MP – ಆಧ್ಯಾತ್ಮಿಕ ಅಂಗಳ : 1-08-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 275

302
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 51
ಪುಟ : 275

॥ ಶ್ರೀಪಾದರಾಜಂ ಶರಣಂ ಪ್ರಪದ್ಧೇ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥

ಜಲಗಂಡವೇ ಮೊದಲಾದ ಗಂಡಾಂತರಗಳಿಂದ ರಕ್ಷಣೆ

ಗ್ರಂಥ ಪಾರಾಯಣ ಮಹಿಮೆ

ಇಷ್ಟರಲ್ಲಿ ಆಶ್ವಯುಜ ಕೃಷ್ಣ ದ್ವಾದಶಿ ಬಂತು . ಆ ದಿನ ಹಸ್ತಾನಕ್ಷತ್ರ . ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದ ಮೇಲೆ ಶ್ರೀಪಾದರು ಸ್ವಲ್ಪ ಹೊತ್ತು ಧ್ಯಾನಸ್ಥರಾದರು . ನಾನು ಹರಿಒಲೆಯನ್ನು ಹಚ್ಚಲು ಎಷ್ಟು ಪ್ರಯತ್ನ ಪಟ್ಟರೂ ಹಚ್ಚಲಾಗಲಿಲ್ಲ, ಆರಿ ಹೋಗುತ್ತಿತ್ತು . ಶ್ರೀಪಾದರು ನನ್ನನ್ನು ಇನ್ನೊಂದು ಸಲ ಸ್ನಾನ ಮಾಡಿ ಬರುವಂತೆ ಹೇಳಿದರು . ಬಂದ ಮೇಲೆ , “ ಮಗೂ ! ಶಂಕರಭಟ್ಟ ! ನಾನು ಗುಪ್ತ ರೂಪನಾಗಿ ಇರಬೇಕಾದ ಸಮಯವು ಹತ್ತಿರ ಬರುತ್ತಿದೆ . ನಾನು ಕೃಷ್ಣಾ ನದಿಯಲ್ಲಿ ಅಂತರ್ಹಿತನಾಗುತ್ತೇನೆ . ನಾನು ಈ ಕುರುವಪುರದಲ್ಲಿ ಗುಪ್ತರೂಪನಾಗಿ ತಿರುಗುತ್ತಿರುತ್ತೇನೆ . ಆಮೇಲೆ ನರಸಿಂಹ ಸರಸ್ವತಿ ಎಂಬ ಹೆಸರಿನಿಂದ ಸನ್ಯಾಸಿ ಧರ್ಮವನ್ನು ಪುನರುದ್ಧಾರ ಮಾಡುವುದಕ್ಕೆ ಬರುತ್ತೇನೆ . ನೀನು ಬರೆಯುವ ಶ್ರೀಪಾದ ಶ್ರೀವಲ್ಲಭ ಚರಿತಾಮೃತ ಎಂಬ ಮಹಾ ಪವಿತ್ರ ಗ್ರಂಥವು ಭಕ್ತರ ಪಾಲಿಗೆ ಕಲ್ಪವೃಕ್ಷವಾಗುತ್ತದೆ . ಅದು ಅಕ್ಷರಸತ್ಯ ಗ್ರಂಥವಾಗುತ್ತದೆ . ಆಕಾಶದಲ್ಲಿ ಶಬ್ದ ಮಾತ್ರ ಇರುತ್ತದೆ . ನಾನು ದಿಕ್ಕುಗಳನ್ನೇ ನನ್ನ ಅಂಬರವನ್ನಾಗಿ ಉಳ್ಳವನು . ಅದಕ್ಕೆ ನಾನು ದಿಗಂಬರನೆಂದು ಕರೆಯಲ್ಪಡುತ್ತೇನೆ .
ಮನೋಮಯ ಪ್ರಪಂಚವನ್ನು ಪರಿಶುದ್ಧಿಗೊಳಿಸಲು ಈ ಗ್ರಂಥಪಠಣೆಯು ಎಷ್ಟೊ ಸಹಾಯಕವಾಗುತ್ತದೆ . ಈ ಗ್ರಂಥವನ್ನು ಪಾರಾಯಣ ಮಾಡುವವರಿಗೆ ಇಹಪರಗಳೆರಡೂ ಲಭಿಸುತ್ತವೆ . ಇದರಲ್ಲಿಯ ಪ್ರತಿಯೊಂದು ಅಕ್ಷರವು ವೇದವಾಕ್ಕುಗಳ ಸಮಾನವೆಂದು ತಿಳಿದುಕೋ ನೀನು ಬರೆಯುವ ಸಂಸ್ಕೃತ ಪ್ರತಿ ನನ್ನ ಮಹಾಸಂಸ್ಥಾನದಲ್ಲಿ ಔದುಂಬರ ವೃಕ್ಷದ ಕೆಳಗೆ ಅನೇಕ ಆಳೆತ್ತರದ ಆಳದಲ್ಲಿ ಶಬ್ದ ಸ್ವರೂಪವಾಗಿ ನೆಲೆಸಿರುತ್ತದೆ . ಅದರಿಂದ ಹೊರಬರುವ ದಿವ್ಯ ಶಬ್ದಗಳು ಚರ್ಮಕರ್ಣಗಳಿಗೆ ಕೇಳಿಸುವುದಿಲ್ಲ , ಹೃದಯದಲ್ಲಿ ನನ್ನ ಕರೆಯನ್ನು ಸ್ವೀಕರಿಸುವವರು ಖಚಿತವಾಗಿ ನನ್ನ ದರ್ಶನಕ್ಕೆ ಬರುತ್ತಾರೆ . ನಾನು ನನ್ನ ಭಕ್ತ ಸಂರಕ್ಷಣೆಯಲ್ಲಿ ಅತಿ ಜಾಗರೂಕನಾಗಿರುತ್ತೇನೆ . ನಿನ್ನ ಸಂಸ್ಕೃತ ಪ್ರತಿಗೆ ತೆಲುಗು ಅನುವಾದವು ಕೂಡ ಬರುತ್ತದೆ . ಅದು ಬಾಪನಾರ್ಯರ 33 ನೆಯ ತಲೆಮಾರಿನಲ್ಲಿ ಬೆಳಕಿಗೆ ಬರುತ್ತದೆ . ಅದು ಅನೇಕ ಭಾಷೆಗಳಿಗೆ ಅನುವಾದಿಸಲ್ಪಡುವುದು . ಅದನ್ನು ಯಾವ ಭಾಷೆಯಲ್ಲಿ ಓದಿದರೂ ದಿವ್ಯಾನುಭವಗಳೂ , ರಕ್ಷಣೆಯೂ ಒಂದೇ ರೀತಿಯಾಗಿ ಇರುತ್ತದೆ .

