ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 23

297
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 23
ಓಂ ನಮೋ ಹನುಮತೇ ನಮಃ

ಕಾಂತಿವೇಗ
201) ಸೂರ್ಯರಥದ ವೇಗ ಅಂದರೆ ಅದು ಬೆಳಕಿನ ವೇಗ. ಕಾಂತಿವೇಗಕ್ಕೆ ಸರಿಸಮವಾಗಿ ಓಡುತ್ತಾ ಹನುಮಂತ ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ.
202) ಕಾಂತಿಯ ವೇಗ ಎಷ್ಟು ಎಂದು ನಮ್ಮ ಮಹರ್ಷಿಗಳು ಹೇಳಿದ್ದಾರೆ.
(1) ಸಾವಿರಾರು ವರ್ಷಗಳ ಹಿಂದೆ ಜೀವಿಸಿದ್ದ ಮಹರ್ಷಿಗಳ ಸಾಂಬ ಪುರಾಣದಲ್ಲಿ ಸೂರ್ಯ ಸ್ತೋತ್ರದಲ್ಲಿ ಕಾಂತಿಯ ವೇಗವನ್ನು ಹೇಳಿದ್ದಾರೆ.
(2) ಭಾಗವತದ ಪಂಚಮ ಸ್ಕಂಧದಲ್ಲೂ ಈ ವಿಷಯದ ಉಲ್ಲೇಖ ಇದೆ.
(3) 11ನೇ ಶತಮಾನದಲ್ಲಿ ಜೀವಿಸಿದ್ದ ನನ್ನಯ್ಯಭಟ್ಟನು ತನ್ನ ಭಾರತದಲ್ಲಿ ಆ ವಿಷಯವನ್ನು ಹೇಳಿದ್ದಾನೆ.
(4) 15ನೇ ಶತಮಾನದಲ್ಲಿ ಇದ್ದ ವಿದ್ಯಾರಣ್ಯ ಸ್ವಾಮಿಗಳು ಆ ವಿಷಯವನ್ನು ಹೇಳಿದ್ದಾರೆ.
(5) ಪುನಃ ಅದೇ ವಿಷಯವನ್ನು 16ನೇ ಶತಮಾನಕ್ಕೆ ಸೇರಿದ ಶ್ರೀನಾಥನು ಹೇಳಿದ್ದಾನೆ.
(6) ಅದೇ ವಿಷಯವನ್ನು ವಿಜ್ಞಾನಿಗಳು ಪರಿಶೋಧನೆಯ ಮೂಲಕ ಪುನಃ ಕಂಡುಹಿಡಿದಿದ್ದಾರೆ.
(7) ಮಹರ್ಷಿಗಳು ಹೇಳಿರುವ ಶ್ಲೋಕ ಈ ರೀತಿ ಇದೆ –

ಯೋಜನಾನಾಂ ಸಹಸ್ರೇ ದ್ವೇ
ಶತೇ ದ್ವೇ ದ್ವೇಚ ಯೋಜನೇ೤
ಏಕೇನ ನಿಮಿಷಾರ್ಧೇನ
ಕ್ರಮಮಾಣ ನಮೋಸ್ತುತೇ೤೤
ಅಂದರೆ ಸೂರ್ಯನು ಅರ್ಧ ನಿಮಿಷದಲ್ಲಿ 2202 ಯೋಜನಗಳಷ್ಟು ದೂರ ಚಲಿಸುತ್ತಾನೆ ಎಂದರ್ಥ. (ಸಂಸ್ಕೃತದಲ್ಲಿ ನಿಮಿಷ ಎಂದರೆ 60 ಸೆಕೆಂಡುಗಳ ನಿಮಿಷ ಅಲ್ಲ.)
ಈ ಲೆಕ್ಕದ ಪ್ರಕಾರ ಕಾಂತಿಯವೇಗವು ಒಂದು ಸೆಕೆಂಡಿಗೆ 1,87,670 ಮೈಲಿಗಳು.
(8) ಇಂದಿನ ವಿಜ್ಞಾನಿಗಳ ಪ್ರಕಾರ ಕಾಂತಿಯವೇಗ ಸೆಕೆಂಡಿಗೆ 1,86,325 ಮೈಲಿಗಳು.
(9) ಇವೆರಡೂ ಎಷ್ಟು ಹತ್ತಿರ ಇದೆ ಎಂದು ಗಮನಿಸಿ.
203) ಹೀಗೆ ಕಾಂತಿವೇಗದಿಂದ ಓಡುತ್ತಾ ಆಂಜನೇಯನು ಸೂರ್ಯನ ಬಳಿ ಮೊದಲನೇ ದಿನದ ವಿದ್ಯಾಭ್ಯಾಸ ಮುಗಿಸಿದನು.
204) ಹನುಮಂತನಿಗೆ ಹೀಗೆ ಓಡಿಕೊಂಡು ವಿದ್ಯಾಭ್ಯಾಸ ಮಾಡುವ ಪದ್ಧತಿ ಹಿಡಿಸಲಿಲ್ಲ. ಎರಡನೇ ದಿನ ಬರುವಷ್ಟರಲ್ಲಿ ಅವನಿಗೆ ಒಂದು ಉಪಾಯ ಹೊಳೆಯಿತು. ಅವನು ತನ್ನ ಶರೀರವನ್ನು ಚೆನ್ನಾಗಿ ಹಿಗ್ಗಿಸಿಕೊಂಡು, ಒಂದು ಪಾದವನ್ನು ಉದಯ ಪರ್ವತದ ಮೇಲೆ, ಇನ್ನೊಂದು ಪಾದವನ್ನು ಅಸ್ತ ಪರ್ವತದ ಮೇಲೆ ಇಟ್ಟು, ತಲೆಯನ್ನು ಸೂರ್ಯನ ರಥದೊಳಗೆ ತೂರಿಸಿದ. ಹೀಗೆ ಉಳಿದ 6 ದಿನಗಳ ವಿದ್ಯಾಭ್ಯಾಸ ನಡೆಯಿತು.
205) ಹೀಗೆ 7 ದಿನಗಳಲ್ಲಿ ಸೂರ್ಯನ ಹತ್ತಿರ ಇದ್ದ ಎಲ್ಲಾ ವಿದ್ಯೆಗಳನ್ನೂ ಹನುಮಂತನು ಕಲಿತುಬಿಟ್ಟ. ಈ ಅದ್ಭುತ ಸಾಧನೆಯನ್ನು ನೋಡಿದ ಮುನಿಗಳು ಕೊಂಡಾಡಿದರು.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ  ಶ್ರೀ  ಗಣಪತಿ ಸಚ್ಚಿದಾನಂದ ಸ್ವಾಮೀಜಿ 

* ಸಂಗ್ರಹ
ಭಾಲರಾ
ಬೆಂಗಳೂರು


Share