MP ಕವನ ಸಂಗ್ರಹ : ಮಹಿಳಾ ದಿನಾಚರಣೆ ವಿಶೇಷ – ಶ್ರೀಮತಿ. ಆಶಾಲತ

357
Share

ಅಂತರ ರಾಷ್ಟ್ರೀಯ ಮಹಿಳಾ ದಿನಕ್ಕಾಗಿ

ಸ್ತ್ರೀ

ಸೃಷ್ಟಿಯ ಮೂಲ ಹೆಣ್ಣು
ಪ್ರಕೃತಿಯ ವಿಶೇಷ ಸೃಷ್ಟಿಯೇ ಹೆಣ್ಣು
ಮನುಕುಲವನ್ನು ಹೊತ್ತ ಭೂತಾಯಿಯ ಪ್ರತಿರೂಪ ಹೆಣ್ಣು
ಮನೋಬಲದ ಸಾಕಾರಮೂರ್ತಿಯೆ ಹೆಣ್ಣು
ಜೀವನದ ಪ್ರತಿ ಘಟ್ಟವನ್ನು ಸಮರ್ಥವಾಗಿ ನಿಭಾಯಿಸುವವಳು
ಹೆಣ್ಣು/||೧||

ಬದುಕಿನ ಗೋಜಲು, ಗೋಜಲುಗಳನ್ನು ಮಜಲು,ಮಜಲುಗಳಾಗಿ ಬಿಡಿಸುವವಳು ಹೆಣ್ಣು
ಸಮಾನ ಆಸಕ್ತಿ, ಸಮಾನ ಪ್ರೀತಿ, ಸಮಾನ ದಕ್ಷತೆ ನಿನ್ನಯ ವಿಶಿಷ್ಟ ಗುಣಗಳು
ಬಹಿರಂಗದಿ ನೀ ಸುಕೋಮಲ, ಮೃದು ಮಧುರೆ, ಆಂತರ್ಯದಿ ದಿಟ್ಟ, ದೃಢ ಸಂಕಲ್ಪ ಶಕ್ತಿಯುಳ್ಳ
ವಳು, ಜಗತ್ ಜನನಿಯಾಗಿ ಪ್ರತಿ
ಮಗುವಿನ ಏಳಿಗೆಗೆ ಕಾರಣೀಭೂತಳು ನೀನು||೨||

ತಾಯಿಯಾಗಿ, ಮಡದಿಯಾಗೀ ನಿನ್ನಯ ಕಾರ್ಯವ್ಯಾಪ್ತಿ ವಿಶಾಲ ವಿಸ್ತಾರ, ನಿನ್ನಸೇವಾ ಕೈಂಕರ್ಯ ಮಹತ್ತರ
ಜಗನ್ಮಾತೇಯ ಪ್ರತಿಬಿಂಬ,ಶಕ್ತಿ ಸ್ವರೂಪಿಣಿ ನೀನು
ಮಮತಾಮಯಿ, ಪ್ರೇಮಮಯಿ, ಕರುಣಮಯಿ, ತ್ಯಾಗಮಯಿ, ವೀರ ವನಿತೆ , ದಕ್ಷ ರಾಜಕಾರಿಣಿ , ಆಡಳಿತಾಧಿಕಾರಿ ನೀನು||೩||

ತಾಳ್ಮೆ, ಸರಳತೆ, ಸಜ್ಜ ನಿಕೆಯ ಮೇರುಪರ್ವತ ನೀನು
‘ಕ್ಷಮಯಾ ಧರಿತ್ರಿ’ ಯೆಂದು ಹೊಗಳುವರು ನಿನ್ನನು ಆತ್ಮೀಯತೇ , ಅಂತಃ ಕರಣದ ಶಾಂತ ಮೂರ್ತಿ ನೀನು,
ಪ್ರೀತಿ ವಿಶ್ವಾಸದ, ಬದುಕಿನ ಭರವಸೆಯ ಅಕ್ಷಯ ಪಾತ್ರೆ ನೀನು
ಜೀ ವನದ ಆದಿಯು ನೀನು, ಅಂತ್ಯವೂ ನೀನು||೪||

ಆದರೆ ಪ್ರತಿದಿನ,ಪ್ರತಿಕ್ಷಣ ನಿರಂತರವಾಗಿ ನಡೆದಿದೆ ನಿನ್ನಯ ಶೋಷಣೆ, ಮೊಳಕೆಯಲ್ಲೇ ಚಿವುಟಿ
ಹಾಕು ತ್ತಿರುವರು ನಿನ್ನನ್ನು
ಸಾಮಾಜಿಕ ಸಮಾನತೆಯ ಸಂದೇಶ
ಸಾರುವವರಿಂದಲೆ ನಿನ್ನಯ ತುಳಿತ
ನಿನಗೆ ನೀನೇ ವೈರಿಯಾಗಿರುವೆ
ನಿನ್ನಯ ರಕ್ಷಣೆ ನಿನ್ನಿಂದಲೇ||೫||

ಮುಕ್ತಳಾಗು ಮೌಡ್ಯ ಸಂಕೋಲೆಗಳಿಂದ ,
ಮುಕ್ತಳಾಗು ಸಂಕುಚಿತ ಮನೋಭಾವ ಗಳಿಂದ
ಮೆಟ್ಟಿ ನಿಲ್ಲು ದೌರ್ಜ್ಯ ನ್ಯ, ಶೋಷಣೆ ಗಳ
ಧಿಕ್ಕಾರವಿರಲಿ ಮೌಡ್ಯ ಕಂದಾಚಾರಗಳಿಗೆ
ಧಿಕ್ಕಾರವಿರಲಿ ಸ್ತ್ರೀ ಶೋಷಣೆ ಮಾಡುತ್ತಿರುವ ಸಮಾ ಜಕ್ಕೆ||೬||

ಎಂ.ಎಸ್.ಆಶಾಲತಾ, ಎಂ. ಡಿ. ಸಿ. ಸಿ. ಬ್ಯಾಂಕ್ ಲಿ, ಶಾಖಾ ವ್ಯವಸ್ಥಾಪಕರು, ಕೆ. ಹೊನ್ನಲಗೆರೆ ಶಾಖೆ


Share