ನಾಳೆ (10-ರ0ದು)ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ

28
Share

 

ಮೈಸೂರು,ನಾಳೆ 10/07/2023 ಸೋಮವಾರ ನಾಡದೇವತೆ ತಾಯಿ *ಚಾಮುಂಡೇಶ್ವರಿ ವರ್ಧಂತಿ ( ಹುಟ್ಟಹಬ್ಬ )* ಹಿನ್ನೆಲೆ. ಚಾಮುಂಡಿಬೆಟ್ಟಕ್ಕೆ‌ ಖಾಸಗಿ‌ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ‌ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. *ಪೂಜಾ ವಿಧಿ ವಿಧಾನಗಳ ಹಿನ್ನೆಲೆ ಬೆಳಗ್ಗೆ‌ 9 ಗಂಟೆ ನಂತರ ಬಸ್ ವ್ಯವಸ್ಥೆ ಇರಲಿದೆ.*

ಸಾರ್ವಜನಿಕರ ಗಮನಕ್ಕೆ:
ನಾಳೆ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ವರ್ದಂತಿ ಇರುವುದರಿಂದ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜಾ ವಿಧಿ ವಿಧಾನಗಳು ನೆರವೇರುವುದರಿಂದ ದೇವಸ್ಥಾನಕ್ಕೆ ಬೆಳಿಗ್ಗೆ 09:00ಘಂಟೆಯ ನಂತರ ಭಕ್ತಾದಿಗಳಿಗೆ ಪ್ರವೇಶ ಇರುವುದಾಗಿ ದೇವಸ್ಥಾನದ ನಿರ್ವಹಣಾ ಅಧಿಕಾರಿಯವರು ತಿಳಿಸಿರುತ್ತಾರೆ. ಆದ್ದರಿಂದ ದೇವರ ದರ್ಶನಕ್ಕೆ ತೆರಳುವ ಭಕ್ತಾಧಿಗಳಿಗೆ ಬೆಳಿಗ್ಗೆ 9:00 ಘಂಟೆಯ ನಂತರ ಹೆಲಿಪ್ಯಾಡ್ ಹಾಗೂ ನಗರ ಬಸ್ ನಿಲ್ದಾಣದಿಂದ ಬಸ್ಸುಗಳ ಆಚರಣೆ ಮಾಡಲಾಗುವುದು. ಪ್ರಯಾಣಿಕರು ಸಹಕರಿಸಬೇಕಾಗಿ ವಿಭಾಗಿಯ ನಿಯಂತ್ರಣ ಅಧಿಕಾರಿ ಪತ್ರಿಕಾ ಪ್ರಭಟನೆಯಲ್ಲಿ ಕೋರಿದ್ದಾರೆ .

ವಿಭಾಗೀಯ ನಿಯಂತ್ರಣಾಧಿಕಾರಿ,
ಮೈಸೂರು ವಿಭಾಗ
ಮೈಸೂರು.


Share