ಭಕ್ತರಿಗೆ ಶ್ರೀಪಾದರ ಅಭಯ

ನೀನು ನನಗೆ ಬಹಳ ಸೇವೆಯನ್ನು ಮಾಡಿದ್ದೀಯೆ . ನಾನು ತಂದೆಯ ಕೈಯಲ್ಲಿರುವ ಮಗುವಿನಂತೆ ಇದ್ದೆನು ನನ್ನ ಮರದ ಪಾದರಕ್ಷೆಗಳನ್ನು ನಿನಗೆ ಬಹುಮಾನವಾಗಿ ಕೊಡುತ್ತಿದ್ದೇನೆ . ನೀನು ನಾನಿಲ್ಲವೆಂದು ದುಃಖಿಸಬೇಡ . ನೀನು ಮೂರು ವರ್ಷಗಳ ಕಾಲ ಇಲ್ಲಿಯೇ ಇರಬೇಕು . ಈ ಮೂರು ವರ್ಷಗಳಲ್ಲಿಯೂ ನಾನು ನನ್ನ ತೇಜೋಮಯ ರೂಪದಲ್ಲಿ ನಿನಗೆ ದರ್ಶನವನ್ನು ಕೊಡುತ್ತಿರುತ್ತೇನೆ . ನಿನಗೆ ಅನೇಕ ಯೋಗರಹಸ್ಯಗಳನ್ನು ತಿಳಿಸಿಕೊಡುತ್ತೇನೆ .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 276
ನೃತ್ಯ ವೇದಿಕೆ ಮೇಲೆ ಝಗಝಗಿಸುತಿದೆ ದೀಪ.
ಪ್ರೇಕ್ಷಾಂಗಣದ ಪೂರ ಜನಜಂಗುಳಿ.
ಅಹಂಕಾರವೆ ಅತಿಥಿ ,
ವಿಷಯ ಸುಖಗಳೇ ಅಲ್ಲಿ ಪ್ರೇಕ್ಷಕ ಗಣ.
ಬುದ್ಧಿಯದೆ ನರ್ತನ , ಇಂದ್ರಿಯಗಳ ತಾಳ ,
ಆತ್ಮಸಾಕ್ಷಿ ದೀಪ, ತಿಳಿ ಮನವೆ ಜಾಗ್ರತೆ .
ನಮ್ಮ ಪ್ರಭು ರಕ್ಷಕ
ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share