MP : ಆಧ್ಯಾತ್ಮಿಕ ಅಂಗಳ : 27/07/2021 ರ ಶ್ರೀಪಾದ ವಲ್ಲಭರ ಚರಿತ್ರೆ : 270

345
Share

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ
ಅಧ್ಯಾಯ 48
ಪುಟ : 270

ಶ್ರೀಪಾದರ ದರ್ಬಾರನ್ನು ನೋಡಿದವರು ಧನ್ಯರು . ಭಕ್ತರು ತರಕಾರಿಯನ್ನೂ ಜೋಳ , ರಾಗಿ ಮೊದಲಾದವುಗಳನ್ನೋ ತರುತ್ತಿದ್ದರು . ಪ್ರತಿದಿನವೂ ಅನ್ನ ಸಂತರ್ಪಣೆಯಾಗುತ್ತಿತ್ತು . ಆದರೆ ಗುರುವಾರ ಮಾತ್ರ ಪ್ರತ್ಯೇಕವಾಗಿ ಅಡಿಗೆ ಮಾಡಲಾಗುತ್ತಿತ್ತು . ಆ ದಿನ ಯಾವುದಾದರೊಂದು ಸಿಹಿ ಪದಾರ್ಥವನ್ನು ಮಾಡಿಸಿ ಭಕ್ತರಿಗೆ ಹಂಚುತ್ತಿದ್ದರು . ಶ್ರೀಪಾದರ ಹೃದಯ ಮಹಾಕೋಮಲ , ಯಾವುದಾದರೂ ಕಷ್ಟಗಳಿಂದ ನರಳುತ್ತಾ ದರ್ಬಾರಿಗೆ ಬಂದವರು ಅವರ ಬಾಧೆಗಳು ನಿವಾರಣೆಯಾಗಿ ಆನಂದದಿಂದ ಮನೆಗೆ ಹೋಗುತ್ತಿದ್ದರು . ದತ್ತ ಪುರಾಣವನ್ನು ಓದಿದರೆ ಭಕ್ತರಿಗೆ ತಪ್ಪದೆ ಅನುಗ್ರಹ ಲಭಿಸುತ್ತದೆಯೆಂದು ಹೇಳುತ್ತಿದ್ದರು . ಅವರದು ಕೋಟಿ ತಾಯಿಯರ ಪ್ರೇಮ .
ರಾತ್ರಿಯ ಹೊತ್ತು ಯಾರನ್ನೂ ಕುರುಗಡ್ಡೆಯಲ್ಲಿ ಇರಲು ಬಿಡುತ್ತಿರಲಿಲ್ಲ ಆದರೆ ನನ್ನ ಜೊತೆಯಲ್ಲಿ ಬಂದ ವೃದ್ಧ ಸನ್ಯಾಸಿಯನ್ನು ಸ್ವಲ್ಪ ಕಾಲ ಇರಲು ಬಿಟ್ಟರು . ನನ್ನನ್ನು ರಾತ್ರಿಯ ಹೊತ್ತು ಕುರುಗಡ್ಡೆಯಲ್ಲೇ ಇದ್ದು ಬಿಡು ಎನ್ನುತ್ತಿದ್ದರು . ವೃದ್ಧ ಸನ್ಯಾಸಿಯನ್ನು ಕಾಶಿಗೆ ಹೋಗಿ ಇರುವಂತೆಯೂ , ಅಲ್ಲಿಯೇ ದೇಹವನ್ನು ಬಿಡುವಂತೆಯೂ ಹೇಳಿದರು . ಅಡಿಗೆ ಪಾತ್ರೆಗಳನ್ನು ತೊಳೆಯುವುದು , ಭೋಜನವನ್ನು ತಯಾರುಮಾಡುವುದು , ಬಂದ ಭಕ್ತರಿಗೆ ತೊಂದರೆಯಾಗದಂತೆ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದು , ಇದು ನನ್ನ ಪಾಲಿನ ಕೆಲಸ , ದರ್ಬಾರಿಗೆ ಯಾವ ವೇಳೆಯಲ್ಲಿ ಬಂದರೂ ಅವರಿಗೆ ಊಟವನ್ನು ಕೊಡಲೇಬೇಕು . ಆಗಲೇ ಊಟವಾಗಿದೆ ಎಂದು ಹೇಳಿದವರಿಗೆ ಕೊಡುವುದು ಪ್ರಸಾದವಾದುದರಿಂದ ಭೋಜನವನ್ನು ಮಾಡಿಯೇ ತೀರಬೇಕೆಂದು