MP- ಕಲಾ ಪರಂಪರೆ- ಕಾರ್ಯಕ್ರಮದಲ್ಲಿ 24-6-21ರ ದತ್ತಾತ್ರೇಯ ರವರು.

771
Share

 

ಸಮಸ್ತ ಸಂಗೀತ ಪ್ರೇಮಿಗಳಿಗೆ ವಿಶ್ವ ಸಂಗೀತ ದಿನಾಚರಣೆಯ ಶುಭಾಶಯಗಳು, ಹಾಗೂ “ಮೈಸೂರು ಕಳಪಾರಂಪರೆಗೆ ಹಾರ್ದಿಕ ಸ್ವಾಗತಗಳು, ನಿಮ್ಮ ಈ ಪ್ರೀತಿ ಹಾಗೂ ಸಹಕಾರ ಎಂದಿಗೂ ಇರಲಿ… ಇಂದಿನ ನಮ್ಮ ನಿಮ್ಮೆಲ್ಲರ ಕಲಾ ಪರಂಪರೆಯ ಅತಿಥಿ…

ವಿದ್ವಾನ್ A. V. ದತ್ತಾತ್ರೇಯ ರವರು. ದತ್ತಾತ್ರೇಯ ರವರ ಕುಟುಂಬವೆ ಒಂದು ಸಂಗೀತ ಪರಂಪರೆಯನ್ನು ಹೊಂದಿದೆ, ಇವರ ತಂದೆ ದಿವಂಗತ ವಿದ್ವಾನ್ A. K. ವೆಂಕಟ ನಾರಾಯಣ (ಮುತ್ತಣ್ಣ )ಅಂದಿನ ದಿನಗಳಲ್ಲಿ ಮೈಸೂರು ಸಂಸ್ಥಾನದ ಅಸ್ಥಾನ ವೀದ್ವಾಂಸರಾಗಿದ್ದರೂ, ತಾಯಿ ಶ್ರೀಮತಿ ಶಂಕ್ರಮ್ಮ ಉತ್ತಮವಾದ ಶಾಸ್ತ್ರೀಯ ಸಂಗೀತದ ವಿಧೂಷಿ ಆಗಿದ್ದರು, ವಿದ್ವಾನ್ ದತ್ತಾತ್ರೇಯ ರವರ ಅಣ್ಣ ವಿದ್ವಾನ್ A. V. ಪ್ರಕಾಶ್ (ಕೊಳಲು )ಯಾರಿಗೆ ಗೊತ್ತಿಲ್ಲ ಹೇಳಿ… ಪ್ರಖ್ಯಾತ ಕೊಳಲು ವದನದಲ್ಲಿ ಹೆಸರು ಗಳಿಸಿ ಕೊನೆಯ ಉಸಿರು ಇರುವತನಕ ಕಲಾ ಸೇವೆಮಾಡುತ್ತ ದೈವದಿನರಾದರು, ಹೌದು ವೀಕ್ಷಕರೇ, ಕಛೇರಿ ಯಲ್ಲಿ ನುಡಿಸುವಾಗಲೇ ಅವರ ಪ್ರಾಣಪಕ್ಷಿ ತಾಯಿ ಶರದಾಂಬೆಯ ಮಡಿಲು ಸೇರಿತು… ಹಾಗೆ ಬಂದರೆ ದತ್ತಾತ್ರೇಯ ರವರ ತಮ್ಮ A. V. ಆನಂದ್ ಪ್ರಖ್ಯಾತ ಮಂಡೋಲಿನ್ ವಾದನವನ್ನು ನುಡಿಸುತ್ತಿದ್ದರು, ದತ್ತಾತ್ರೇಯ ರವರ ಭಾವ H. K. ನರಸಿಂಹ ಮೂರ್ತಿ ಗಳು ಫಿಟಿಲು ವಿದ್ವಾಂಸರು, ಆಕಾಶ ವಾಣಿ ಕಲಾವಿದರು.. ಹೀಗೆ ಹೇಳುತ್ತಾ ಹೋದರೆ ಪಟ್ಟಿಯೇ ಬೆಳೆಯುತ್ತದೆ ಇದು ಸಂಕ್ಷಿಪ್ತ ಮಾತ್ರ.
ವಿದ್ವಾನ್ ದತ್ತಾತ್ರೇಯ ರವರು ಕೊಳಲು, ಮ್ಯಾಂಡೋಲಿನ, ಗಿಟಾರ್, ಕೀಬೋರ್ಡ್ ಹೀಗೆ ಅನೇಕನೇಕಾ ವಾದ್ಯಗಳಲ್ಲಿ ನಿಪುಣತೆ ಹೊಂದಿ, ಸುಮಾರು 700ರಿಂದ 800ಶಿಷ್ಯರನ್ನು ಹೊಡಿರುತ್ತಾರೆ ದೇಶ ವಿದೇಶ ಗಳಿಂದಲೂ ಇವರ ಶಿಷ್ಯರು ಇರುತ್ತಾರೆ, ವಿದ್ವಾನ್ ದತ್ತಾತ್ರೇಯ ರವರು ಇಂದಿನ ಪೊಲೀಸ್ ಬ್ಯಾಂಡ್ ನಲ್ಲಿ “ಬ್ಯಾಂಡ್ ಮಾಸ್ಟರ್ “”ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಇವರ ಕಲಸೇವೆಯನ್ನು ಗುರುತಿಸಿ ಅನೇಕನೇಕಾ ಬಿರುದುಗಳು ಇವರಿಗೆ ಲಭಿಸಿದೆ, ಇವರ ನೇರ ಸಂಪರ್ಕಕ್ಕೆ.
Mob :9886174246.
9606672888.
ಸಂಗೀತ ವೀಕ್ಷಕ ಬಂಧುಗಳೇ ಇದು ಮೈಸೂರು ಕಲಾಪರಂಪರೆಯ 23ನೇ ಅವ್ರುತಿ ಹಾಗೂ ಮೈಸೂರು ಪತ್ರಿಕೆ, ಮತ್ತು ಪ್ರಸಾದ್ ಸ್ಕೂಲ್ ಆಫ್ ರಿಧಮ್ಸ್ ನ ಪ್ರಸ್ತುತಿ.
ಧನ್ಯವಾದಗಳು.
ನಿಮ್ಮೆಲ್ಲರ ನೆಚ್ಚಿನ…
C. R. ರಾಘವೇಂದ್ರ ಪ್ರಸಾದ್.
9880279791.


Share