MP – ಆಧ್ಯಾತ್ಮಿಕ ಅಂಗಳ : 28-07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 271

351
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 49
ಪುಟ : 271

|| ಶ್ರೀಪಾದರಾಜಂ ಶರಣಂ ಪ್ರಪದ್ಧೇ ||
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥

ಶ್ರೀಪಾದರು ಕರ್ಮ ವಿಧ್ವಂಸ ಮಾಡುವ ವಿಧಾನಗಳು

33 ಸಂಖ್ಯೆಯ ವಿಶೇಷ , ಕುರುಗಡ್ಡೆಯಲ್ಲಿ ಅವರ ಕಾರ್ಯಕ್ರಮಗಳು

ಶ್ರೀಪಾದರು ಒಮ್ಮೆ , ” ಶಂಕರಭಟ್ಟ ! ನಾವು ಅನುಷ್ಠಾನ ಮಾಡುವುದು ಅಗ್ನಿ ವಿದ್ಯೆ . ಅಗ್ನಿ ಉಪಾಸನೆ ಮಾಡುವುದು ಶ್ರೋತ್ರೀಯ ಲಕ್ಷಣ . ನಿನ್ನ ಅಗ್ನಿ ಉಪಾಸನೆ ಹರಿಒಲೆ ಹತ್ತಿಸಿ ಅಡಿಗೆ ಮಾಡುವುದೇ ! ” ಎಂದು ಹೇಳಿದರು . ಆಗ ನಾನು ಶ್ರೀಪಾದರೊಡನೆ , ” ಮಹಾಗುರುಗಳಿಗೆ ಜಯವಾಗಲಿ . ನನ್ನ ನಂತರವೂ ಈ ಹರಿ ಒಲೆ ಹೀಗೆಯೇ ಈ ಉರಿಯುತ್ತಿರಲಿ ” ಎಂದು ಹೇಳಿದನು . ಅದಕ್ಕೆ ಅವರು , “ ನಿನ್ನ ಹರಿಒಲೆಗೆ ಸ್ವತಃ ಶಕ್ತಿ ಇಲ್ಲ . ನನ್ನ ಯೋಗಾಗ್ನಿ ಸೇರುವುದರಿಂದ ಆ ಒಲೆಯ ಮೇಲೆ ನೀನು ಮಾಡುವ ಅಡಿಗೆ ಪ್ರಸಾದ ರೂಪವಾಗಿ ಪರಿವರ್ತನೆ ಹೊಂದಿ ಭಕ್ತರ ದೈನ್ಯತೆಯನ್ನು ಹೀನ ಗುಣಗಳನ್ನೂ ಹೋಗಲಾಡಿಸುತ್ತದೆ . ಈ ಹರಿಒಲೆ ಇನ್ನು ಒಂಬತ್ತು ವರ್ಷಗಳು ಮಾತ್ರ | ಉರಿಯಬೇಕಾಗಿದೆ . ಅಂದರೆ ನನ್ನ ಮೂವತ್ತನೆಯ ವರ್ಷದಲ್ಲಿ ನಾನು ನನ್ನ ಶರೀರವನ್ನು ಗುಪ್ತವಾಗಿಸುವೆನು . ಆನಂತರ ಮೂರುವರ್ಷಗಳು ತೇಜೋಮಯ ಶ್ರದ್ಧಾಳು ಭಕ್ತರಿಗೆ ದರ್ಶನವನ್ನು ಕೊಡುತ್ತೇನೆ . ಅಲ್ಲಿಗೆ ನನ್ನ ವಯಸ್ಸು 33 ವರ್ಷಗಳಾಗುತ್ತದೆ . ಯೋಗಿಗಳ ಜೀವಿತದಲ್ಲಿ 33 ನೆಯ ವರ್ಷವು ಅನೇಕ ಮಾರ್ಪಾಟುಗಳನ್ನು ತರುವ ಸಂವತ್ಸರವು . ಬೆನ್ನು ಮೂಳೆಯಲ್ಲಿರುವ ಮೂಳೆಗಳು ಮತ್ತು ಕೀಲುಗಳು ಕೂಡ 33 , ರುದ್ರಗಣಗಳ ಸಂಖ್ಯೆ 33 ಕೋಟಿ . ಆನಂತರವೂ ನಮ್ಮ ಅಗ್ನಿ ಯಜ್ಞವು ಮುಂದುವರಿಯುತ್ತದೆ . ಕರ್ಮಗಳನ್ನು ಸ್ಕೂಲರೂಪಕ್ಕೆ ತಂದು ದಹಿಸಲು ಪ್ರತೀಕವಾಗಿ ನಾನು ಅಗ್ನಿ ಯಜ್ಞವನ್ನು ಮಾಡುತ್ತಿದ್ದೇನೆ . ಆದರೆ ಭಕ್ತರ ಕರ್ಮಗಳು ಸ್ಕೂಲ ರೂಪಕ್ಕೆ ಬರುವ ಮುನ್ನ ಸೂಕ್ಷ್ಮರೂಪದಲ್ಲಿರುತ್ತದೆ . ಅದಕ್ಕೂ ಮೊದಲು ಕಾರಣರೂಪವಾದ ಕಾರಣಶರೀರದಲ್ಲಿರುತ್ತದೆ . ಆದ್ದರಿಂದ 33 ನೆಯ ವರ್ಷ ಆದ ತರುವಾಯ ಈ ವಿಧವಾದ ಅಗ್ನಿ ಪೂಜೆಯು ನನಗೆ ಅವಶ್ಯಕತೆಯಿಲ್ಲ . ಆಗ ನನ್ನನ್ನು ಆಶ್ರಯಿಸಿದ ಭಕ್ತರ ಕಾರಣ ಶರೀರದಲ್ಲಿರುವ ಸೂಕ್ಷ್ಮಶರೀರದಲ್ಲಿರುವ , ಸ್ಥೂಲಶರೀರದಲ್ಲಿರುವ ಪಾಪಕರ್ಮಗಳನ್ನು ನನ್ನ ಯೋಗಾಗ್ನಿಯಿಂದ ದಗ್ಧ ಮಾಡುತ್ತೇನೆ . ನೀನು ಮಾತ್ರ ನಾನು 30 ನೇ ವರ್ಷ ತಲುಪುವವರೆಗೆ ನನ್ನ ಹರಿ ಒಲೆಯನ್ನು ಉರಿಸುತ್ತಲೇ ಇರು . ಆನಂತರ ನನ್ನ ಭಕ್ತರು ಬಂದು ಅವರವರ ಅಡಿಗೆಯನ್ನು ಮಾಡಿಕೊಂಡು ಹೋಗುತ್ತಾರೆ . ಅದು ಮೂರು ವರ್ಷಗಳು ನಡೆಯುತ್ತದೆ . ಆ ತರುವಾಯ ಸ್ಥೂಲರೂಪದಲ್ಲಿನ ಈ ಅಗ್ನಿ ಪೂಜೆಯ ಅವಶ್ಯಕತೆಯೇ ಇರುವುದಿಲ್ಲ , ಪೃಥ್ವಿಯಜ್ಞವನ್ನು ಪ್ರಾರಂಭಿಸಿದ್ದೇನೆ . ದಿಗ್ವಿಜಯವಾಗಿ ನಡೆಯುತ್ತಿದೆ . ಜಲಯಜ್ಞವನ್ನು ಪ್ರಾರಂಭಿಸಿದ್ದೇನೆ . ಅದು ಕೂಡ ಬ್ರಹ್ಮಾಂಡವಾಗಿ ಸಾಗುತ್ತಿದೆ . ಈಗ ಅಗ್ನಿ ಪೂಜೆಯನ್ನು ಅಗ್ನಿ ಯಜ್ಞವಾಗಿ ಪ್ರಾರಂಭಿಸಿದ್ದೇನೆ . ಇದು ಕೂಡ ಅಡೆತಡೆಗಳಿಲ್ಲದೆ ಸಾಗುವುದು . ಸಮಸ್ತ ಜೀವರಾಶಿಗಳಲ್ಲಿರುವ ಅಗ್ನಿ ಸ್ವರೂಪನು ನಾನೇ ! ಎಲ್ಲವನ್ನೂ ಪವಿತ್ರೀಕರಿಸುತ್ತಿರುವವನು ನಾನೇ ! ಎಲ್ಲವುಗಳನ್ನೂ ದಗ್ಧ ಮಾಡುತ್ತಿರುವವನು ಕೂಡ ನಾನೇ !
ಪಂಚತತ್ತ್ವಗಳಿಗೆ ಸಂಬಧಿಸಿರುವ ಯಜ್ಞಗಳ ವಿಚಾರವಾಗಿ ನಾನು ಎಂದೂ ಕೇಳಿರಲಿಲ್ಲ . ಶ್ರೀಪಾದರ ಲೀಲಾ ವಿಧಾನವನ್ನು ಕುರಿತು ಆಲೋಚಿಸುವುದು ವ್ಯರ್ಥವೆಂಬ ನಿರ್ಣಯಕ್ಕೆ ಬಂದೆನು . ಒಂದುಸಲ ನವದಂಪತಿಗಳು ಶ್ರೀಪಾದರ ದರ್ಶನಾರ್ಥವಾಗಿ ಬಂದರು . ಅವರಿಬ್ಬರನ್ನೂ ಪಂಚದೇವ ಪಹಾಡ್‌ನಲ್ಲಿ ತನ್ನ ದರ್ಬಾರಿನಲ್ಲಿ ಇರಲು ಹೇಳಿದರು . ಎರಡು ದಿನಗಳಿಗೆ ಆ ಯುವಕನು ಮರಣಿಸಿದನು . ಅವರು ಮಹಾಗುರುಗಳು ತಮ್ಮನ್ನು ರಕ್ಷಿಸುವರೆಂದು , ಎಷ್ಟೋವರಗಳನ್ನು ಕೊಡುವ ಶ್ರೇಷ್ಠ ದೈವವೆಂದೂ ನಂಬಿದ್ದರು . ಆದರೆ ಪರಮ ದುಸ್ಸಹವಾದ ವೈಧವ್ಯವು ನವವಧುವಿಗೆ ಪ್ರಾಪ್ತವಾಯಿತು . ಆ ನವದಂಪತಿಗಳ ಬಂಧುಗಳು ಪಂಚದೇವ ಪಹಾಡ್‌ಗೆ ಬಂದರು . ಶವವನ್ನು ದಹಿಸಬೇಕೇ ಬೇಡವೇ ಎನ್ನುವ ವಿಷಯದಲ್ಲಿ ಈ ಸಂದಿಗ್ಧದಲ್ಲಿ ಬಿದ್ದರು . ಶ್ರೀಪಾದವಲ್ಲಭರ ಆಜ್ಞೆಯಿಲ್ಲದೆ ಶವವನ್ನು ಪಂಚದೇವ ಪಹಾಡ್‌ನಲ್ಲಿನ ಅವರ ದರ್ಬಾರಿನಿಂದ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ , ಆ ನವವಧುವು ಶೋಕದೇವತೆಯಾಗಿ ಇದ್ದಳು . ಶ್ರೀಪಾದರು ತಮ್ಮ ದರ್ಬಾರಿಗೆ ಬಂದರು . ಅವರಿಗೆ ನವವಧುವು ತನ್ನ ದೌರ್ಭಾಗ್ಯವನ್ನು ತಿಳಿಸಿದಳು . ಶ್ರೀಪಾದರು ಕರ್ಮಫಲಿತಗಳು ಅನಿವಾರ್ಯವೆಂದರು . ಆಗ ಆ ನವವಧುವು “ ಜಡಕರ್ಮಕ್ಕೆ ನಿಜವಾಗಿ ನನ್ನ ಪತಿಗೆ ಸಾವನ್ನುಂಟುಮಾಡುವ ಶಕ್ತಿಯು ಇರುವುದಾದರೆ ಕರ್ಮಕ್ಕೆ ದೇವತಾಸ್ಥಾನವನ್ನು ಕೊಟ್ಟು ಆಲಯವನ್ನು ಕಟ್ಟಿ ಪೂಜಿಸುವುದೇ ಮೇಲು . ನೀವು ಚೈತನ್ಯ ಸ್ವರೂಪರು , ಅಗ್ನಿ ವಸ್ತ್ರಧಾರಿಗಳು , ಅಗ್ನಿ ರೂಪರು . ನಿಮಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಕೇಳಿದ್ದೆನು . ಈ ಅಭಾಗ್ಯಳಿಗೆ ಮಾಂಗಲ್ಯ ಭಿಕ್ಷೆಯನ್ನು ಕೊಟ್ಟು ಧನ್ಯಳನ್ನಾಗಿ ಮಾಡಬೇಕು ‘ ಎಂದು ಪ್ರಾರ್ಥಿಸಿದಳು . ಆ ನವ ವಧುವಿಗೆ ಶ್ರೀಪಾದರ ದಯೆಯ ಮೇಲೆಯೂ , ಕಾರುಣ್ಯದ ಮೇಲೆಯೂ ನಂಬಿಕೆ .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 272

ಕೆಲವರೆನ್ನುತ್ತಾರೆ – ವೇದಾಂತ ಕಬ್ಬಿಣ ಕಡಲೆ .
ಗರುಕೆ ಬಿಡಿಸಿದ ಹಾಗೆ ಸುಲಭವೆನುವರು ಕೆಲರು.
ಅದರ ಗೋಜಿಗೆ ಹೋಗದಿರುವುದೇ ಲೇಸು .
ಎನ್ನುವರು ಮಿಕ್ಕ ಕೆಲ ಅಜ್ಞ ಜನರು .
ಸೂಜ್ಞ ನೀನಿದ ಬಲ್ಲೆ
– ಸಚ್ಚಿದಾನಂದ ಶ್ರೀ ಸ್ವಾಮಿಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share