MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 181

245
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 181

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

976 . ಓಂ ಶತಾನೀಕಾಯ ನಮಃ
977 . ಓಂ ಶತಮಖಾಯ ನಮಃ
978 . ಓಂ ಶತಧಾರಾವರಾಯುಧಾಯ ನಮಃ
979 . ಓಂ ಸಹಸ್ರಪತ್ರನಿಲಯಾಯ ನಮಃ
980 . ಓಂ ಸಹಸ್ರಫಣಭೂಷಣಾಯ ನಮಃ

976. ಓಂ ಶತಾನೀಕಃ-
ಭಾ: ಶತಾನೀಕೋ ಭೂರಿಸೈನ್ಯಃ……………
ಗಣೇಶನ ಸೈನ್ಯಗಣವು ಹೆಚ್ಚಾಗಿರುವುದರಿಂದ ಅವನು ಶತಾನೀಕನು. (ಅನೀಕ – ಸೈನ್ಯ)
ಓಂ ಶತಾನೀಕಾಯ ನಮಃ

977. ಓಂ ಶತಮಖಃ-
ಭಾ: ……………………….ಶಕ್ರಃ ಶತಮಖೋ ಭವಾನ್‌೤
ಅಥವಾ ಬಹು ಸಂಖ್ಯಾನಿ ಪೂಜನಾದೀನಿ ಯಸ್ಯ ಸಃ೤೤
ಗಣೇಶನೇ ಇಂದ್ರನಾದ್ದರಿಂದ ಅವನು ಶತಮಖನು. ಅಥವಾ ಯಾರ ಪೂಜಾ ವಿಧಾನಗಳು ಅನೇಕವಿರುವುವೋ ಅವನು ಶತಮಖನು.
ಓಂ ಶತಮಖಾಯ ನಮಃ

978. ಓಂ ಶತಧಾರಾವರಾಯುಧಃ-
ಭಾ: ಶತಂ ಧಾರಾ ಅರಾಸ್ತೀಕ್ಷ್ಣಾ ಯದಾಯುಧವರಸ್ಯ ಸಃ೤
ವಜ್ರೋತ್ಕೃಷ್ಟಾಯುಧೋ ವಾ7ಪಿ ಶತಧಾರಾವರಾಯುಧಃ೤೤
ಯಾರ ಆಯುಧದಲ್ಲಿ ತೀಕ್ಷ್ಣವಾದ ನೂರು ಅಂಚುಗಳು ಇವೆಯೋ ಅವನು ಶತಧಾರಾವರಾಯುಧನು. ಅಥವಾ ಗಣೇಶನ ಕೈಯಲ್ಲಿರುವ ಆಯುಧವು ವಜ್ರಾಯುಧಕ್ಕಿಂತಲೂ ಶ್ರೇಷ್ಠವಾದುದರಿಂದಲೂ ಗಣೇಶನು ಶತಧಾರಾವರಾಯುಧನು. (ಶತಧಾರಾ ವಜ್ರಾಯುಧ)
ಓಂ ಶತಧಾರಾವರಾಯುಧಾಯ ನಮಃ
ಸಹಸ್ರಪತ್ರನಿಲಯಃ ಸಹಸ್ರಫಣಭೂಷಣಃ೤
ಸಹಸ್ರಶೀರ್ಷಾಪುರುಷಃ ಸಹಸ್ರಾಕ್ಷಸ್ಸಹಸ್ರಪಾತ್‌೤೤

979. ಓಂ ಸಹಸ್ರಪತ್ರನಿಲಯಃ-
ಭಾ: ಸಹಸ್ರಪತ್ರನಿಲಯೋ ಬ್ರಹ್ಮರಂಧ್ರಸ್ಥಪದ್ಮಗಃ೤
ಬ್ರಹ್ಮರಂಧ್ರದ ಪದ್ಮದಲ್ಲಿರುವವನು ಸಹಸ್ರಪತ್ರನಿಲಯನು.
ಓಂ ಸಹಸ್ರಪತ್ರನಿಲಯಾಯ ನಮಃ

980. ಓಂ ಸಹಸ್ರಫಣಭೂಷಣಃ-
ಭಾ: ಫಣಾಸಹಸ್ರವದ್ಭೂಷ್ಯಃ ಸಹಸ್ರಫಣಭೂಷಣಃ೤
ಸಾವಿರ ಹೆಡೆಗಳಿರುವ ಆದಿಶೇಷನನ್ನು ಅಲಂಕರಿಸಿಕೊಂಡಿರುವುದರಿಂದ ಸಹಸ್ರಫಣಭೂಷಣನು. ಅಥವಾ ಆದಿಶೇಷನಂತೆ ಪ್ರಕಾಶಿಸುತ್ತಿರುವುದರಿಂದ ಸಹಸ್ರಫಣಭೂಷಣನು.
ಓಂ ಸಹಸ್ರಫಣಭೂಷಣಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share