MP – ಆಧ್ಯಾತ್ಮಿಕ ಅಂಗಳ : 22-07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 268

320
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ –
ಅಧ್ಯಾಯ 47
ಪುಟ – 268

ಅಪ್ಪಲರಾಜಶರ್ಮ , ” ಮಗೂ ! ಬಂಗಾರ ! ನೀನು ದತ್ತಪ್ರಭುವೆಂದು ತಿಳಿಯದೆ ಏನಾದರೂ ಅಪರಾಧಗಳನ್ನು ಮಾಡಿದ್ದರೆ ಕ್ಷಮಿಸಬೇಕು ” ಎಂದು ಪ್ರಾರ್ಥಿಸಿದರು . ಶ್ರೀಪಾದರು , “ ಅಪ್ಪಾ ! ನಾನು ನಿನ್ನ ಮಗು , ತಂದೆಯನ್ನು ಮಗು ಕ್ಷಮಿಸಬೇಕಾ ? ಎಂಥಾ ಸೋಜಿಗ ! ನೀವು ಮಗುವಾದ ನನ್ನ ಮೇಲೆ ವಾತ್ಸಲ್ಯಾಮೃತವನ್ನು ವರ್ಷಿಸಬೇಕು . ಸದಾ ನನ್ನ ಅಭ್ಯುದಯವನ್ನು ಕೋರಬೇಕು ” ಎಂದು ಹೇಳಿದರು .
ವೆಂಕಾವಧಾನಿಗಳು , ಅವರ ಧರ್ಮಪತ್ನಿಯೂ ಧಾರಾಕಾರವಾಗಿ ಕಣ್ಣೀರು ಸುರಿಸುತ್ತಾ ಅಳುತ್ತಿದ್ದರು . ಆಗ ಶ್ರೀಪಾದರು , ‘ ಮಾವಯ್ಯ ! ನಮ್ಮ ಬಂಧುತ್ವವು ಶಾಶ್ವತವಾದದ್ದು ನಾನು ನಿಮಗೆ ಮಾತ್ರವೇ ಸೋದರಳಿಯನಲ್ಲ , ನಿಮ್ಮ ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ನನ್ನನ್ನು ಸೋದರಳಿಯನೆಂದೇ ಭಾವಿಸಬಹುದು . ನಾನು ನನ್ನ ದಿವ್ಯಲೀಲೆಗಳಿಂದ ನಿಮ್ಮನ್ನು ಸಂತೋಷಪಡಿಸುತ್ತೇನೆ . ಕಲ್ಕಿ ಅವತಾರ ಸಮಯದಲ್ಲಿ ಪದ್ಮಾವತಿ ದೇವಿಯನ್ನು ಮಗಳಾಗಿ ಭಾವಿಸಿ ನಿಮ್ಮ ಬಯಕೆಗಳನ್ನೆಲ್ಲಾ ತೀರಿಸಿಕೊಳ್ಳಬಹುದು ‘ ಎಂದು ಹೇಳಿದರು . ಸುಮತಿ ಮಹಾರಾಣಿಗೆ ದುಃಖವು ಉಕ್ಕಿ ಬಂತು . ಮಗನನ್ನು ಮದುಮಗನನ್ನಾಗಿ ಅಲಂಕರಿಸಿ ನೋಡಿ ಆನಂದಿಸಬೇಕೆಂದಿದ್ದ ಅವರ ಬಯಕೆ ತೀರದೆ ತನ್ನ ಮಗ ಯತೀಶ್ವರನಾಗಿ ವಿರಾಗಿಯಾಗಿ ಕಾಣಿಸುತ್ತಿರುವುದು ಅವರಿಗೆ ಸಹಿಸಲಾರದಾಯಿತು . ಆಗ ಶ್ರೀಪಾದರು ಹೆತ್ತ ತಾಯಿಯ ಹತ್ತಿರ ಹೋಗಿ , “ ಅಮ್ಮಾ ! ನನಗೆ ಅನುಸೂಯ ಮಾತೆ ಬೇರೆ , ನೀನು ಬೇರೆ ಅಲ್ಲವೇ ಅಲ್ಲ , ನಿನ್ನ ಕೋರಿಕೆಗಳನ್ನು ಕಲ್ಕಿ ಅವತಾರದಲ್ಲಿ ತಪ್ಪದೆ ತೀರಿಸುತ್ತೇನೆ ” ಎಂದು ಅಭಯವಿತ್ತರು .
” ಅಮ್ಮಾ ! ನಿನ್ನ ಗರ್ಭವಾಸದಿಂದ ಜನಿಸಿದ್ದರಿಂದಲೇ ನಾನು ಇಷ್ಟು ದೊಡ್ಡವನಾದೆ . ನಿನ್ನ ವಾತ್ಸಲ್ಯಾಮೃತದಿಂದಲೇ ನಾನು ಬೆಳೆದಿದ್ದು , ಅಮ್ಮಾ ! ವಾಸವಿ ಎಂತಹ ಕೆಲಸ ಮಾಡಿದಳು ನೋಡಿದೆಯಾ ? ನನಗೆ ಹಸಿವಾದ್ದರಿಂದ ಹಸುಗೂಸಾಗಿ ಅನಸೂಯ ಮಾತೆಯ ಹತ್ತಿರ ಸ್ತನ್ಯಪಾನ ಮಾಡಲು ಹೋದೆ . ಆ ರಾಕ್ಷಸಿ ವಾಸವಿ ಎಲ್ಲಾ ಹಾಲನ್ನು ತಾನೇ ಕುಡಿದು ಅಣ್ಣಾ ನೀನು ಸುಮತಿ ಮಾತೆಯ ಹತ್ತಿರ ಹೋಗಿ ಹಾಲುಕುಡಿ ! ನೀನು ತಡ ಮಾಡಿದರೆ ಆ ಹಾಲನ್ನು ಕೂಡಾ ನಾನೇ ಕುಡಿದು ಬಿಡುತ್ತೇನೆ ಎಂದಳು . ನಾನಿನ್ನೇನು ಮಾಡಬೇಕು . ನೀನೇ ಹೇಳಮ್ಮ ‘ ಎಂದು ಹೇಳಿದಾಕ್ಷಣ ಶ್ರೀಪಾದರು ಹಸುಗೂಸಾಗಿ ಮಾರ್ಪಟ್ಟರು . ಕೆಳಗೆ ಬಿರುಸಾದ ನೆಲದ ಮೇಲೆ ಅಂಬೆಗಾಲಿಡುತ್ತಾ ಕೂಸು ತನ್ನ ತಾಯಿಯ ಕಡೆ ದೀನತೆಯಿಂದ ನೋಡಲಾರಂಭಿಸಿತು . ಆಗ ಸುಮತಿ ಮಹಾರಾಣಿಗೆ ದುಃಖವು ಉಕ್ಕಿ ಬಂತು . ಮಗುವನ್ನು ಎತ್ತಿಕೊಂಡು ಸ್ತನ್ಯಪಾನ ಮಾಡಿಸಿದಳು . ಅಮ್ಮಾ ! ವಾಸವಿ ! ಎಂದು ಕರೆದಳು . ಶ್ರೀಪಾದರ ಹೋಲಿಕೆಯಿದ್ದ ಕೆಲವು ತಿಂಗಳುಗಳ ಹೆಣ್ಣು ಮಗು ನಲದ ಮೇಲೆ ಕಾಣಿಸಿತು . ಇಬ್ಬರೂ ಒಟ್ಟಾಗಿ ಸ್ತನ್ಯಪಾನ ಮಾಡಿದರು . ಸುಮತಿ ಮಾತೆಯ ದುಃಖವೆಲ್ಲಾ ಮಾಯವಾಯಿತು .
ನಂತರ ವೆಂಕಯ್ಯನು , ” ಮಹಾಗುರುಗಳಲ್ಲಿ ಒಂದು ಚಿಕ್ಕ ಬಿನ್ನಪ , ಇಂತಹ ದಿವ್ಯಲೀಲೆ ನಡೆದ ಈ ದರ್ಬಾರು ಪ್ರದೇಶ ಇದರ ಸುತ್ತಮುತ್ತಲಿನ ವಿಶಾಲ ಪ್ರದೇಶವು ವಿಶ್ವ ವಿಖ್ಯಾತವಾಗಬೇಕು ‘ ಎಂದು ಹೇಳಿದನು .
