನೆ .
ಓಂ ವಿಕಟಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share