MP ಸಂಪಾದಕೀಯ : ರಾಹುಲ್ ಗಾಂಧಿ ಯಾರು ?

198
Share

ರಾಹುಲ್ ಗಾಂಧಿ ಯಾರು ?

ಇತ್ತೀಚಿನ ಕಾಂಗ್ರೆಸ್ಸಿನ ಬೆಳವಣಿಗೆ ನೋಡಿದರೆ ರಾಹುಲ್ ಗಾಂಧಿ ಯಾರು ಎನ್ನುವ ಸಂದೇಹ ಬಹುತೇಕ ಎಲ್ಲರಿಗೂ ಮೂಡುತ್ತಿದೆ ಎನಿಸುತ್ತದೆ. ಇದಕ್ಕೆ ಉದಾಹರಣೆ ನಿನ್ನೆಯ ದಿನ ಪಕ್ಷದ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಪಕ್ಷವನ್ನು ತೊರೆದಿರುವುದು. ಪಕ್ಷದ ಹಿರಿಯ ಮುಖಂಡರಾಗಲಿ, ರಾಹುಲ್ ಗಾಂಧಿಯವರ ಸಮವಯಸ್ಕರೆ ಆಗಲಿ, ವಿರೋಧಪಕ್ಷದವರೆ ಆಗಲಿ, ಮಾಧ್ಯಮದವೇ ಆಗಲಿ, ಸಾಮಾನ್ಯ ಮನುಷ್ಯರು ಯಾರಿಗೂ ರಾಹುಲ್ ಗಾಂಧಿಯವರ ಮೇಲೆ ವಿಶ್ವಾಸವಿಲ್ಲ. ಇದಕ್ಕೆ ಕಾರಣ ಅವರ ಉದ್ಧಟತನದ ನಡವಳಿಕೆಯೇ ಅಥವಾ ಅಪ್ರಬುದ್ಧತೆಯೆ ತಿಳಿಯುತ್ತಿಲ್ಲ. ರಕ್ತಗತವಾಗಿ, ಪಾರಂಪರಿಕವಾಗಿ ಅವರು ಹುಟ್ಟಿ ಬೆಳೆದಿರುವ ಪರಿಸರ ಎಂಥದ್ದು ಎಂದು ನೋಡಿದರೆ ಅವರ ನಡವಳಿಕೆಯಿಂದ ಆಶ್ಚರ್ಯವಾಗುತ್ತದೆ.
ಮುತ್ತಾತ ಭಾರತದ ಪ್ರಧಾನಿ, ಅಜ್ಜಿ ಭಾರತದ ಪ್ರಧಾನಿ, ತಂದೆ ಭಾರತದ ಪ್ರಧಾನಿ.
ಹುಟ್ಟಿದಾಗಿನಿಂದ ಪ್ರಧಾನಮಂತ್ರಿಗಳನ್ನು ನೋಡಿಕೊಂಡೆ ಬೆಳೆದವರು. ಹಾಗಿದ್ದ ಮೇಲೆ ಇವರ ಈ ರೀತಿ ನಡವಳಿಕೆಗೆ ಕಾರಣವೇನು?
ಎಲ್ಲರನ್ನೂ ತಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಬಯಸುವ ಇವರಿಗೆ ನಾಯಕತ್ವ ನೀಡಿದಲ್ಲಿ ದೇಶ ಮುನ್ನಡೆಸುವ ಛಾತಿ ಇವರಲ್ಲಿದೆಯೆ ? ನಿಜವಾಗಿಯೂ ಇವರ ಉದ್ದೇಶ ಏನು ? ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ ಎನ್ನುವುದು ಬಹುಶಃ ಒಂದು ಯಕ್ಷಪ್ರಶ್ನೆಯಾಗಿದೆ.
ತಮ್ಮ ಪಕ್ಷದವರಿಂದ, ವಿರೋಧ ಪಕ್ಷದವರಿಂದ, ಸಾಮಾನ್ಯ ಜನರಿಂದ ಎಲ್ಲರಿಂದಲೂ ವಿರೋಧ ಎದುರಿಸುತ್ತಿರುವ ಇವರು ರಾಜಕೀಯದಲ್ಲಿ ಮುಂದುವರೆಯಲು ಯಾವ ರೀತಿ ಅರ್ಹರು ಎಂಬುವುದು ಒಮ್ಮೆಯಾದರೂ ರಾಹುಲ್ ಗಾಂಧಿ ಯವರು ಯೋಚಿಸಲೇಬೇಕಾದ ವಿಷಯ. ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಇಲ್ಲ ತಮ್ಮ ರಾಜಕೀಯ ಬದುಕಿಗೆ ಅಂತಿಮ ತೆರೆ ಎಳೆಯಬೇಕು.
ಅವರು ಈ ನಿರ್ಧಾರ ಮಾಡದಿದ್ದಲ್ಲಿ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳ ಬೇಕೆಂದರೆ ಒಂದು ಧೃಡ ನಿರ್ಧಾರ ಮಾಡಬೇಕು. ಅದೂ ಆಗದಿದ್ದರೆ ಸಾರ್ವಜನಿಕರಾದರೂ 70 ವರ್ಷದ ಇತಿಹಾಸ ಇರುವ ಕಾಂಗ್ರೆಸ್‌ ಪಕ್ಷ ಎನ್ನುವ ಮೃದು ಭಾವನೆಯನ್ನು ತೊರೆದು ಪಕ್ಷವನ್ನು ಬೇರು ಸಮೇತ ಕಿತ್ತುಹಾಕುವ ಖಡಾಖಂಡಿತ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.


Share