ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ಶ್ರೀಪಾದವಲ್ಲಭ ಚರಿತ್ರೆ ಪುಟ-118

500
Share


ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತಾ
ಅಧ್ಯಾಯ 14
ವಿಶೇಷ ಸೂಚನೆ : ಭಜನೆ ಆಲಿಸಿ ಚರಿತ್ರೆ ರಚನೆ ಮಾಡಿ.
ಪುಟ – 118
ಅಲ್ಲಿ ಸೇರಿದ್ದವರೆಲ್ಲರೂ ಹೆಂಡವನ್ನು ವೃಕ್ಷದಿಂದ ತೆಗೆದು ಮಾರಿ ಜೀವಿಸುವ ಗೌಡ ಕುಲಸ್ಥರು . ಆದ್ದರಿಂದ ಅವರು ತಮ್ಮ ಕುಲಸ್ಥನಾದ ಅವನು ಹೇಳಿದ ಮಾತನ್ನೇ ನಂಬಿದರು . ನನಗೆ ಬಲವಂತವಾಗಿ ಹೆಂಡ ಕುಡಿಸಿದರು . ಆಮೇಲೆ ಅವರೆಲ್ಲರೂ ತಮ್ಮ ತಮ್ಮ ದಾರಿ ಹಿಡಿದು ಹೊರಟು ಹೋದರು . ನನಗೆ ಹೆಂಡ ಕುಡಿಸಿದ ಆ ವಿಚಿತ್ರ ವ್ಯಕ್ತಿಯೂ ಕೂಡ ಎಲ್ಲೋ ಹೋದನು . ನಾನು ನನ್ನ ಮನಸ್ಸಿನಲ್ಲಿ, ” ಉತ್ತಮವಾದ ಬ್ರಾಹ್ಮಣ ಜನ್ಮವನ್ನು ಎತ್ತಿ ಅವತಾರ ಶ್ರೇಷ್ಠರಾದ ಶ್ರೀಪಾದರ ಸಂದರ್ಶನಕ್ಕೆ ಹೋಗುವಾಗ ನೀಚವಾದ ಹೆಂಡವನ್ನೂ ಕುಡಿದೆನು. ನನ್ನ ಬ್ರಾಹ್ಮಣತ್ವವು ಮಣ್ಣು ಪಾಲಾಯಿತು . ಪರಮ ಪವಿತ್ರರಾದ ಶ್ರೀಪಾದರ ಮುಖವನ್ನು ನಾನು ಹೇಗೆ ನೋಡಬಲ್ಲೆನು . ನನ್ನದು ಎಂಥ ಕ್ರೂರ ಕರ್ಮ ? ವಿಧಿಯು ಬಹಳ ಬಲಿಷ್ಠವಾದದ್ದು ನನ್ನ ಹಣೆಯ ಬರಹವೇ ಹೀಗಿರುವಾಗ ಇನ್ನೇನು ತಾನೆ ಮಾಡಲು ಸಾಧ್ಯ ಎಂದು ಗೋಳಾಡುತ್ತಿದ್ದೆನು.
ನಾನು ತೂರಾಡುತ್ತ ನಡೆದೆನು. ನನ್ನ ಮುಖದಿಂದ ಹೆಂಡದ ವಾಸನೆ ಬರುತ್ತಿತ್ತು. ನನಗೆ ಸ್ವಲ್ಪ ಮತ್ತು ಏರಿತು. ನನ್ನ ದುರದೃಷ್ಟವನ್ನು ಬೈದುಕೊಳ್ಳುತ್ತಾ ಶ್ರೀಪಾದರ ನಾಮಸ್ಮರಣೆ ಮಾಡುತ್ತ ನಡೆದನು. ಮಾರ್ಗದಲ್ಲಿ 1 ಪರ್ಣಶಾಲೆ ಕಾಣಿಸಿತು. ಅದು ತಪೋಭೂಮಿಯ ಹಾಗೆ ಕಾಣಿಸುತ್ತಿತ್ತು . ಅಲ್ಲಿ ಯಾರೋ ಮಹಾತ್ಮರು ಇದ್ದಾರೆ ಎಂದೆನಿಸಿತು. ಮಹಾತ್ಮರ ದರ್ಶನಕ್ಕೆ ನಾನು ಯೋಗ್ಯ ಸ್ಥಿತಿಯಲ್ಲಿ ಇಲ್ಲವೆಂದು ಭಾವಿಸಿದೆನು. ಆ ಪವಿತ್ರ ತಪೋಭೂಮಿಯಲ್ಲಿ ಹೆಜ್ಜೆ ಇಡಲು ನನಗೆ ಮನಸ್ಸಾಗಲಿಲ್ಲ . ಅದೂ ಅಲ್ಲದೆ ಹೆಂಡ ಕುಡಿದಿರುವ ಈ ನನ್ನ ಸ್ಥಿತಿಯಲ್ಲಿ ಪವಿತ್ರ ಆಶ್ರಮ ಪ್ರವೇಶ ಕೂಡ ಬಹಳ ನಿಂದ್ಯವೆಂದು ತಿಳಿದೆನು.
