ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 72 ಓಂ ನಮೋ ಹನುಮತೇ ನಮಃ

216
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 72
ಓಂ ನಮೋ ಹನುಮತೇ ನಮಃ

6. ಆ ವಿಮಾನವು ಹಾಗೆ ಹಾರಿಹೋಗುತ್ತಿದ್ದರೆ ನಮ್ಮ ರಾವಣಾಸುರ ಮೈಮೇಲೆ ಕೆಂಪುಬಟ್ಟೆ ಹಾಕಿಕೊಂಡು, ಕೆಂಪು ಕಣಗಿಲೆ ಹೂವಿನ ಹಾರವನ್ನು ಕೊರಳಲ್ಲಿ ಧರಿಸಿ, ಕಂಠಪೂರ್ತಿ ಎಣ್ಣೆ ಕುಡಿದು, ಆ ಎಣ್ಣೆಯನ್ನೇ ಮೈಗೆಲ್ಲಾ ಹಚ್ಚಿಕೊಂಡು, ಮತ್ತೇರಿದವನಂತೆ ಆ ವಿಮಾನದಿಂದ ಹಾರಿ ಕೆಳಗೆ ಬಿದ್ದ. ಆಗ ಅವನ ತಲೆ ಬೋಳಾಗಿತ್ತು. ತಲೆಗೆ ಕಪ್ಪುಬಟ್ಟೆ ಸುತ್ತಿಕೊಂಡಿದ್ದ.
7. ಕೆಳಗೆ ಬಿದ್ದರೂ ನಮ್ಮವನ ಮತ್ತು ಇಳಿಯಲಿಲ್ಲ. ಮತ್ತಿನಲ್ಲಿ ಕೂಗಾಡುತ್ತಾ ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಿದ್ದಾನೆ. ಇಷ್ಟರಲ್ಲಿ ಕತ್ತೆಗಳನ್ನು ಕಟ್ಟಿದ ರಥವೊಂದು ಅವನಿಗೆ ಕಾಣಿಸಿತು. ಅದರ ಮೇಲೆ ಕೂತು ಸ್ವಲ್ಪದೂರ ಹೋದಮೇಲೆ, ನಿಂತು, ಒಂದು ಕತ್ತೆಯನ್ನು ಬಿಚ್ಚಿಹಾಕಿ, ಅದರ ಮೇಲೆ ಕೂತ.
8. ಅದು ಹುಚ್ಚು ವೇಗದಿಂದ ಓಡುತ್ತಿದೆ. ನಮ್ಮವನ ಕೈಲಿ ಲಗಾಮೂ ಇಲ್ಲ. ಮೇಲಾಗಿ ಮತ್ತೇರಿಬಿಟ್ಟಿದೆ. ಸ್ವಲ್ಪ ಹೊತ್ತಿನೊಳಗೇ ಆ ಕತ್ತೆಯಮೇಲಿಂದ ತಲೆಕೆಳಗಾಗಿ ಬಿದ್ದ.
9. ತಲೆಗೆ ಪೆಟ್ಟುಬಿತ್ತು. ಬಟ್ಟೆಗಳು ಬಿಚ್ಚಿಹೋದವು. ಆ ಮತ್ತಿನಲ್ಲಿ,
ಆ ಕತ್ತಲೆಯಲ್ಲಿ ಅವನಿಗೆ ಭಯವಾಗುತ್ತಿತ್ತು. ಮತ್ತಿನಿಂದ ತೂರಾಡುತ್ತಾ ಹುಚ್ಚು ಹುಚ್ಚಾಗಿ ಅಲೆದಾಡುತ್ತಿದ್ದಾನೆ. ಹಾಗೆ ಅಲೆದಾಡುವಾಗ ನಿಲುವೆತ್ತರದ ಹೇಲಿನ ಗುಂಡಿಯೊಳಗೆ ಬಿದ್ದ.
10. ಸುಳಿಯಲ್ಲಿ ಸಿಕ್ಕಿಕೊಂಡವನಂತೆ ಅವನು ಅಮೇಧ್ಯದಲ್ಲಿ ಮುಳುಗಿಹೋಗುತ್ತಿದ್ದಾನೆ. ಅಷ್ಟರಲ್ಲಿ ಒಬ್ಬ ಕಪ್ಪು ಹೆಂಗಸು ಅಲ್ಲಿಗೆ ಬಂದಳು. ಅವಳು ಕೆಂಪು ಬಟ್ಟೆ ಉಟ್ಟಿದ್ದಾಳೆ. ಮೈತುಂಬಾ ಕೆಸರು ಬಳಿದುಕೊಂಡಿದ್ದಾಳೆ. ನಮ್ಮವನು ಮುಳುಗುತ್ತಾ, ‘ಕಾಪಾಡು’ ‘ಕಾಪಾಡು’ ಎಂದು ಕಿರುಚುತ್ತಿದ್ದಾನೆ.
11. ಕೂಡಲೇ ಅವಳು ಒಂದು ದೊಡ್ಡ ಹಗ್ಗದ ಕುಣಿಕೆಯನ್ನು ಎಸೆದಳು. ಅದು ನೇರವಾಗಿ ನಮ್ಮವನ ಕತ್ತಿನ ಹತ್ತಿರ ಬಂದು ಬಿತ್ತು. ಆ ಕಪ್ಪು ಹೆಂಗಸು ಆ ಹಗ್ಗವನ್ನು ಹಿಡಿದು ದಕ್ಷಿಣ ದಿಕ್ಕಿಗೆ ಎಳೆದುಕೊಂಡು ಹೋದಳು.
12. ಈ ಕಡೆ ನೋಡಿದರೆ, ನಮ್ಮ ಕುಂಭಕರ್ಣನ ಪರಿಸ್ಥಿತಿಯೂ ಹಾಗೇ ಇದೆ.
13. ಇನ್ನೊಂದು ಕಡೆ ನೋಡಿದರೆ ರಾವಣನ ಮಕ್ಕಳೆಲ್ಲರೂ ಎಣ್ಣೆಯನ್ನು ಬಳಿದುಕೊಂಡು ಮತ್ತಿನಿಂದ ತೂರಾಡುತ್ತಿದ್ದಾರೆ.
14. ಇಷ್ಟರಲ್ಲಿ ನಮ್ಮ ರಾವಣಾಸುರ ಒಂದು ಹಂದಿಯನ್ನೇರಿ ದಕ್ಷಿಣದಿಕ್ಕಿನಲ್ಲಿ ಕಾಣಿಸಿಕೊಂಡ. ಅವನ ಹಿಂದೆಯೇ ಇಂದ್ರಜಿತ್ತು ಒಂದು ಮೊಸಳೆಯ ಮೇಲೆ ಕೂತು ಪ್ರಯಾಣ ಮಾಡುತ್ತಿದ್ದ. ಅವನ ಹಿಂದೆಯೇ ನಮ್ಮ ಕುಂಭಕರ್ಣ ಒಂದು ಒಂಟೆಯ ಮೇಲೆ ಕೂತು ಹೋಗುತ್ತಿದ್ದಾನೆ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share