ಎಂಪಿ, ಅಡಿಗೆಮನೆ : ಧಮ್ ವಾಂಗಿಭಾತ್

832
Share

???ಧಮ್ ವಾಂಗಿಭಾತ್ ???
ಸಾಮಾನ್ಯವಾಗಿ ಪಲ್ಯ ಮಾಡಿ ಬಿಳಿ ಅನ್ನವನ್ನು ಅರಿಸಿ ಮಿಕ್ಸ್ ಮಾಡಿ ವಾಂಗಿಭಾತ್ ಮಾಡುತ್ತೇವೆ. ಧಮ್ ಅಂದರೆ ಉಸಿರು/ಹಬೆ ಕಟ್ಟಿ ಭಾತ್ ಮಾಡಿದರೆ ಋಚಿ ಅಧಿಕವಾಗುತ್ತೆ.

ಮಾಡುವ ವಿಧಾನ : 250 gm ಅಕ್ಕಿ ತೊಲೆದು ನೆನೆಯಲು ಇಡಿ… 500 gm ಬಿಳಿ/ ಕಂದು /ದುಂಡು ಬದನೆಕಾಯಿಯನ್ನು ಸ್ವಲ್ಪ ದಪ್ಪನಾಗಿ ಹೆಚ್ಚಿ ನೀರಿನಲ್ಲಿ ಮುಳುಗಿಸಿಡಿ..50gm ಬ್ಯಾಡಗಿ,2 ಗುಂಟೂರು ಮೆ ಕಸಯಿ,
1 ಟಿ ಚಮಚ ಜಿರಿಗೆ,1/2 ಟಿ ಚಮಚ ಸಾಸವೆ, ಒಂದೊಂದು ಟಿ ಚಮಚ ಉದ್ದಿನ ಬೇಳೆ , ಕಡಲೆ ಬೇಳೆ , 4 ಕರಿ ಮೆಣಸು , ಒಂದೊಂದು ಚೂರು ಜಾಯಿಕಾಯಿ, ಪತ್ರೆ, 1 ಟಿ ಚಮಚ ಗಸಗಸೆ ಎಲ್ಲವನ್ನೂ ಹುರಿಡು ಪುಡಿ ಮಾಡಿ….ಒಂದು ನಿಂಬೆ ಗಾತ್ರದ ಹುಣಿಸೆ ಹಣ್ಣಿನ ರಸ ತೆಗೆಯಿರಿ …1/2 ಬಟ್ಟಲು ಒಣ ಕೊಬ್ಬರಿ ತುರಿಯಿರಿ …1:2 ನೀರು ಹಾಕಿ ಕುಕ್ಕರಿನಲ್ಲಿ ಅನ್ನ ಮಾಡಲು ಇಡಿ …. ಮಸಾಲೆಪುಡಿ, ಸಲ್ಪ ಎಣ್ಣೆ,ಹುರಿದ ಗೋಡಂಬಿ , ಋಚಿಗೆ ಉಪ್ಪು ,ಅರಿಶಿಣ ಪುಡಿ, ಕೊಬರಿ ತುರಿ ಎಲ್ಲವನ್ನೂ ಕುಕ್ಕರ್ಗೆ ಹಾಕಿ ಮಿಕ್ಸ್ ಮಾಡಿ …ಕೊನೆಯಲ್ಲಿ ಬಡನೇಕಾಯಿ ಹೋಳು ಹಾಕಿ , ಕುಕ್ಕರ್ ಮುಚ್ಚಳ ಮುಚ್ಚಿ …2 ಸೀಟಿ ನಂತರ ಒಲೆ ಅರಿಸಿ….ಪ್ರೆಶರ್ ಕಮ್ಮಿಯಾದಮೇಲೆ, ವಿಷಲ್ ತೆಗೆದು ಒಂ ದು ದಪ್ಪ ಲೋಟ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ …ಕುಕ್ಕರ ಇಳಿಸಿ ಮುಚ್ಚಳ ತೆಗೆಯಿರಿ , ಬೆಂದಿರುವ ಭಾತನ್ನು ಮಿಕ್ಸ್ ಮಾಡಿ….ಹಬೆಯ ಒತ್ತಡದಲ್ಲಿ ಮಾಡಿದ ಧಮ್ ವಾಂಗಿಬಾತ್ ರೆಡಿ ..ಒಲ್ಲೆ ಋಚಿ…ಸುವಾಸನೆಯೊಂದಿಗೆ ಒಳ್ಳೆ ಋಚಿಯಾದ ವಾಂಗಿಭಾತ್ ರುಚಿಯನ್ನ ಸವಿಯಿರಿ..ಅನುಭವ ತಿಳಿಸಿ
…ವಿ ಸೂ : ಬೇಯಿಸಿದ ಬಟಾಣಿ,ಅವರೆಕಾಳು , ಬೀನ್ಸ್ ಕಾಳು ಹಾಕಬಹುದು !

ಶ್ರೀ ಪ್ರಭಾಕರ ನಿವೃತ್ತ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಮೈಸೂರು .


Share