ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 45

203
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 45
ಓಂ ನಮೋ ಹನುಮತೇ ನಮಃ

373) ದೇವೇಂದ್ರನು ಸಮುದ್ರನನ್ನೂ ಮೈನಾಕನನ್ನೂ ಅಭಿನಂದಿಸಿದ. “ನೀನು ಅಲ್ಲೇ ಕೂತಿರುವವರೆಗೂ ನಿನ್ನ ರೆಕ್ಕೆಗಳನ್ನು ಕತ್ತರಿಸುವುದಿಲ್ಲ” ಎಂದು ಅಭಯಕೊಟ್ಟ.
ಮೈನಾಕನಿಗೆ ಸಮುದ್ರನಿಂದ ಪ್ರೇರಣೆ
374) ಸಮುದ್ರನು ಮೈನಾಕನ ಹ್ತತಿರ ಹೋಗಿ ಹೀಗೆ ಹೇಳಿದ :
1. ಮೈನಾಕ! ನೀನು ದೀರ್ಘಕಾಲದಿಂದ ಕದಲದೇ ಕೂತೂ ಕೂತು ಬೇಸತ್ತು ಹೋಗಿದ್ದೀಯ. ಸ್ವಲ್ಪ ಹೊತ್ತು ನಿನ್ನ ರೆಕ್ಕೆಗಳನ್ನು ಹಾಯಾಗಿ ಚಾಚಿಕೊಳ್ಳಲು ಈಗ ಒಂದು ಒಳ್ಳೆ ಅವಕಾಶ ಬಂದಿದೆ.
2. ರಾಮ ಕಾರ್ಯಾರ್ಥ ಹನುಮಂತನೆಂಬ ವಾನರ ಅದ್ಭುತ ಸಾಹಸ ಮಾಡುತ್ತಿದ್ದಾನೆ. ನೂರು ಯೋಜನದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರುವ ಪ್ರಯತ್ನದಲ್ಲಿದ್ದಾನೆ.
3. ಎಷ್ಟೇ ಯೋಗಬಲವಿದ್ದರೂ ಮಧ್ಯದಲ್ಲಿ ಸ್ವಲ್ಪ ಉಸಿರು ಜಾರಿದರೆ ಸಮುದ್ರದ ಪಾಲಾಗಿಬಿಡುತ್ತಾನೆ.
4. ಆದ್ದರಿಂದ ಈಗ ನೀನು ಒಂದುಸಾರಿ ಮೇಲಕ್ಕೆ ಎಗರಿ, ಅವನು ಹೋಗುವ ದಾರಿಯಲ್ಲೇ ಕೆಳಗೆ ಇಳಿಯದಂತೆ ಸ್ವಲ್ಪಹೊತ್ತು ಸುಧಾರಿಸಿಕೊಳ್ಳುವ ಅವಕಾಶ ಮಾಡಿಕೊಡು.
5. ಅವನು ಒಂದು ಕ್ಷಣ ಸುಧಾರಿಸಿಕೊಂಡು, ಯೋಗಬಲದಿಂದ ಮುಂದಕ್ಕೆ ಹೋಗುತ್ತಾನೆ.
6. ಇದರಿಂದ ರಾಮಸೇವೆ ಮಾಡಿದಂತಾಗುತ್ತದೆ. ಆದ್ದರಿಂದ ದೇವೇಂದ್ರನೂ ಅದಕ್ಕೆ ಅಡ್ಡಬರುವುದಿಲ್ಲ.
7. ಹನುಮಂತನು ಹೋದಕೂಡಲೇ ಪುನಃ ನೀರೊಳಗೆ ಬಂದುಬಿಡುವೆಯಂತೆ.
8. ಬಹುಕಾಲದಿಂದಲೂ ನಿನ್ನಿಂದ ಉಪಕಾರವಾಗುತ್ತಿರುವುದರಿಂದಲೂ, ಇಂದು ರಾಮಸೇವಕನಿಗೆ ಸಹಾಯ ಮಾಡುತ್ತಿರುವುದರಿಂದಲೂ ದೇವೇಂದ್ರನು ನಿನ್ನನ್ನು ಮೆಚ್ಚಿಕೊಳ್ಳುವನೇ ವಿನಹ ದಂಡಿಸುವುದಿಲ್ಲ.
9. ಆದ್ದರಿಂದ, ಮೈನಾಕಾ! ನೀನು ನಿನ್ನ ರೂಪವನ್ನು ಹೆಚ್ಚಿಸಿಕೋ, ಆಕಾಶಕ್ಕೆ ಎಗರು.
375) ಸಮುದ್ರನು ಹೀಗೆ ಪ್ರೋತ್ಸಾಹಿಸಿದ್ದರಿಂದ ಮೈನಾಕನಿಗೂ ಮನಸ್ಸಿನಲ್ಲಿ ಆಸೆ ಹುಟ್ಟಿತು. ಆಕಾಶ ಹನುಮಂತನ ಮಾರ್ಗಕ್ಕೆ ಅಡ್ಡವಾಗಿ ಬೆಳೆದು ನಿಂತ. ತನ್ನನ್ನು ನೋಡುತ್ತಲೇ ಹನುಮಂತ “ಉಸ್ಸಪ್ಪಾ!” ಅನ್ನುತ್ತಾ ತನ್ನ ಮೇಲೆ ಬಂದಿಳಿಯುತ್ತಾನೆ ಎಂದು ಮೈನಾಕ ಆಸೆಪಟ್ಟಿದ್ದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share