ಹೇಳುವರು . ಮಾಡಿದ ಅಡಿಗೆಯು ಕಡಿಮೆಯಿದೆಯೆಂದೂ ಆಗಂತುಕರು ಹೆಚ್ಚು ಜನರಿದ್ದಾರೆಂದೂ ನಾನು ಹೇಳಿದರೆ ತಮ್ಮ ಕಮಂಡಲೋದಕವನ್ನು ಮಾಡಿದ ಅಡಿಗೆಯ ಮೇಲೆ ಪ್ರೋಕ್ಷಿಸುತ್ತಿದ್ದರು . ಅವರು ಪ್ರೋಕ್ಷಿಸಿದ ಅಡಿಗೆಗಳು ಅಕ್ಷಯವಾಗುತ್ತಿದ್ದವು . ಇದು ಅನೇಕ ಸಲ ನಡೆದಿದೆ .
ರಾತ್ರಿ ವೇಳೆಯಲ್ಲಿ ದೇವತೆಗಳು ಕುರುಗಡ್ಡೆಗೆ ವಿವಿಧ ವಿಮಾನಗಳಲ್ಲಿ ಬಂದು ಮಹಾಗುರುಗಳನ್ನು ಸೇವಿಸಿ ಅವರ ಆಶೀರ್ವಚನಗಳನ್ನು ಪಡೆದು ಹೋಗುತ್ತಿದ್ದರು . ಒಮ್ಮೊಮ್ಮೆ ಹಿಮಾಲಯದಿಂದ ಕೆಲವರು ಯೋಗಿಗಳು ಬರುತ್ತಿದ್ದರು . ಅವರೂ ಕೂಡ ನೀರಿನ ಮೇಲೆ ನಡೆದುಕೊಂಡೇ ಬರುತ್ತಿದ್ದರು . ಅವರ ದೇಹಗಳು ಕಾಂತಿಯುತವಾಗಿ ಇರುತ್ತಿದ್ದವು . ಅವರಿಗೆ ಶ್ರೀಪಾದರೇ ಸ್ವಹಸ್ತದಿಂದ ಭೋಜನವನ್ನು ಬಡಿಸುತ್ತಿದ್ದರು .
ಶ್ರೀಪಾದರ ಭೋಜನವು ಒಂದು ಹಿಡಿಯಷ್ಟು ಮಾತ್ರವೇ . ಅಕ್ಕಿಯ ಅನ್ನವಾದರೂ ಸರಿ , ಜೋಳದ ಅನ್ನವಾದರೂ ಸರಿ , ಇಲ್ಲವೆ ರಾಗಿಯ ಮುದ್ದೆಯಾದರೂ ಸರಿ , ತನ್ನ ಭಕ್ತರು ಹೊಟ್ಟೆ ತುಂಬಾ ಊಟ ಮಾಡಿದರೆ ಅವರಿಗೆ ಎಷ್ಟೋ ಸಂತೃಪ್ತಿಯಾಗಿ ಇರುತ್ತದೆಂದು ಹೇಳುತ್ತಿದ್ದರು .
ರವಿದಾಸ ಎಂಬ ಅಗಸರವನಿಗೆ ಶ್ರೀಪಾದರ ಬಟ್ಟೆಗಳನ್ನು ಒಗೆಯುವ ಮಹಾಭಾಗ್ಯವು ಲಭಿಸಿತ್ತು . ಅವರ ದರ್ಶನವನ್ನು ಮಾಡಿದ ಬಳಿಕವೂ ತಮ್ಮ ಕೆಟ್ಟ ಚಾಳಿಗಳನ್ನು ಬಿಡದವರಿಗೆ ವಿಚಿತ್ರ ಕಷ್ಟಗಳು ಸಂಭವಿಸುತ್ತಿದ್ದವು . ಅವುಗಳ ನಿವಾರಣೆಗೆ ಅವರು ಶ್ರೀಪಾದರನ್ನೇ ಆಶ್ರಯಿಸಬೇಕಾಗುತ್ತಿತ್ತು . ಸತ್ತು ಹೋದ ಹಿರಿಯರಿಗೆ ಕಡ್ಡಾಯವಾಗಿ ಶ್ರಾದ್ಧವನ್ನು ಮಾಡಿಯೇ ತೀರಬೇಕೆಂದು ಹೇಳುತ್ತಿದ್ದರು . ಎಲ್ಲ ಕುಲದವರೂ ತಮ್ಮ ಮಕ್ಕಳಂತೆಯೇ ಎಂದೂ , ಅವರಿಗೆ ಯಾರಲ್ಲಿಯೂ ಪಕ್ಷಪಾತ ಬುದ್ದಿ ಇಲ್ಲವೆಂದೂ , ಅವರು ಅನುಸರಿಸುವ ಧರ್ಮ ಕರ್ಮಗಳಿಗನುಸಾರವಾಗಿ ತಾವು ಫಲವನ್ನು ಕೊಡುವುದಾಗಿಯೂ ಹೇಳುತ್ತಿದ್ದರು . ಈ ದಿನ ಸಿಕ್ಕಿರುವ ಮಹದವಕಾಶವು ಮತ್ತೆ ಮತ್ತೆ ಸಿಗುವುದಿಲ್ಲವೆಂದೂ ಬರುವ ಅವತಾರದಲ್ಲಿ ತಾವು ಹೆಚ್ಚು ಕಠಿಣವಾಗಿ ಪ್ರವರ್ತಿಸುವೆನೆಂದೂ ಹೇಳುತ್ತಿದ್ದರು . ಎಷ್ಟೋ ಜನ್ಮಗಳ ಪುಣ್ಯ ಫಲದಿಂದ ಅವರ ದರ್ಶನವು ದೊರೆಯುತ್ತದೆಂದೂ ಸಿಕ್ಕ ಸದವಕಾಶವನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳಬೇಕೆಂದೂ , ಇಲ್ಲದಿದ್ದರೆ ಅನೇಕ ಜನ್ಮಗಳ ನಂತರವೇ ಸದ್ಗುರು ದರ್ಶನವು ದೊರೆಯುವುದೆಂದೂ ಹೇಳುತ್ತಿದ್ದರು . ಈ ವಿಶಾಲ ಪ್ರಪಂಚದಲ್ಲೆಲ್ಲಾ ಯಾವ ಯುಗದಲ್ಲಿಯಾದರೂ ಒಂದು ಲಕ್ಷ ಇಪ್ಪತ್ತೈದು ಸಾವಿರ ಜನ ಸಿದ್ಧ ಪುರುಷರು ಇರುತ್ತಾರೆಂದೂ , ಅವರೆಲ್ಲರೂ ಶ್ರೀಪಾದರ ಅಂಶವೇ ಎಂದೂ , ಅವರಲ್ಲಿ ಯಾರನ್ನು ಆಶ್ರಯಿಸಿದರೂ ಶ್ರೀಪಾದರ ಅನುಗ್ರಹವೇ ಅವರ ಮೂಲಕ ಪ್ರಾಪ್ತವಾಗುವುದೆಂದೂ ಹೇಳುತ್ತಿದ್ದರು .
ಈ ಸೃಷ್ಟಿಗೆಲ್ಲವೂ ಅವರೇ ಆಧಾರವೆಂದೂ , ತನ್ನ ಸಂಕಲ್ಪ ಮಾತ್ರದಿಂದಲೇ ಅದು ಸೃಷ್ಟಿ , ಸ್ಥಿತಿ , ಲಯಗಳನ್ನು ಹೊಂದುವುದೆಂದೂ ಹೇಳುವರು . ನಿನ್ನ ಗುರುವಿಗೆ ನೀನು ನಮಸ್ಕಾರ ಮಾಡಿದರೆ ಅವರು ತಮ್ಮ ಗುರುವಿಗೆ ನಮಸ್ಕಾರ ಮಾಡುವರು . ಈ ಪ್ರಕಾರವಾಗಿ ನಾವು ಯಾವ ಗುರುವಿಗೆ ನಮಸ್ಕರಿಸಿದರೂ ಅದು ಆದಿ ಗುರುವಾದ ತಮಗೇ ಸೇರುತ್ತದೆಂದು ಶ್ರೀಪಾದರು ಹೇಳುವರು . ದೇವತೆಗಳಿಗೆ ಕೋಪ ಬಂದರೆ ಗುರು ರಕ್ಷಿಸುತ್ತಾನೆಂದೂ , ಗುರುವಿಗೇ ಕೋಪ ಬಂದರೆ ಯಾರೂ ರಕ್ಷಕರಿಲ್ಲವೆಂದೂ ಹೇಳುವರು . ತಮ್ಮನ್ನು ಆರಾಧಿಸುವವರಿಗೆ ಇಹ ಪರ ಲಾಭಗಳೆರಡೂ ಕೂಡ ಲಭಿಸುವುದಾಗಿಯೂ ಈ ಸೃಷ್ಟಿಯಲ್ಲಿ ಯಾರನ್ನೂ ದ್ವೇಷಿಸಬಾರದೆಂದೂ ಯಾರನ್ನು ದ್ವೇಷಿಸಿದರೂ ಕೊನೆಗೆ ಅದು ಕೂಡ ತನ್ನ ಹತ್ತಿರಕ್ಕೆ ಸೇರುತ್ತದೆಂದೂ ಹೇಳುವರು .
ತಾವು ಅನುಗ್ರಹಿಸಬೇಕೆನಿಸಿದರೆ ಯೋಗ್ಯತಾ ಯೋಗ್ಯತೆಗಳನ್ನು ಕೂಡಾ ಪರಿಶೀಲಿಸುವುದಿಲ್ಲವೆಂದೂ ಆದರೆ ತಮ್ಮ ಅನುಗ್ರಹವನ್ನು ಹೊಂದುವಂತಹ ಸಾತ್ವಿಕ ಭಾವನೆಗಳು ಅವನಲ್ಲಿ ಇರಬೇಕೆಂದೂ ಹೇಳುವರು .