ನಾನು ಮುಂದೆ ಹೋಗುತ್ತಿರುವಾಗ ನನ್ನ ಹಿಂದಿನ ಒಬ್ಬ ವ್ಯಕ್ತಿ ಚಪ್ಪಾಳೆ ಹೊಡೆಯುತ್ತಾ , ” ಎಲವೋ ! ಶಂಕರಭಟ್ಟ ! ನಿಲ್ಲು ನಿನ್ನನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಬರಬೇಕೆಂದು ದತ್ತಾನಂದ ಸ್ವಾಮಿಯವರ ಆಜ್ಞೆಯಾಗಿದೆ “<ಎಂದು ಜೋರಾಗಿ ಹೇಳಿದನು. ದೈವಲೀಲೆ ಆಶ್ಚರ್ಯಪಡುತ್ತ ನಾನು ನಿಂತೆನು . ನನ್ನನ್ನು ಕರೆದುಕೊಂಡು ಹೋಗಿ ಆ ವ್ಯಕ್ತಿ ದತ್ತಾನಂದ ಸ್ವಾಮಿಗಳ ಮುಂದೆ ನಿಲ್ಲಿಸಿದನು. ಕರುಣ ಸುರಿಸುವ ಕಣ್ಣುಗಳಿಂದ ಇದ್ದಂತೆ ಸ್ವಾಮಿಗಳು ನನ್ನನ್ನು ನೋಡಿ ಶೀಘ್ರವೇ ಸ್ನಾನ ಮಾಡೆಂದು ಆಜ್ಞಾಪಿಸಿದರು . ಸ್ನಾನಾನಂತರ ತಿನ್ನಲು ಮಧುರವಾದ ಹಣ್ಣುಗಳನ್ನು ಕೊಟ್ಟರು. ತಿಂದ ಮೇಲೆ ನನ್ನನ್ನು ಹತ್ತಿರಕ್ಕೆ ಕರೆದು ಮಗು ! ದತ್ತಾತ್ರೇಯರ ನವಾವತಾರವಾದ ಶ್ರೀಪಾದರಿಗೆ ನಿನ್ನ ಮೇಲೆ ಎಷ್ಟು ಕರುಣೆ ? ಅವರು ತಮ್ಮ ಅಮೃತ ಹಸ್ತದಿಂದ ನಿನಗೆ ಅಮೃತವನ್ನೇ ಕುಡಿಸಿದರು . ಅವರನ್ನು ನೀನು ಹೆಂಡ ತೆಗೆಯುವ ಗೌಡ ಕುಲದವರೆಂದು ಭಾವಿಸಿದೆ . ಅವರು ನಿನಗೆ ಕೊಟ್ಟ ಅಮೃತವನ್ನು ಹೆಂಡವೆಂದು ಭ್ರಮಿಸಿದೆ ! ಏನಾಶ್ಚಾರ್ಯ ! " ಎಂದು ಹೇಳಿದರು . ನನಗೆ ತಲೆ ತಿರುಗಿದಂತಾಯಿತು. ನಾನು ನೋಡುತ್ತಿರುವ ವಿಶ್ವವೆಲ್ಲವು ಕ್ರಮಕ್ರಮವಾಗಿ ಅದೃಶ್ಯವಾ ಗೊತ್ತಿರುವಂತೆ ತೋಚಿತು . ಅನಂತರ ಅನಂತ ಚೈತನ್ಯ ಶಕ್ತಿಯುಳ್ಳ ಮಹಾ ಸಾಗರದ ಅಲೆಗಳು ನನ್ನ ಮೇಲೆ ಬೀಳುತ್ತಿರುವಂತೆ ಅನ್ನಿಸಿತ್ತು .