ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 37

198
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 37
ಓಂ ನಮೋ ಹನುಮತೇ ನಮಃ

ಅರ್ಥ : ಈ ಭುಜಕೀರ್ತಿಗಳನ್ನು ಗುರ್ತಿಸಲಾರೆ. ಈ ಕಿವಿಯೋಲೆಗಳೂ ನನಗೆ ಪರಿಚಯವಿಲ್ಲ. ನಿತ್ಯವೂ ಕಾಲಿಗೆ ನಮಸ್ಕರಿಸುತ್ತಿದೆ. ಆದ್ದರಿಂದ ಆ ಕಾಲ್ಗೆಜ್ಜೆಗಳನ್ನು ಮಾತ್ರ ಗುರುತಿಸಬಲ್ಲೆ.

ಶ್ರೀರಾಮನ ಬಲಪರೀಕ್ಷೆ
315) ಸ್ವಲ್ಪ ಹೊತ್ತಾದಮೇಲೆ ರಾಮಲಕ್ಷ್ಮಣರಿಬ್ಬರೂ ಚೇತರಿಸಿಕೊಂಡರು.
1. ಆ ಸಮಯವನ್ನು ನೋಡಿಕೊಂಡು, ಸುಗ್ರೀವನು ಮಾತು ಬದಲಾಯಿಸಲು ಅದೂ ಇದೂ ಮಾತಾಡಿ, ಕೊನೆಗೆ ತನ್ನ ಸಂಕಟದ ಬಗ್ಗೆ ಹೇಳಿಕೊಳ್ಳಲು ಶುರುಮಾಡಿದ. ತನ್ನ ಕಥೆಯನ್ನೆಲ್ಲಾ ವಿವರವಾಗಿ ಹೇಳಿಕೊಂಡ.
2. ಹಾಗೆ ಹೇಳುವಾಗ ವಾಲಿಯ ಪರಾಕ್ರಮದ ಬಗ್ಗೆ ಪದೇ ಪದೇ ಹೇಳುತ್ತಿದ್ದ.
316) ವಾಲಿ ಒಂದುಸಾರಿ ದುಂದುಭಿ ಎಂಬ ರಾಕ್ಷಸನನ್ನು ಕೊಂದು, ಅವನ ಶರೀರವನ್ನು ಹತ್ತು ಮೈಲಿ ದೂರ ಬೀಳುವಂತೆ ಎಸೆದ. ಪರ್ವತದಂತೆ ಇದ್ದ
ಆ ಶರೀರವು ಬಂದು ಋಷ್ಯಮೂಕ ಪರ್ವತದ ಮೇಲೆ, ಮತಂಗ ಮಹರ್ಷಿಯ ಆಶ್ರಮದ ಪಕ್ಕದಲ್ಲಿ ಬಂದು ಬಿತ್ತು. ಮುನಿಗೆ ಕೋಪಬಂದು, ‘ವಾಲಿ
ಈ ಪರ್ವತಕ್ಕೇನಾದರೂ ಬಂದರೆ ಸಾಯಲಿ’ ಎಂದು ಶಾಪಕೊಟ್ಟ.
317) ಆಗ ಬಿದ್ದ ಆ ಅಸ್ಥಿಪಂಜರ ಇವತ್ತಿಗೂ ಅಲ್ಲೇ ಒಂದು ಬೆಟ್ಟದಂತೆ ಬಿದ್ದಿದೆ ಎಂದು ಹೇಳಿ, ಸುಗ್ರೀವನು ರಾಮನನ್ನು ಕರೆದುಕೊಂಡು ಹೋಗಿ ಅದನ್ನು ತೋರಿಸಿದ. ಅದು ನಿಜಕ್ಕೂ ಬೆಟ್ಟದಷ್ಟಿತ್ತು.
318) ಹೀಗೆ ವಾಲಿಯ ಪರಾಕ್ರಮವನ್ನು ಬಗೆಬಗೆಯಾಗಿ ಬಣ್ಣಿಸಿದ್ದರಿಂದ ಒಟ್ಟಿನಲ್ಲಿ, ಸುಗ್ರೀವನಿಗೆ ರಾಮನ ಬಲಪರಾಕ್ರಮಗಳ ಬಗ್ಗೆ ಸಂದೇಹ ಇದೆಯೇನೋ ಅನಿಸಿತು.
319) ರಾಮನು ಅದನ್ನು ಗ್ರಹಿಸಿ, ನಕ್ಕು ಆ ಅಸ್ಥಿ ಪಂಜರವನ್ನು ತನ್ನ ಕಾಲಿನ ಹೆಬ್ಬೆರಳಿನಿಂದ ಹತ್ತು ಯೋಜನ ದೂರ ಬೀಳುವಂತೆ ಚಿಮ್ಮಿದನು. ಆಗಲೂ ಸುಗ್ರೀವನಿಗೆ ನಂಬಿಕೆ ಹುಟ್ಟಲಿಲ್ಲ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share