MP ಕಲಾ ಪರಂಪರೆ,

942
Share

https://www.facebook.com/493761640834587/posts/1619032758307464/?sfnsn=wiwspmo

ಮೈಸೂರು ,ವಿ || ಎಂ.ಎಸ್ . ಜಯರಾಂ ರವರು , ಶ್ರೀ ಎಂ.ಎಸ್ . ಶೇಷಪ್ಪ ಮತ್ತು ಶ್ರೀಮತಿ ಯಶೋದಮ್ಮ ದಂಪತಿಗಳ ಸುಪುತ್ರರಾಗಿ 20-10-1955 ರಂದು ಮೈಸೂರಿನಲ್ಲಿ ಜನಿಸಿದರು . ತಮ್ಮ 10 ನೇ ವಯಸ್ಸಿನಿಂದಲೇ ತಂದೆ ವಿ || ಶೇಷಪ್ಪ ಹಾಗೂ ದೊಡ್ಡಪ್ಪ ಶ್ರೀ ಎಂ.ಎಸ್ . ರಾಮಯ್ಯನವರಲ್ಲಿ ತಾಳವಾದ್ಯಗಳಾದ ಮೃದಂಗ , ತಬಲ ಹಾಗೂ ಘಟಂ ಅಭ್ಯಾಸವನ್ನು ಪ್ರಾರಂಭಿಸಿದರು . ಇವರು , ಮೈಸೂರು ಆಕಾಶವಾಣಿಯಲ್ಲಿ “ ಬಿ – ಹೈ ” ಶ್ರೇಣಿಯ ಕಲಾವಿದರಾಗಿದ್ದು , ನಿಲಯದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ . ತಾಳವಾದ್ಯ ಬೋರ್ಡ್‌ನಲ್ಲಿ ಸದಸ್ಯರಾಗಿ ಹಾಗೂ ತಾಳವಾದ್ಯ ಪರೀಕ್ಷಗಳಿಗೆ ಪರೀಕ್ಷಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ . ಇವರು ಸರ್ಕಾರಿ ಅರಮನೆ ವಾದ್ಯಗೋಷ್ಠಿಯಲ್ಲಿ ತಬಲವಾದಕರಾಗಿ 32 ವರ್ಷ ಸೇವೆ ಸಲ್ಲಿಸಿ , 2 ವರ್ಷ ಬ್ಯಾಂಡ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ , 2015 ಅಕ್ಟೋಬರ್‌ನಲ್ಲಿ ನಿವೃತ್ತಿ ಹೊಂದಿದ್ದಾರೆ . ಇವರು ನಾಡಿನ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದರಿಗೆ ಪಕ್ಕವಾದ್ಯ ಹಾಗೂ ಉಪ ಪಕ್ಕವಾದ್ಯಗಳ ಸಹಕಾರವನ್ನು ನೀಡಿದ್ದಾರೆ . ಇವರಿಗೆ ಉಡುಪಿಯ “ ಉತ್ತಮ ಮೃದಂಗ ವಾದಕರು ” , ಡಾ || ಗಂಗುಬಾಯಿ ಹಾನಗಲ್ ರವರಿಂದ ಪ್ರಶಸ್ತಿ ಮತ್ತು “ ಲಯನಾದಾಸಕ್ತ ” ಬಿರುದು ಹೀಗೆ ಹಲವಾರು ಪ್ರಶಂಸೆಗಳು ಒದಗಿ ಬಂದಿವೆ .

ಕಾರ್ಯಕ್ರಮ ನಿರೂಪಣೆ,

ಡಾ. ಸಿ.ಆರ್. ರಾಘವೇಂದ್ರ ಪ್ರಸಾದ್ ಪ್ರಸಾದ್ ಸ್ಕೂಲ್ ಅಫ್ ರಿದಮ್ಸ್ ತಾಳವಾದ್ಯ ಪ್ರತಿಷ್ಠಾನ ಮೈಸೂರು ಫೌಂಡರ್ ಆಫ್ ದಿ ಸ್ಕೂಲ್ ಅಫ್ ರಿದಮ್ಸ್ ಮೈಸೂರು,
ಫೋನ್ ನಂಬರ್ 9880279791 ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಲಂಡನ್. ( ಸಿಲಬಸ್ ಟೀಚಿಂಗ್)


Share