ಅನಂತವಾದ ಚೈತನ್ಯದಲ್ಲಿ ಅತ್ಯಂತ ಹೇಯವಾದ ಅತ್ಯಲ್ಪವಾದ ನನ್ನ ಅಹಂಕಾರ ರೂಪವಾದ ಜೀವಾತ್ಮವು ಸೇರಿಹೋಯಿತು. ನಾನು ನನ್ನನ್ನೇ ಮರೆತು ಒಂದು ದಿವ್ಯಾನಂದ ಸ್ಥಿತಿಯಲ್ಲಿ ಮುಳುಗಿ ಹೋದೆನು . ನನ್ನಲ್ಲಿರುವ ಅಪರಿಮಿತವಾದ ' ನಾನು ' ಎನ್ನುವುದು ನಶಿಸಿಹೋಗಿ ಈ ಸಮಸ್ತ ಸೃಷ್ಟಿಯು ಕೇವಲ ಸ್ವಪ್ನವೆಂದು ಅನ್ನಿಸತೊಡಗಿತ್ತು. ಇಷ್ಟರಲ್ಲಿ ಸ್ವಾಮಿಗಳು ನನ್ನ ಮೇಲೆ ಮಂತ್ರಜಲವನ್ನು ಪ್ರೋಕ್ಷಿಸಿದರು . ಪವಿತ್ರ ಭಸ್ಮವನ್ನು ನನ್ನ ಹಣೆಯ ಮೇಲೆ ತಮ್ಮ ದಿವ್ಯ ಹಸ್ತದಿಂದ ಬಳಿದರು . ನಾನು ಪ್ರಕೃತಿಸ್ಥನಾದೆ. ಕೆಲವು ಕ್ಷಣಗಳು ದಿವ್ಯಾನಂದವನ್ನು ಅನುಭವಿಸಿದೆ . ಅನಂತರ ನನಗೆ ನಾನು ಹೇಯವಾದ ಸ್ಥೂಲ ದೇಹದಲ್ಲಿಯೇ ಇದ್ದೇನೆ ಎಂಬುದರ ಅರಿವಾಯಿತು . ಸ್ವಾಮಿಗಳು, " ಒಂದಾನೊಂದು ಜನ್ಮದಲ್ಲಿ ನೀನು ಗೌಡರ ಕುಲದವನು, ನಿನ್ನ ವ್ಯಕ್ತಿತ್ವದ ಅಂತರಾಳದಲ್ಲಿ ಹೆಂಡ ಕುಡಿಯಬೇಕೆಂಬ ಕೋರಿಕೆ ಉಳಿದೇ ಇತ್ತು. ಶ್ರೀಪಾದರ ಅನುಗ್ರಹವಿಲ್ಲದಿದ್ದರೆ ನೀನು ಬ್ರಾಹ್ಮಣನಾದರೂ ಹೆಂಡ ಕುಡಿಯುವ ಕೆಟ್ಟ ಚಟಕ್ಕೆ ಮತ್ತೆ ಬಲಿಯಾಗುತ್ತಿದ್ದೆ. ಶ್ರೀಪಾದ ಅಮೃತ ದೃಷ್ಟಿ . ನಿನ್ನ ಜಾತಕದಲ್ಲಿ ಅನೇಕ ಗಂಡಾಂತರಗಳು ಇವೆ. ಶ್ರೀಪಾದರು ತಮ್ಮ ಅಮೃತ ದೃಷ್ಟಿಯಿಂದ ಅವರಿಲ್ಲವೆಂದು ಪರಿಹರಿಸುತ್ತಿದ್ದಾರೆ . ಕುದುರೆಗಳ ಮಹಿಮೆಯನ್ನು ವರ್ಣಿಸಲು ಯಾರಿಗೆ ತಾನೆ ಆಗುತ್ತದೆ ? ಅವರ ಮಹಿಮೆಯನ್ನು ವರ್ಣಿಸಲು ಪ್ರಯತ್ನಪಟ್ಟ ವೇದಗಳೇ ಮೌನ ತಾಳಬೇಕಾಯಿತು " ಎಂದು ವಿವರಿಸಿದರು . ಒಂದೆರಡು ವಿವರಿಸಿದರು ( ಮುಂದುವರೆಯುವುದು ) ಕೃಪೆ - ಶ್ರೀ ಕನ್ನೇಶ್ವರ ಪ್ರಕಾಶನ ಚುಟುಕು ಸಪ್ತಶತಿ - 119 ನಿಶ್ಯಬ್ಧದಲ್ಲಿ ನಿನಗೆ ನಿನ್ನ ಗುಂಡಿಗೆ ಶಬ್ದ ಕೇಳಿಸೀತು. ಇದಕ್ಕೆ ಬೇಕಿಲ್ಲೇನು ಬೇರೆ ಸಾಬೀತು . ಕ್ಷುದ್ರಗೊಂಡಿಹ ಮನಕೆ ರುದ್ರ ಶಬ್ದವು ಕೂಡ ಕೇಳಿಸದೇ ಹೋದೀತು - ಸಚ್ಚಿದಾನಂದ ಶ್ರೀ ಸ್ವಾಮೀಜಿ ( ಸಂಗ್ರಹ ) * ಭಾಲರಾ ಬೆಂಗಳೂರು ಜೈ ಗುರುದತ್ತ .


Share