MP – ಆಧ್ಯಾತ್ಮಿಕ ಅಂಗಳ : 19-07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 266

309
Share

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 47
॥ ಶ್ರೀಪಾದರಾಜಂ ಶರಣಂ ಪ್ರಪದ್ಧೇ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥
ಪುಟ – 266

ಶ್ರೀ ಪೀಠಿಕಾಪುರದಿಂದ ಪಂಚದೇವ ಪಹಾಡ್ ಗೆ ವಿಚಿತ್ರವಾಗಿ ತನ್ನ ತಾಯಿ ತಂದೆಯರನ್ನೂ , ಆಶ್ರಿತರನ್ನೂ ಕರೆಸಿಕೊಳ್ಳುವುದು

ಶ್ರೀಪಾದರು ಯಾರಿಗಾದರೂ ಸರಿ ಧರ್ಮಕರ್ಮಗಳು ಎಂತವೋ ತೂಗಿ , ಅಳೆದು ಕೊಡುತ್ತಾರೆ

ಶ್ರೀಪಾದವಲ್ಲಭರ ದರ್ಬಾರಿನಲ್ಲಿ ಭೋಜನವು ಸಮೃದ್ಧಿಯಾಗಿ ಉಣಬಡಿಸಲಾಗುತ್ತಿತ್ತು . ಅದೇನು ಆಶ್ಚರ್ಯವೋ ಮಾಡಿದ ಅಡಿಗೆಯನ್ನು ಎಷ್ಟು ಬಡಿಸುತ್ತಿದ್ದರೂ ಕಡಿಮೆಯಾಗುತ್ತಿರಲೇ ಇಲ್ಲ ಉಳಿದು ಹೋದ ಅನ್ನ , ಶಾಕ , ಪಾಕಾದಿಗಳನ್ನು ಆ ಪ್ರಭುಗಳು ಕೃಷ್ಣಾ ನದಿಯಲ್ಲಿ ಹಾಕಿಸುತ್ತಿದ್ದರು . ಜಲಚರಗಳಿಗೆ ಕೂಡ ಶ್ರೀಪಾದರ ಪ್ರಸಾದವು ಸಿಕ್ಕುತ್ತಿತ್ತು .
ಶ್ರೀಪಾದರು ಬಾಪನಾರ್ಯರೊಂದಿಗೆ , ” ತಾತಾ ! ಶ್ರೀಶೈಲದಲ್ಲಿ ಸೂರ್ಯ ಮಂಡಲದಿಂದ ಶಕ್ತಿಪಾತವನ್ನು ಮಾಡಿಸಿದೆ . ನಾನು ಅವತರಿಸಬೇಕೆಂದು ಎಷ್ಟೋ ಕಳಕಳಿಯಿಂದ ಭಾರದ್ವಾಜರ ಆಧ್ವರ್ಯದಲ್ಲಿ ತ್ರೇತಾಯುಗದಲ್ಲಿ ಪೀಠಿಕಾಪುರದಲ್ಲಿ ಸವಿತೃಕಾಠಕ ಚಯನವನ್ನು ಮಹರ್ಷಿಗಳೆಲ್ಲರೂ ಸೇರಿ ಮಾಡಿದರು . ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ನಾನು ಅವತರಿಸಿದೆನು . ಬ್ರಹ್ಮ ಸ್ವರೂಪವು ವಾಕ್ಕಿಗೂ ಮನಸ್ಸಿಗೂ ಸಿಗುವುದಿಲ್ಲವೆಂದೂ ದತ್ತಪ್ರಭುಗಳಿಗೆ ಸಾಧ್ಯಾಸಾಧ್ಯತೆಗಳೆಂಬುವುದು ಇರುವುದಿಲ್ಲವೆಂದೂ ಘಂಟಾಘೋಷವಾಗಿ ಹೇಳುವೆಯಂತೆ ನಮಗೆ ! ನಾನು ದೇಶ ಕಾಲಗಳನ್ನು ಹಿಗ್ಗಿಸಬಲ್ಲೆ , ಕುಗ್ಗಿಸಬಲ್ಲೆ ನನ್ನ ಇಚ್ಛೆಗೆ ಎದುರಿಲ್ಲ . ನನಗೆ ಅವಶ್ಯಕವೆಂದೆನಿಸಿದರೆ ಮಣ್ಣನ್ನೂ , ಬಂಗಾರವನ್ನೂ ಒಂದಾಗಿ ಮಾಡಬಲ್ಲೆನು . ಅಂತರಿಕ್ಷದಲ್ಲಿರುವ ಖಗೋಳಗಳೆಲ್ಲವೂ ನನ್ನ ಕೈಯಿನ ಆಟದ ಚೆಂಡುಗಳಂತೆ . ನೀನು ಲಾಭಾದ ಮಹರ್ಷಿ ಯಾಗಿಯೂ , ನಂದನಾಗಿಯೂ , ಭಾಸ್ಕರಾಚಾರ್ಯನಾಗಿಯೂ ಅವತರಿಸಿದಾಗ ನಿನ್ನನ್ನು ಅನುಗ್ರಹಿಸಿದೆ . ಈಗ ಬಾಪನ್ನಾವಧಾನಿಗಳಾಗಿ ಬಂದಾಗ ನಾನು ಶ್ರೀಪಾದ ಶ್ರೀವಲ್ಲಭನಾಗಿ ಬಂದೆನು . ಇದರಲ್ಲಿ ಆಶ್ಚರ್ಯ ಪಡಬೇಕಾದ ದೊಡ್ಡ ವಿಷಯವೇನೂ ಇಲ್ಲ “ಎಂದು ಹೇಳಿದರು .
ಆಗ ವೆಂಕಟಪ್ಪಯ್ಯ ಶ್ರೇಷ್ಠಿ “ ಬಂಗಾರ ! ಕಣ್ಣಾ ! ನಿನಗೆ ಎಲ್ಲವೂ ಸರ್ವೆ ಸಾಮಾನ್ಯವಾಗಿ ಕಾಣಿಸುತ್ತದೆ . ನಮಗೆ ಮಾತ್ರ ಎಲ್ಲವೂ ಅಸಾಧಾರಣವಾಗಿಯೂ ರೋಮಾಂಚಕವಾಗಿಯೂ ಕಾಣಿಸುತ್ತದೆ ” ಎಂದರು .
ಶ್ರೀಪಾದರು , ” ತಾತಾ ನಾನು ಬಹು ಕುಶಲತೆಯುಳ್ಳ ಅಕ್ಕಸಾಲಿ . ಯಾರಿಗೆ ಎಷ್ಟು ಕೊಡಬೇಕೋ , ಅವರ ಧರ್ಮಕರ್ಮಗಳು ಎಂತಹವೋ ತೂಗಿ ಅಳೆದು ಕೊಡುತ್ತೇನೆ . ನನ್ನಿಂದ ಹೊರಬರುವ ಒಂದು ಸಣ್ಣ ಕಿರಣವೇ ಮಹಾಯೋಗಿಯಾಗಿ ಮಹಾಸಿದ್ಧನಾಗಿ ಮಾರ್ಪಡುವುದು . ಅಷ್ಟು ಸಣ್ಣ ಕಿರಣವನ್ನೇ ಈ ಭೂಮಿ ತಟ್ಟುಕೊಳ್ಳಲಾರದು . ಸ್ವಲ್ಪ ಕುಂಡಲಿನಿಯನ್ನು ಜಾಗೃತಗೊಳಿಸಿದರೇನೇ ನೀವು ಭರಿಸಲಾರಿರಿ . ಆದ್ದರಿಂದಲೇ ನನ್ನನ್ನು ನಾನು ಮಾಯೆಯಲ್ಲಿ ಅಡಗಿಸಿಕೊಳ್ಳುವೆನು . ಅವಶ್ಯಕತೆ ಇದೆ ಎಂದು ತೋರಿದಾಗ ನಾನು ಎಂಥ ಅಸಾಧಾರಣ ಲೀಲೆಯನ್ನಾದರೂ ಪ್ರದರ್ಶಿಸಬಲ್ಲೆ ನಾನು ಎತ್ತಲಾರದ ಭಾರ ಇಲ್ಲ , ನಾನು ಪರಿಹರಿಸಲಾಗದ ಸಮಸ್ಯೆ ಇಲ್ಲ , ನಾನು ಕೊಡಲಾಗದ ವರಗಳು ಇಲ್ಲ , ನಾನು ಮಾಡಲಾಗದ ಕಾರ್ಯಗಳು ಇಲ್ಲ . ಪೀಠಿಕಾಪುರದಿಂದ ನಿಮ್ಮೆಲ್ಲರನ್ನೂ ಈ ವಿಧವಾಗಿ ಕರೆಸಿಕೊಳ್ಳುವುದರ ಉದ್ದೇಶವು ನಾನು ದತ್ತ ಎಂದು ತಿಳಿಯಪಡಿಸುವುದಕ್ಕೋಸ್ಕರವೇ ” ಎಂದು ವಿವರಿಸಿದರು .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 267
ತಪ್ಪು ಮಾಡುವನೊಬ್ಬ,
ಶಿಕ್ಷೆ ಅನುಭವಿಸುವವ ಅವನಲ್ಲ, ಬೇರೊಬ್ಬ.
ಕಷ್ಟಪಡುವವನೊಬ್ಬ, ಫಲಾನುಭವಿ ಇನ್ನೊಬ್ಬ .
ಇದುವೇ ಲೋಕದ ನ್ಯಾಯ-
ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share