ಹೃದಯದಲ್ಲಿ ಭಗವನ್ನಾಮವನ್ನು ಸ್ಮರಿಸುತ್ತಾ ಸದಾ ಕರ್ಮಗಳನ್ನು ಆಚರಿಸಬೇಕು

ಕುರುಗಡ್ಡೆ ವಿಶೇಷ ಮಹಿಮಾನ್ವಿತ ಕ್ಷೇತ್ರವೆಂದೂ , ಇಲ್ಲಿರುವ ಈಶ್ವರನು ಜಾಗ್ರತ ಮೂರ್ತಿಯೆಂದೂ , ಇಲ್ಲಿಗೆ ದೇವತೆಗಳು , ಮಹರ್ಷಿಗಳು , ಮಹಾಪುರುಷರು , ಮಾರುವೇಷದಲ್ಲಿ ಬಂದು ಜನರಿಗೆ ಕಾಣಿಸದೆ ಇರುತ್ತಾರೆಂದೂ , ಇಲ್ಲಿ ಎಲ್ಲರಿಗೂ ಅವರವರ ಸ್ಥಾನ ಅವರಿಗಿದೆಯೆಂದೂ , ಹೃದಯದಲ್ಲಿ ಭಗವನ್ನಾಮವನ್ನು ನಿಲ್ಲಿಸಿಕೊಂಡು ಸದಾ ಕರ್ಮಗಳನ್ನಾಚರಿಸ ಬೇಕೆಂದೂ , ಆಯಾ ಕರ್ಮಗಳು ಧರ್ಮ ಸಮ್ಮತವಾಗಿರಬೇಕೆಂದೂ ಹೇಳುವರು . ಅವರ ದರುಶನವು ಲಭಿಸಿದ ಮಾತ್ರದಿಂದಲೇ ಮಹಾಪಾಪಗಳು ಕೂಡ ತೊಲಗಿ ಹೋಗುವವೆಂದೂ ಅನಂತರ ನೀವು ಪುಣ್ಯ ಕರ್ಮಗಳಲ್ಲಿ ಅನುರಕ್ತರಾದರೆ ಶುಭ ಫಲಗಳನ್ನು ಹೊಂದುವುದಕ್ಕೆ ಸಾಧ್ಯವಾಗುವುದೆಂದೂ ಹೇಳುವರು . ಶ್ರೀಪಾದರ ದಿವ್ಯ ವಚನಗಳನ್ನು ಅನುಸರಿಸಿ ನಮ್ಮ ಜೀವನವನ್ನು ನಡೆಸಿದರೆ ನಮ್ಮ ಜನ್ಮ ಸಾರ್ಥಕವಾಗುವುದು .

|| ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ||

( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 271
ಮನೆಯಲೆಲ್ಲಾ ಚೆನ್ನವಾಗಿ ನಡೆದರೆ ಆಗ
ಅದೆಲ್ಲಾ ತನ್ನಿಂದಲೇ ಎನ್ನುತ್ತಾನೆ ಮನುಜ .
ಏರುಪೇರಾದಾಗ ಇದಕ್ಕೆ ದೇವರೆ ಹೊಣೆ
ಎಂದು ದೂಷಿಸುವುದೇ ಅವನ ಚಾಳಿ .
ಇದು ಬಲ್ಲ ನೀ ಎಲ್ಲ ತಿಳಿದವನಲ್ಲವೇ ಪ್ರಭು ?
ಸಕಲ ರಕ್ಷಕ ನೀನೇ
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share