ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 81

215
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 81
ಓಂ ನಮೋ ಹನುಮತೇ ನಮಃ

560) ಇನ್ನು ತಾನು ಬಂದ ಮುಖ್ಯಕಾರ್ಯ ಪೂರ್ತಿ ಆಯಿತು ಎಂದು ಸಂತೋಷಗೊಂಡ. ತಕ್ಷಣವೇ ಇನ್ನೊಂದು ಯೋಚನೆ ಬಂತು. ಹೇಗೂ ಇಲ್ಲಿಯವರೆಗೆ ಬಂದಿದ್ದೇನೆ. ಲಂಕೆಯ ಸೇನಾಬಲ ಎಂತಹುದೋ ತಿಳಿದುಕೊಳ್ಳುವುದು ಒಳ್ಳೆಯದು ಎಂದುಕೊಂಡ.
ಕೂಡಲೇ ಅಶೋಕವನವನ್ನು ಧ್ವಂಸಮಾಡತೊಡಗಿದ.
561) ಈ ವಿಷಯ ಕೂಡಲೇ ರಾವಣನಿಗೆ ಮುಟ್ಟಿತು. ಅವನು ಕೆಲವು ರಾಕ್ಷಸ ವೀರರನ್ನು ಕಳಿಸಿದ.
562) ಹನುಮಂತನು ಅವರೆಲ್ಲರನ್ನೂ ಸಂಹರಿಸಿದ್ದೇ ಅಲ್ಲದೇ
ಶ್ಲೋಕ೤೤
ದಾಸೋಖಹಂ ಕೋಸಲೇಂದ್ರಸ್ಯ
ರಾಮಸ್ಯಾ ಕ್ಲಿಷ್ಟ ಕರ್ಮಣಃ೤
ಹನುಮಾನ್ ಶತ್ರು ಸೈನ್ಯಾನಾಂ ನಿಹಂತಾ
ಮಾರುತಾತ್ಮಜಃ೤೤
ಅರ್ದಯಿತ್ವಾ ಪುರೀಂ ಲಂಕಾ
ಮಭಿವಾದ್ಯಚ ಮೈಥಿಲೀಂ೤
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ
ಸರ್ವ ರಕ್ಷಸಾಮ್‌೤೤
(ನಾನು ರಾಮದಾಸನಾದ ಹನುಮಂತ. ನೀವೆಲ್ಲರೂ ನೋಡುತ್ತಿರುವಂತೆಯೇ
ಈ ಲಂಕೆಯನ್ನು ಮರ್ದನಮಾಡಿ, ಸೀತಾದೇವಿಗೆ ನಮಸ್ಕರಿಸಿ ಹೋಗುತ್ತೇನೆ) ಎಂದು ಗಟ್ಟಿಯಾಗಿ ಕಿರುಚಿದ.
563) ಇದನ್ನು ಕೇಳಿದ ರಾವಣನು ಪ್ರಹಸ್ತನ ಮಗನಾದ ಜಂಬುಮಾಲಿಯನ್ನು ಹನುಮಂತನ ಮೇಲೆ ಯುದ್ಧಕ್ಕೆ ಕಳುಹಿಸಿದ.
564) ಹನುಮಂತನು ಹತ್ತಿರದಲ್ಲಿದ ರಾಕ್ಷಸ ದೇವಾಲಯವೊಂದನ್ನು ಉರುಳಿಸಿದ. ಆ ದೇವಸ್ಥಾನದ ಕಂಭವೊಂದನ್ನು ಹಿಡಿದು ತನ್ನ ಮೇಲೆ ಏರಿ ಬಂದ ರಾಕ್ಷಸರನ್ನು ಚೆನ್ನಾಗಿ ದಳಿಸಿದ.
565) ನಂತರ ರಾವಣ ಕಳಿಸಿದ್ದ ಏಳುಮಂದಿ ಮಂತ್ರಿಕುಮಾರರು ಹನುಮಂತನ ಕೈಯಲ್ಲಿ ಮರಣಿಸಿದರು.