ಶ್ರೀಪಾದರು , “ ಭವಿಷ್ಯತ್ ಕಾಲದಲ್ಲಿ ನನ್ನ ದರ್ಬಾರು ಜಾಗದಲ್ಲಿ ಭವ್ಯ ಭವನವು ನಿರ್ಮಿಸಲ್ಪಡುತ್ತದೆ . ಅದರಲ್ಲಿ ಹಸುಗಳು ಕೂಡ ಇರುತ್ತವೆ . ಅಲ್ಲಿ ನನ್ನ ಎಷ್ಟೋ ಲೀಲೆಗಳನ್ನು ಪ್ರದರ್ಶಿಸುವೆನು ‘ ಎಂದು ಹೇಳಿದರು .
ಇದು ನಾನು ಕಣ್ಣಾರಾ ನೋಡಿದ ಅನುಭವವು ಇಂದು ನಾನು ಬರೆದಿರುವುದು ಅಕ್ಷರ ಸತ್ಯ . ಅಲ್ಲಿದ್ದ ಆಗಂತುಕರೆಲ್ಲರಿಗೂ ಮತ್ತಿನಂತಹ ನಿದ್ರೆಯು ಪುನಃ ಆವರಿಸಿತು . ಸ್ವಲ್ಪ ಹೊತ್ತಿನ ನಂತರ ನಾನು , ಸನ್ಯಾಸಿ , ಶ್ರೀಪಾದರನ್ನು ಬಿಟ್ಟರೇ ಉಳಿದವರಾರೂ ಆ ದರ್ಬಾರಿನಲ್ಲಿ ಇಲ್ಲ , ಅವರೆಲ್ಲರೂ ಏನಾದರು ? ಎಂದು ನಾನು ಕಳವಳಗೊಂಡ ಯಾವುದಾದರೂ ರಾಕ್ಷಸ ಮಾಯೆಯು ಅವರನ್ನು ಬಲಿ ತೆಗೆದುಕೊಂಡಿತಾ ಎನ್ನುವ ಸಂದೇಹವು ಉಂಟಾಯಿತು .
ಆಗ ಶ್ರೀಪಾದರು , “ ನನ್ನ ಸನ್ನಿಧಿಯಲ್ಲಿ ಯಾವ ರಾಕ್ಷಸ ಮಾಯೆಯೂ ಕೆಲಸ ಮಾಡುವುದಿಲ್ಲ , ಅವರೆಲ್ಲರನ್ನೂ ಮತ್ತೆ ಕ್ಷೇಮವಾಗಿ ಪೀಠಿಕಾಪುರಕ್ಕೆ ಸೇರಿಸಿದ್ದೇನೆ . ಯದ್ಭಾವಂ ತದ್ಭವತಿ , ನನ್ನನ್ನು ಯಾರು ಯಾವ ಭಾವದಿಂದ ಪೂಜಿಸುತ್ತಾರೋ ಅವರನ್ನು ಆ ಭಾವದ ಮೂಲಕವೇ ಕಡೆ ಹಾಯಿಸುತ್ತೇನೆ . ಇದು ನನ್ನ ವ್ರತ . ”
॥ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ॥
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 269
ಅಖಂಡ ಸಚ್ಚಿದಾನಂದ ಆತ್ಮಾನಂದ ಪಡೆಯುವುದಕಾಗಿ
ಮಾಡು ಅನುಸಂಧಾನ, ಆತ್ಮದಲ್ಲಿಯೇ ನೋಡು .
ಬಾಹ್ಯ ಪ್ರಪಂಚದ ಸುಖಕ್ಕೆ ಸಂಭ್ರಮಿಸದಿರು ಮನವೆ .
ನಿರವಧಿ ಸುಖವೆಂಬುದು ಇದುವೆ
ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share