566) ಐದು ಜನ ಸೇನಾಪತಿಗಳೂ ಹನುಮಂತನ ಕೈಲಿ ಸಾವನ್ನಪ್ಪಿದರು.
567) ನಂತರ ರಾವಣನು ತನ್ನ ಮಗನಾದ ಅಕ್ಷನನ್ನು ಸೈನ್ಯ ಸಮೇತ ಕಳಿಸಿದ. ಹನುಮಂತನು ಅನಾಯಾಸವಾಗಿ ಎಲ್ಲರನ್ನೂ ಮುಗಿಸಿಬಿಟ್ಟ.
568) ರಾವಣಾಸುರ ತುಂಬಾ ದುಃಖಿಸಿ, ತನಗೆ ಸರಿಸಮನಾದ ಇನ್ನೊಬ್ಬ ಮಗನಾದ ಇಂದ್ರಜಿತ್ತನ್ನು ಯುದ್ಧಕ್ಕೆ ಕಳಿಸಿದ.
569) ಯುದ್ಧದಲ್ಲಿ ಇಂದ್ರಜಿತ್ತು ಅನೇಕ ಅಸ್ತ್ರಗಳನ್ನು ಪ್ರಯೋಗಿಸಿ, ಯಾವುದೂ ಪ್ರಯೋಜನವಾಗದಿದ್ದಾಗ ಕೊನೆಗೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ. ಹನುಮಂತನಿಗೆ ಬ್ರಹ್ಮಾಸ್ತ್ರವೂ ಏನೂ ಮಾಡಲಾರದು ಎಂಬ ವರವಿದ್ದರೂ ಬ್ರಹ್ಮನ ಮೇಲಿನ ಗೌರವದಿಂದ ಆ
ಅಸ್ತ್ರಕ್ಕೆ ಮಣಿದು ಬದ್ಧನಾಗಿ ಬಿದ್ದುಕೊಂಡನು.
570) ಅವನು ಬೀಳುತ್ತಲೇ ಅನೇಕ ಮಂದಿ ರಾಕ್ಷಸರು ಮೇಲೆ ಬಿದ್ದು ಹನುಮಂತನನ್ನು ಹಗ್ಗಗಳಿಂದ ಕಟ್ಟಿಹಾಕಿದರು.
571) ಅದನ್ನು ನೋಡಿ ಇಂದ್ರಜಿತ್ತು ಹೀಗೆ ಅಂದುಕೊಂಡ –
1. ಅಯ್ಯಯ್ಯೋ! ಬ್ರಹ್ಮಾಸ್ತ್ರ ಹಾಕಿದಮೇಲೆ, ಇನ್ನೊಂದು ಬಂಧನವನ್ನು ಕಟ್ಟಿದರೆ, ಆ ಅಸ್ತ್ರ ಕೆಲಸ ಮಾಡುವುದಿಲ್ಲ.
2. ಈ ಮೂರ್ಖರು ಗೊತ್ತಿಲ್ಲದೇ ಹಗ್ಗದಿಂದ ಕಟ್ಟಿದ್ದಾರೆ.
3. ಬ್ರಹ್ಮಾಸ್ತ್ರ ಹೂಡಿದ ಮೇಲೆ ಇನ್ಯಾವ ಅಸ್ತ್ರವೂ ಕೆಲಸ ಮಾಡುವುದಿಲ್ಲ.
4. ಬ್ರಹ್ಮಾಸ್ತ್ರ ಎರಡನೇ ಬಾರಿ ಕೆಲಸ ಮಾಡುವುದಿಲ್ಲ. ಈಗೇನು ಮಾಡುವುದು?
572) ಹೀಗೆ ಯೋಚಿಸುತ್ತಾ ಇಂದ್ರಜಿತ್ತು ಹನುಮಂತನನ್ನು ರಾವಣ ಸಭೆಗೆ ಎಳೆದುಕೊಂಡು ಹೋದ.
573) ಹನುಮಂತನೂ ಬೇಕೆಂತಲೇ ಮಣಿದು ಇರಬೇಕೆಂದು ನಿರ್ಧರಿಸಿದ್ದ.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :

* ಸಂಗ್ರಹ
ಭಾಲರಾ
ಬೆಂಗಳೂರು

Share